Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ನಾಗರ ಪಂಚಮಿ ವಿಶೇಷ

ನಾಗರ ಪಂಚಮಿ ವಿಶೇಷ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ನಾಗರಪಂಚಮಿ ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು (2025 ರಲ್ಲಿ ಜುಲೈ 29, ಮಂಗಳವಾರ) ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ, ಹೊಸ ಬಟ್ಟೆ-ಅಲಂಕಾರವನ್ನು ಧರಿಸಿ, ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ. ನಾಗರಪಂಚಮಿಯ ಇತಿಹಾಸ, ಅಂದು ಏನು ಮಾಡಬೇಕು, ಏನು ಮಾಡಬಾರದು, ಇವೆಲ್ಲವುಗಳ ಹಿಂದಿರುವ ಶಾಸ್ತ್ರ ಇಲ್ಲಿ ನೀಡುತ್ತಿದ್ದೇವೆ.
ನಾಗರಪಂಚಮಿ
ಇವನ್ನು ಮಾಡಿ
ಉಪವಾಸ ಮಾಡಿ
ಉಪವಾಸದಿಂದ ಶಕ್ತಿ ಹೆಚ್ಚಾಗಿ ಅದರ ಫಲವೂ ಲಭಿಸುತ್ತದೆ.
ಶ್ರೀಕೃಷ್ಣ (ಕು. ಮೇಘಾ ನಕಾತೆ ಇವರ ಮಾಧ್ಯಮದಿಂದ), 2.8.2005, ಮಧ್ಯಾಹ್ನ 4.05
ನಾಗ ದೇವರಿಗೆ ಪೂಜೆ ಸಲ್ಲಿಸಿ-
ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ ರೂಪದಲ್ಲಿರುವ ಶಿವನ ಪೂಜೆಯೇ. ಆದುದರಿಂದ ಆ ದಿನ ವಾತಾವರಣದಲ್ಲಿರುವ ಶಿವ-ಲಹರಿಗಳು ಆಕರ್ಶಿತಗೊಂಡು ಆ ಜೀವಕ್ಕೆ ಇತರ 364 ದಿನಗಳ ಕಾಲ ಉಪಯುಕ್ತವಾಗುತ್ತವೆ. ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರಿಗೆ ಶಕ್ತಿ ತತ್ತ್ವ ಪ್ರಾಪ್ತವಾಗುತ್ತದೆ.


ಸ್ತ್ರೀಯರು ನಾಗ ಪ್ರತಿಮೆಯನ್ನು ಸಹೋದರನೆಂದು ಪೂಜಿಸಿ ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರ ಸಹೋದರನ ಆಯುಷ್ಯ ವೃದ್ಧಿಯಾಗುತ್ತದೆ.

ಹೊಸ ಬಟ್ಟೆ ಮತ್ತು ಅಲಂಕಾರ ಧರಿಸಿ ಇದರಿಂದ ಆನಂದ ಮತ್ತು ಚೈತನ್ಯದ ಲಹರಿಗಳು ಆಕರ್ಷಿಸಲ್ಪಡುತ್ತವೆ. ಸ್ತ್ರೀಯರು ಉಯ್ಯಾಲೆಯಲ್ಲಿ ಆಡಬೇಕು. ಇದರಿಂದ ಕ್ಷಾತ್ರಭಾವ ಮತ್ತು ಭಕ್ತಿಭಾವ ಹೆಚ್ಚಾಗಿ ಅದರಿಂದ ಸಾತ್ತ್ವಿಕತೆಯ ಲಹರಿಗಳು ಲಭಿಸುತ್ತವೆ.
ಪ್ರಾರ್ಥನೆ ಮಾಡಿ-
ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು
– ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಿಸುವಂತಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣಗಳ ಶುದ್ಧಿಯಾಗಲಿ.

ನಾಗರ ಪಂಚಮಿಯಂದು ಸಹೋದರಿಯ ಮೊರೆಯು ಈಶ್ವರನು ಆಲಿಸುತ್ತಾನೆ. ಆದುದರಿಂದ ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ದೇವರಲ್ಲಿ ಕಳಕಳಿಯಿಂದ ಮುಂದಿನಂತೆ ಪ್ರಾರ್ಥಿಸಬೇಕು – ‘ದೇವರೇ, ನನ್ನ ಸಹೋದರನಿಗೆ ಸದ್ಬುದ್ಧಿ, ಶಕ್ತಿ ಮತ್ತು ಸಾಮರ್ಥ್ಯವನ್ನು ದಯಪಾಲಿಸಿ.

