Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಸಮಾಜ ಸುಧಾರಣೆಯಲ್ಲಿ ವೇಮನರ ಪಾತ್ರ ಮಹತ್ವದ್ದು-ಮಲ್ಲಪ್ಪ ಕೆ. ಯರಗೋಳ್

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ  ಮಹಾಯೋಗಿ ವೇಮನ್ ರಡ್ಡಿ  ಜಯಂತಿಯನ್ನು ಅಚರಣೆ ಮಾಡಲಾಯಿತು.


ವೇಮನ್ ರಡ್ಡಿ ಭಾವಚಿತ್ರ  ಪುಷ್ಷಾಚನೆ ಮಾಡಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ  ಮಲ್ಲಪ್ಪ ಕೆ.ಯರಗೋಳ ರವರು  ವೇಮನರು ಸರಳ ಭಾಷೆಗಳಲ್ಲಿ ನುಡಿಗಟ್ಟುಗಳನ್ನು ರಚಿಸಿ, ಜನರಿಗೆ ಮನವರಿಕೆ ಮಾಡಿಕೊಡುತ್ತಾ ಸಮಾಜ ಸುಧಾರಣೆಗೆ ಶ್ರಮಿಸಿದ್ದರು.

ಜಾತಿ, ಧರ್ಮ ಭೇದ ಭಾವವನ್ನು ತೊರೆದು ಎಲ್ಲರೂ ಒಂದು ಗೂಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಪ್ರತಿಪಾದಿಸಿದ್ದರು. ತಮ್ಮ ವಚನಗಳಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸಿ ಸಮಾಜ ಮತ್ತು ಸಮುದಾಯವನ್ನು ಎಚ್ಚರಿಸಿದ್ದರು. ಕ್ಷಣಿಕ ಸುಖಕ್ಕಾಗಿ ಸಮಾಜದ ಹಿತವನ್ನು ಬಲಿಕೊಡದೇ ಮಾನವರೆಲ್ಲಾ ಒಂದೇ ಎಂದು ಹೇಳಿದ್ದ ವೇಮನರಂತಹ ಮಹನೀಯರ ವಿಚಾರಧಾರೆಗಳನ್ನು ಇಂತಹ ಸಂದರ್ಭದಲ್ಲಿ ಸ್ಥರಿಸುವುದು ಅರ್ಥಪೂರ್ಣವಾಗಿದೆ.ವೇಮನರ ಕುರಿತು ಧಾರವಾಡದ ಕರ್ನಾಟಕ ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ ಎಂದರು.

ನಂತರ ವೇಮನ ರೆಡ್ಡಿ ಜನ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್.ಹನುಮಂತ ರೆಡ್ಡಿ ಮಾತನಾಡಿ ವೇಮನರು 17ನೇ ಶತಮಾನದ ಮಹಾಯೋಗಿ, ತತ್ವಜ್ಞಾನಿ ಮತ್ತು ಕವಿ, ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಡಿಕೋಟ ಮೂಲದವರು, ಅವರು ತಮ್ಮ ಸರಳ ತೆಲುಗು ಪದ್ಯಗಳ ಮೂಲಕ ಸಾಮಾಜಿಕ ನೀತಿ, ವಿಶ್ವ ಮಾನವೀಯತೆ ಮತ್ತು ಆತ್ಮಜ್ಞಾನದ ಸಂದೇಶವನ್ನು ಸಾರಿದ್ದಾರೆ, ಆರಂಭದಲ್ಲಿ ಲೌಕಿಕ ಭೋಗಾಸಕ್ತನಾಗಿ ಇದ್ದವರು, ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಪ್ರೇರಣೆಯಿಂದ ಜ್ಞಾನೋದಯ ಗೊಂಡು ವೈರಾಗ್ಯ ಮಾರ್ಗವನ್ನು ಅನುಸರಿಸಿ ಯೋಗಿ ಯಾಗುತ್ತಾರೆ, ಅವರ ಪದ್ಯಗಳು 'ವಿಶ್ವದಾಭಿರಾಮ ಕೇಳು ವೇಮ' ಎಂಬ ಅಂಕಿತನಾಮದಿಂದ ಪ್ರಸಿದ್ಧವಾಗಿವೆ.

ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳ ಮೂಲಕ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸಿದ ಸರ್ವಜ್ಞಕವಿಯಂತೆ ತೆಲುಗಿನಲ್ಲಿ ವೇಮನ ಕವಿ ತಮ್ಮ ವಚನಗಳಲ್ಲಿ ಬದುಕಿನ ಸಿದ್ಧಾಂತಗಳನ್ನು ತಿಳಿಸಿದ್ದರು. ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ. ರೆಡ್ಡಿ ಸಮುದಾಯಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದ್ದು, ವೇಮನರ ವಿಚಾರಧಾರೆಗಳು ಪ್ರಚಾರವಾಗಬೇಕಿದೆ ಎಂದು ಹೇಳಿದರು.

 ಈ  ಕಾರ್ಯಕ್ರಮದಲ್ಲಿ ವೇಮನ ರೆಡ್ಡಿ ಜನ ಸಂಘದ ಗೌರವ ಅಧ್ಯಕ್ಷ ವೈ.ಜಗನ್ನಾಥ ರೆಡ್ಡಿ ಉಪಾಧ್ಯಕ್ಷ ಎನ್.ಶಿವಾರೆಡ್ಡಿ, ಕಾರ್ಯಾಧ್ಯಕ್ಷ ಜಯಶಂಕರ ರೆಡ್ಡಿ, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಹಾಜರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು