Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಾಲ ಮಾಡಿ ಅನಾಥರನ್ನು ರಕ್ಷಿಸುತ್ತಿರುವ ನಾಗರಾಜ ನಾಯ್ಕ- ಗಣೇಶ ಪಿ. ನಾಡೋರ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಲ ಮಾಡಿ ಅನಾಥಾಶ್ರಮ ನಿರ್ಮಾಣ, ಬದುಕೆ ಸೇವೆಗೆ ಅರ್ಪಣೆ. ಇತಿಹಾಸ ನಿರ್ಮಿಸಿದ ಅನಾಥ ರಕ್ಷಕ ನಾಗರಾಜ ನಾಯ್ಕ-ಲೇಖಕರು: ಗಣೇಶ ಪಿ. ನಾಡೋರ

ಸುಲಭದ ಕೆಲಸಕ್ಕೇನು ಜಗತ್ತೇ ನಿಂತಿರುತ್ತದೆ. ಆದರೆ ಸವಾಲಿನ ಕೆಲಸಕ್ಕೆ ಹೆಗಲು ಕೊಡುವವರಿಗಾಗಿ ಇತಿಹಾಸ ಕಾಯುತ್ತಿರುತ್ತದೆ! ಅನಾಥರನ್ನು ರಕ್ಷಿಸಿ ಸಲಹುವ ಕ್ಷೇತ್ರದಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಕಾಣಬಹುದು. ಅವರಲ್ಲಿ ಗೆಳೆಯ, ನಮ್ಮ ಜಿಲ್ಲೆಯ ನಾಗರಾಜ ನಾಯ್ಕ ಅವರೂ ಒಬ್ಬರು ಎಂಬುದು ಹೆಮ್ಮೆಯ ಸಂಗತಿ.

ಸ್ವಂತ ಅಣ್ಣತಮ್ಮಂದಿರಿಗೇ ತುತ್ತು ಊಟ ಬಡಿಸುವ ಸಂದರ್ಭ ಬಂದರೆ ಸಾವಿರ ಸಲ ಯೋಚಿಸುವ ಇಂದಿನ ದಿನಮಾನದಲ್ಲಿ, ನೂರಾರು ಅನಾಥರಿಗೆ ದಿನಾಲೂ ಊಟ ವಸತಿ ಕೊಟ್ಟು ಕಾಪಾಡುವ ಗೆಳೆಯ ನಾಗರಾಜರು ನನಗೆ ವಿಸ್ಮಯರಾಗಿ ಕಾಣಿಸುತ್ತಾರೆ!

ಮೈಮೇಲೆ ಗಾಯ ಕೊಳೆತು ಬೀದಿಗೆ ಬಿದ್ದವರನ್ನು ಮಾತನಾಡಿಸುವುದಿರಲಿ ನೋಡುವುದೂ ನಮ್ಮಂತಹ ಸಾಮಾನ್ಯರಿಗೆ ಕಷ್ಟ. ಆದರೆ, ಅವರು ಸ್ವಲ್ಪವೂ ಅಸಹ್ಯ ಮಾಡಿಕೊಳ್ಳದೆ ಅಂತವರನ್ನು ಎತ್ತಿ ತಂದು, ನಿರ್ಮಲ ಮನಸ್ಸಿನಿಂದ ಶುಶ್ರೂಷೆ, ಆರೈಕೆ ಮಾಡಿ ತಮ್ಮ ಆಶ್ರಮದಲ್ಲಿ  ಅನ್ನ ನೀರು ಸೂರು ಒದಗಿಸಿ ಬದುಕುವಂತೆ ಮಾಡುತ್ತಾರೆ. ತಂದೆಯ ಮಡಿಲಿನ ಬೆಚ್ಚನೆಯ ಭಾವ ಒದಗಿಸುತ್ತಾರೆ. ಮಡಿದವರಿಗೆ ಮಗನ ಸ್ಥಾನದಲ್ಲಿ ನಿಂತು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುತ್ತಾರೆ.

ಮೂಲತಃ ಅಂಕೋಲಾ ತಾಲೂಕಿನ ಕೆಂದಿಗೆ ಎಂಬ ಕುಗ್ರಾಮದವರಾದ ಅವರ ಅನಾಥಾಶ್ರಮವಿರುವುದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ. ನಾಗರಾಜ ನಾಯ್ಕರ ದಯೆ, ಪ್ರೀತಿ, ಕಾಳಜಿಯ ಸ್ವಭಾವದಿಂದ ಹಾಗೂ ನಿರಂತರ ಹನ್ನೆರಡು ವರ್ಷಗಳ ಶ್ರಮದ ಫಲವಾಗಿ 'ಡಾ. ಪುನೀತ್ ರಾಜಕುಮಾರ್ ಆಶ್ರಯಧಾಮ' ಫಲಕದೊಂದಿಗೆ ತಲೆಯೆತ್ತಿ ಇತಿಹಾಸ ನಿರ್ಮಿಸಿದೆ.


ನಮ್ಮ ಜಿಲ್ಲೆಯಲ್ಲಿ ಹೀಗೆ ಬೀದಿಯಲ್ಲಿ ಬಿದ್ದ ಅನಾಥರನ್ನು ರಕ್