ನಾಗರಪಂಚಮಿ : ಇತಿಹಾಸ -
1. ಸರ್ಪಯಜ್ಞದ ಸಮಾಪ್ತಿಯ ದಿನ : ಸರ್ಪಯಜ್ಞ ಮಾಡುತ್ತಿದ್ದ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿದ ಆಸ್ತಿಕ ಋಷಿಗಳು ಬೇಡಿದ ವರಕ್ಕನುಸಾರ ಜನಮೇಜಯ ರಾಜನು ಯಜ್ಞ ನಿಲ್ಲಿಸಿದನು
, ಮತ್ತು ಆಸ್ತಿಕ ಋಷಿಗಳು ವಿಶ್ವದಲ್ಲಿನ ಎಲ್ಲ ನಾಗಗಳಿಗೆ ಅಭಯವನ್ನು ನೀಡಿದರು

  1. ಕಾಲಿಯಾಮರ್ದನದ ತಿಥಿ : ಭಗವಾನ ಶ್ರೀಕೃಷ್ಣನು ಗೋಕುಲದಲ್ಲಿರುವಾಗ ಶ್ರಾವಣ ಶುಕ್ಲ ಪಕ್ಷ ಪಂಚಮಿಯ ದಿನದಂದು ಯಮುನಾ ನದಿಯಲ್ಲಿದ್ದ ಕಾಲಿಯಾ ಎಂಬ ನಾಗನ ಮರ್ದನವನ್ನು ಮಾಡಿದನು.
    3. 5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು
    , ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

  2. ನಾಗಗಳು ಪರಮೇಶ್ವರನ ಅವತಾರಗಳೊಂದಿಗೆ, ಅಂದರೆ ಸಗುಣ ರೂಪದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರಕ್ಕೆ ವಾಸುಕೀ ಎಂಬ ನಾಗವು ಸಹಾಯವನ್ನು ಮಾಡಿತ್ತು. ಶ್ರೀವಿಷ್ಣು ಶೇಷನಾಗನ ಶಯ್ಯೆಯ ಮೇಲೆ ಮಲಗಿರುತ್ತಾನೆ. ಶ್ರೀವಿಷ್ಣು ರಾಮನಾಗಿ ಅವತರಿಸಿದಾಗ ಅದೇ ಶೇಷನಾಗನು ಲಕ್ಷ್ಮಣನ ಅವತಾರವನ್ನು ತಾಳಿದ್ದನು. ಭಗವಾನ ಶಿವನು ಮೈಮೇಲೆ ಒಂಬತ್ತು ನಾಗಗಳನ್ನು ಧರಿಸಿದ್ದಾನೆ.

  3. ಶಿವನು ಹಾಲಾಹಲ ವಿಷ ಸೇವಿಸಿದಾಗ ಅವನಿಗೆ ಸಹಾಯ ಮಾಡಲು ಒಂಬತ್ತು ನಾಗಗಳು ಬಂದವು ಮತ್ತು ಅವುಗಳು ಸಹ ಹಾಲಾಹಲದ ಅಂಶವನ್ನು ಸೇವಿಸಿದವು. ಇದರಿಂದ ನಾಗಗಳ ಮೇಲೆ ಪ್ರಸನ್ನನಾದ ಶಿವನು ನಾಗಗಳು ಸಮಸ್ತ ಸೃಷ್ಟಿಯ ರಕ್ಷಣೆಯನ್ನು ಮಾಡಲು ನೀಡಿದ ಯೋಗದಾನಕ್ಕಾಗಿ ಮನುಷ್ಯನು ಯಾವಾಗಲೂ ನಾಗಗಳ ಬಗ್ಗೆ ಕೃತಜ್ಞನಾಗಿದ್ದು ಅವನು ನಾಗಗಳ ಪೂಜೆಯನ್ನು ಮಾಡುತ್ತಾನೆ’, ಎಂಬ ಆಶೀರ್ವಾದವನ್ನು ನೀಡಿದನು. ಅಂದಿನಿಂದ ಒಂಬತ್ತು ನಾಗಗಳು ಮನುಷ್ಯನಿಗೆ ಪೂಜನೀಯವಾದವು. ಒಂಬತ್ತು ನಾಗಗಳು ಒಂಬತ್ತು ವಿಧದ ಪವಿತ್ರಕಗಳನ್ನು (ಚೈತನ್ಯಲಹರಿಗಳು) ಗ್ರಹಣ ಮಾಡುವ ಘಟಕಗಳಾಗಿವೆ. ಅವುಗಳ ಪೂಜೆಯಿಂದ ಚೈತನ್ಯ ಲಹರಿಗಳನ್ನು ಧಾರಣೆ ಮಾಡುವ ಸಮೂಹದ್ದೇ ಪೂಜೆಯಾಗುತ್ತದೆ.
    ನಾಗರಪಂಚಮಿ
    ಪೂಜೆಯ ವಿಧಿ-
    ಮನೆಯಲ್ಲಿ ಸ್ವಚ್ಛವಾದ ಮರದ ಮಣೆಯ ಮೇಲೆ ಗಂಧ
    , ಅರಿಶಿಣ ಮತ್ತು ಕುಂಕುಮ ಇವುಗಳ ಮಿಶ್ರಣದಿಂದ ಐದು ಹೆಡೆಗಳ ನಾಗನನ್ನು ಬಿಡಿಸಬೇಕು ಅಥವಾ ರಕ್ತಚಂದನದಿಂದ ಒಂಬತ್ತು ನಾಗಗಳ ಆಕೃತಿಯನ್ನು ಬಿಡಿಸಬೇಕು. ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗವನ್ನು ಸಹ ತಯಾರಿಸಿ ಅದರ ಪೂಜೆಯನ್ನು ಮಾಡುತ್ತಾರೆ. ಕರಾವಳಿ ಭಾಗದಲ್ಲಿ ನಾಗದೇವರ ಕಲ್ಲಿನ ವಿಗ್ರಹಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ನಾಗನ ಪೂಜೆಯನ್ನು ಮಾಡುವಾಗ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಈ ಒಂಭತ್ತು ನಾಗಗಳ ಹೆಸರುಗಳನ್ನು ಉಚ್ಚರಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. ಮನೆಯ ಸದಸ್ಯರು ಹೂವು, ಗರಿಕೆ, ಅರಳು, ಕಡಲೆಕಾಳು ಮುಂತಾದ ಪದಾರ್ಥಗಳನ್ನು ಅರ್ಪಿಸಬೇಕು.


ನಾಗರಪಂಚಮಿಯಂದು ಇವನ್ನು ಮಾಡದಿರಿ-
ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು
, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ. ಆದರೆ ವರ್ಷವಿಡೀ ಈ ಕೃತಿಗಳನ್ನು ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾದರೆ ನಾಗರಪಂಚಮಿಯಂದು ಈ ಕೃತಿಗಳನ್ನು ನಿಷೇಧಿಸಿರುವ ಕಾರಣ ಮತ್ತು ಅವುಗಳನ್ನು ಮಾಡುವುದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳೋಣ.

ಅ. ನಾಗದೇವತೆಯು ಇಚ್ಛೆಯ ಪ್ರತೀಕ. ಇಚ್ಛೆಯ ಪ್ರವರ್ತಕ (ಅಂದರೆ ಇಚ್ಛೆಗೆ ವೇಗ ನೀಡುವ) ಮತ್ತು ಸಕಾಮ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಯೂ ಹೌದು. ನಾಗದೇವರು ಇಚ್ಛೆಗೆ ಸಂಬಂಧಿಸಿದ ಕನಿಷ್ಠ ದೇವತೆಯಾಗಿದ್ದಾರೆ. ನಾಗರಪಂಚಮಿಯಂದು ಸಂಬಂಧಸಿದ ತತ್ತ್ವದ ದೇವತೆಗಳಿಂದ ನಿರ್ಮಾಣವಾಗುವ ಇಚ್ಛಾ ಲಹರಿಗಳು ಭೂಮಿಯ ಮೇಲೆ ಅವತರಿಸುವುದರಿಂದ ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ.

ಈ ದಿನದಂದು ಭೂಮಿಯಲ್ಲಿರುವ ಇಚ್ಛಾಜನ್ಯ ದೇವತಾಸ್ವರೂಪ ಲಹರಿಗಳು ಘನವಾಗುವ ಪ್ರಮಾಣವೂ ಹೆಚ್ಚಿರುತ್ತದೆ. ಹೆಚ್ಚುವುದು, ಕೊಯ್ಯುವುದು, ಭೂಮಿ ಉಳುವುದು ಮುಂತಾದ ಕೃತಿಗಳಿಂದ ರಜ-ತಮಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು (ಅಂದರೆ ದೇವತಾಜನ್ಯ ಇಚ್ಛಾಲಹರಿಗಳ ಕಾರ್ಯವನ್ನು ವಿರೋಧಿಸುವ ಲಹರಿಗಳು) ವಾಯುಮಂಡಲದಲ್ಲಿ ಹೊರಸೂಸುವ ಪ್ರಮಾಣವು ಹೆಚ್ಚಾಗುವುದರಿಂದ ಈ ದಿನದಂದು ನಾಗದೇವತೆಯ ಲಹರಿಗಳಿಗೆ ತಮ್ಮ ಕಾರ್ಯ ಮಾಡುವಲ್ಲಿ ಅಡಚಣೆಗಳು ಬರಬಹುದು. ಈ ಕಾರಣದಿಂದ ನಾಗರಪಂಚಮಿಯಂದು ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೃತಿಗಳನ್ನು ಮಾಡುವುದರಿಂದ ಪಾಪ ತಗಲಬಹುದು.

ನಾಗರಪಂಚಮಿಯ ತುಲನೆಯಲ್ಲಿ ಇತರ ದಿನಗಳಂದು ಇಂತಹ ದೇವತಾಜನ್ಯ ಇಚ್ಛಾಲಹರಿಗಳು ಭೂಮಿಯತ್ತ ಬಾರದಿರುವುದರಿಂದ ಇಂತಹ ಕೃತಿಗಳನ್ನು ಮಾಡುವುದರಿಂದ ಸಮಷ್ಟಿ ಪಾಪ ತಗಲುವ ಪ್ರಮಾಣವೂ ಕಡಿಮೆಯಿರುತ್ತದೆ. ಈ ಕಾರಣದಿಂದಲೇ ಆಯಾ ದಿನದಂದು ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಕ್ಕನುಗುಣವಾಗಿ ಆಯಾ ದಿನದಂದು ಆ ದೇವತೆಯ ಉತ್ಸವ ಅಥವಾ ಹಬ್ಬವನ್ನು ಆಚರಿಸಲು ಹಿಂದೂ ಧರ್ಮವು ಕಲಿಸುತ್ತದೆ.

ಹಿಂದಿನ ಕಾಲದಲ್ಲಿ ಗೆಡ್ಡೆ-ಗೆಣಸು ಹುರಿದು, ಅಥವಾ ಬೇಯಿಸಿ ತಿನ್ನುವ ರೂಢಿಯಿತ್ತು. ಇದರಲ್ಲಿ ಹೆಚ್ಚುವ, ಕೊಯ್ಯುವ ಮತ್ತು ಕರಿಯುವ ಕೃತಿಗಳು ಇರುತ್ತಿರಲಿಲ್ಲ. ಆದುದರಿಂದ ಪಾಪ ತಗಲುವ ಪ್ರಮಾಣವೂ ಕಡಿಮೆಯಿತ್ತು.ಕಲಿಯುಗದಲ್ಲಿ ಹಿಂದಿನ ಕಾಲದ ಪರಂಪರೆಗಳನ್ನು ಪಾಲಿಸುವುದು ಕಠಿಣವಾಗಿರುವುದರಿಂದ ಪ್ರತಿಯೊಂದು ಕೃತಿಯಿಂದ ನಿರ್ಮಾಣವಾಗುವ ಪಾಪವು ನಷ್ಟ ಮಾಡಲು ಆ ಕೃತಿಯನ್ನು ಸಾಧನೆಯ ರೂಪದಲ್ಲಿ ಅಂದರೆ ನಾಮಜಪದೊಂದಿಗೆ ಮಾಡುವುದು ಆವಶ್ಯಕವಾಗಿದೆ.


ನಾಗರಪಂಚಮಿಯಂದು ಉಪವಾಸ ಮಾಡುವ ಮಹತ್ವ-
ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ತ್ಯಜಿಸಿದಳು. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.
ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ.

ನಾಗರಪಂಚಮಿಯಂದು ಸ್ತ್ರೀಯರು ಹೊಸ ಬಟ್ಟೆ ತೊಟ್ಟು, ಅಲಂಕಾರ ಧರಿಸಿ, ಮದರಂಗಿ ಏಕೆ ಹಚ್ಚಿಕೊಳ್ಳುತ್ತಾರೆ? ಸಹೋದರ ಮೃತನಾದಾಗ ಸತ್ಯೇಶ್ವರಿಗಾದ ಶೋಕವನ್ನು ನೋಡಿ ನಾಗ ದೇವರು ಪ್ರಸನ್ನರಾದರು. ಸತ್ಯೇಶ್ವರಿಯು ನಾಗ ದೇವರನ್ನು ತನ್ನ ಸಹೋದರನೆಂದು ಭಾವಿಸಿ ಪೂಜಿಸಿದಳು. ನಾಗ ದೇವರು ಸತ್ಯೇಶ್ವರಿಗೆ ಹೊಸ ಬಟ್ಟೆಗಳನ್ನು ಹಾಗೂ ಅಲಂಕಾರಗಳನ್ನು ತಂದು ನೀಡಿದರು. ಆದುದರಿಂದ ನಾಗರ ಪಂಚಮಿಯಂದು ಸ್ತ್ರೀಯರು ಹೊಸ ಬಟ್ಟೆಗಳನ್ನು ತೊಟ್ಟು, ಅಲಂಕಾರ ಧರಿಸುತ್ತಾರೆ. ನಾಗರಪಂಚಮಿಯಂದು ಉಯ್ಯಾಲೆ ಆಡುವುದರ ಮಹತ್ವ-ನಾಗರಪಂಚಮಿಯಂದು ನಾಗ ದೇವರ ಶಾಸ್ತ್ರೋಕ್ತ ಪೂಜೆ ಆದ ನಂತರ ಆನಂದದ ಪ್ರತೀಕವೆಂದು ಸ್ತ್ರೀಯರು ಉಯ್ಯಾಲೆ ಆಡುವ ಪರಂಪರೆಯಿದೆ.

ನಾಗ ದೇವರು ಸತ್ಯೇಶ್ವರಿಯ ಮುಂದೆ ಅವಳ ಮೃತ ಸಹೋದರನಾದ ಸತ್ಯೇಶ್ವರನ ರೂಪದಲ್ಲಿ ಪ್ರಕಟವಾದರು. ಆಗ ಅವಳು ಮರಗಳ ಕೊಂಬೆಗಳಿಂದ ಜೋತಾಡಿ ಆನಂದವನ್ನು ವ್ಯಕ್ತಪಡಿಸಿದಳು.

ಉಯ್ಯಾಲೆ ಆಡುವುದರ ಹಿಂದಿರುವ ಉದ್ದೇಶ ಉಯ್ಯಾಲೆ ಮೇಲೆ ಹೋದಂತೆ ಸಹೋದರನೂ ಪ್ರಗತಿಯ ಶಿಖರವನ್ನು ತಲುಪಲಿ, ಮತ್ತು ಉಯ್ಯಾಲೆ ಕೆಳಗೆ ಬಂದಂತೆ ಸಹೋದರನ ಜೀವನದಲ್ಲಿ ಬರುವ ಎಲ್ಲ ಅಡಚಣೆಗಳು ದುಃಖಗಳು ಹೋಗಲಿ. ಈ ರೀತಿ ಭಾವವನ್ನು ಇಟ್ಟುಕೊಂಡು ಸಹೋದರಿಯು ಪ್ರತಿಯೊಂದು ಕೃತಿಯನ್ನು ಮಾಡಿದರೆ, ಸಹೋದರನ 5% ಆಧ್ಯಾತ್ಮಿಕ ಪ್ರಗತಿ ಮತ್ತು 30% ವ್ಯಾವಹಾರಿಕ ಉನ್ನತಿಯಾಗುತ್ತದೆ.

ನಾಗರಪಂಚಮಿಯಂದು ಮಾಡುವ ಕೆಲವು ಕೃತಿಗಳ ಮಹತ್ವ-
ನಾಗ ಪೂಜೆಯ ಮಹತ್ವ-
1. ನಾಗಗಳಲ್ಲಿನ ಶ್ರೇಷ್ಠನಾದ
ಅನಂತನೇ ನಾನು, ಎಂದು ಗೀತೆಯಲ್ಲಿ (10.29) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.

  1. ಅನನ್ತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಮ್ಬಲಮ್ । ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ ।।


ಅರ್ಥ: ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಬತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.

  1. ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಎಂಬುದೇ ಕಲಿಕೆಯಿರುತ್ತದೆ.

  2. ನಾಗರಪಂಚಮಿಯ ದಿನವನ್ನು ಬಿಟ್ಟು ಇತರ ದಿನಗಳಲ್ಲಿ ನಾಗಗಳಲ್ಲಿ ತತ್ತ್ವಗಳು ಅಪ್ರಕಟವಾಗಿರುತ್ತವೆ. ನಾಗರಪಂಚಮಿಯಂದು ತತ್ತ್ವಗಳು ಪ್ರಕಟ ರೂಪದಲ್ಲಿ ಕಾರ್ಯನಿರತವಾಗುವುದರಿಂದ ಪೂಜಕನಿಗೆ ಲಾಭವಾಗುತ್ತದೆ.

  3. ಗಣಪತಿಯ ಹೊಟ್ಟೆಯನ್ನು ಸುತ್ತುವರಿದಿರುವ ಹಳದಿ ನಾಗ ಎಂದರೆ ಜಾಗೃತ ವಿಶ್ವಕುಂಡಲಿನಿಯ ಪ್ರತೀಕ. ಮನುಷ್ಯರಲ್ಲಿಯೂ ಕುಂಡಲಿನಿಯನ್ನು ನಾಗರೂಪವೆಂದು ಪರಿಗಣಿಸಲಾಗಿದೆ.


ನಾಗರಪಂಚಮಿಯಂದು ಹುತ್ತದ ಪೂಜೆಯ ಮಹತ್ವ-
ನಾಗರಪಂಚಮಿಯಂದು ನಾಗಗಳಿರುವ ಹುತ್ತಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಹುತ್ತದಲ್ಲಿ ನಾಗನ ವಾಸವಿರುವುದರಿಂದ ಅಲ್ಲಿಯ ವಾತಾವರಣದಲ್ಲಿಯೂ ಅದರ ಸೂಕ್ಷ್ಮ ಪರಿಣಾಮವಾಗುತ್ತದೆ.


ನಾಗಗಳ ಆಧ್ಯಾತ್ಮಿಕ ಮಹತ್ವ-
ಕಶ್ಯಪ ಋಷಿ ಮತ್ತು ಕದ್ರೂ ಇವರಿಂದ ಎಲ್ಲ ನಾಗಗಳ ನಿರ್ಮಿತಿಯಾಯಿತು. ಶಿವನು ಎಲ್ಲ ನಾಗಗಳ ಅಧಿಪತಿಯಾಗಿದ್ದಾನೆ. ಹೆಚ್ಚಿನ ನಾಗಗಳು ಶಿವನ ಉಪಾಸನೆಯನ್ನೇ ಮಾಡುತ್ತವೆ. ಕೆಲವು ನಾಗಗಳು ವಿಷ್ಣುವಿನ
, ಕೆಲವು ನಾಗಗಳು ಶ್ರೀಗಣೇಶನ ಉಪಾಸನೆಯನ್ನು ಮಾಡುತ್ತವೆ.

ತ್ರಿಗುಣಗಳಂತೆ ನಾಗಗಳಲ್ಲಿ ಮೂರು ವಿಧಗಳಿವೆ-
ತಾಮಸಿಕ ನಾಗ : ಈ ನಾಗಗಳು ಮುಖ್ಯವಾಗಿ ಕಪ್ಪು ಬಣ್ಣದ್ದಾಗಿದ್ದು ಅವು ಪಾತಾಳದ ನಾಗಲೋಕದಲ್ಲಿ ವಾಸಿಸುತ್ತವೆ. ದೊಡ್ಡ ಅನಿಷ್ಟ ಶಕ್ತಿಗಳು ಈ ನಾಗಗಳನ್ನು ಸೂಕ್ಷ್ಮ ಯುದ್ಧದಲ್ಲಿ ಶತ್ರುಗಳ ಮೇಲೆ ವಿಷಪ್ರಯೋಗ ಮಾಡಲು ಶಸ್ತ್ರಗಳಂತೆ ಉಪಯೋಗಿಸುತ್ತವೆ. ಪಾತಾಳದ ನಾಗಗಳು ಪೃಥ್ವಿಯ ಮೇಲಿನ ನಾಗಗಳಿಗಿಂತ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯಶಾಲಿ ಮತ್ತು ಸಾವಿರ ಪಟ್ಟು ವಿಷಕಾರಿಯಾಗಿರುತ್ತವೆ.


ರಾಜಸಿಕ ನಾಗ : ಈ ನಾಗಗಳು ಪೃಥ್ವಿಯ ಮೇಲೆ ವಾಸಿಸುತ್ತದೆ. ನಾಗಯೋನಿಯಲ್ಲಿ ಜನಿಸಿದ್ದರಿಂದ ಈ ನಾಗಗಳ ಆಚರಣೆಯು ಸಾಮಾನ್ಯ ನಾಗಗಳಂತೆ ಇರುತ್ತದೆ. ಅವು ಕಪ್ಪು, ನೀಲಿ, ಕಂದು, ಚಾಕಲೇಟ ಮುಂತಾದ ಬಣ್ಣದ್ದಾಗಿರುತ್ತವೆ.

ಸಾತ್ತ್ವಿಕ ನಾಗ : ಈ ನಾಗಗಳು ದೈವೀಯಾಗಿರುವುದರಿಂದ ಅವು ಶಿವಲೋಕದ ಸಮೀಪದಲ್ಲಿರುವ ದೈವೀ ನಾಗಲೋಕದಲ್ಲಿ ವಾಸಮಾಡುತ್ತವೆ. ಅವುಗಳ ಬಣ್ಣ ಹಳದಿಯಿರುತ್ತದೆ ಮತ್ತು ತಲೆಯ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನಾಗಮಣಿಯಿರುತ್ತದೆ. ಸಾತ್ತ್ವಿಕ ನಾಗವು ಪಾತಾಳದ ನಾಗಗಳ ತುಲನೆಯಲ್ಲಿ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯವುಳ್ಳದ್ದಾಗಿರುತ್ತದೆ. ಸಾತ್ತ್ವಿಕ ನಾಗಗಳನ್ನು ವಿವಿಧ ದೇವತೆಗಳು ಧರಿಸಿದ್ದಾರೆ. ಶಿವನ ಕೊರಳಲ್ಲಿ ವಾಸುಕಿ ಎಂಬ ನಾಗವಿದೆ.

ಗಣಪತಿಯ ಹೊಟ್ಟೆಗೆ ಸುತ್ತು ಹಾಕಿದ ಜಾಗೃತ ವಿಶ್ವಕುಂಡಲಿನಿಯ ಪ್ರತೀಕವಾಗಿರುವ ಹಳದಿ ನಾಗ ಎಂದರೆ ಪದ್ಮನಾಭ. ಶ್ರೀವಿಷ್ಣು ಶೇಷನಾಗನ ಶಯ್ಯೆಯ ಮೇಲೆ ಮಲಗಿರುತ್ತಾನೆ. ಸಾತ್ತ್ವಿಕ ನಾಗಗಳು ಸಿದ್ಧ ಮತ್ತು ಋಷಿಮುನಿಗಳ ಆಧೀನದಲ್ಲಿರುತ್ತವೆ. ಅವು ಅವರ ಆಜ್ಞೆಯ ಪಾಲನೆಯನ್ನು ಮಾಡುತ್ತವೆ. ಹಳದಿ ನಾಗಗಳು ಉಚ್ಚ ದೇವತೆಗಳ ಉಪಾಸಕರಾಗಿರುವುದರಿಂದ ಅವುಗಳಲ್ಲಿ ದೈವಿ ಬಲವಿರುತ್ತದೆ. ಆದುದರಿಂದ ಅವರಿಗೆ ಆಶೀರ್ವಾದ ನೀಡುವ, ಅಂದರೆ ಸಂಕಲ್ಪಕ್ಕನುಸಾರ ಕಾರ್ಯವನ್ನು ಮಾಡುವ ಸಾಮರ್ಥ್ಯ ಪ್ರಾಪ್ತವಾಗಿದೆ.

ಆಧಾರ ಗ್ರಂಥ: ಈ ಮಾಹಿತಿಯನ್ನು ಸನಾತನದ ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರಗ್ರಂಥದಿಂದ ಆರಿಸಲಾಗಿದೆ.
ಆಧಾರ : Sanatan.org ಸಂಗ್ರಹ-ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು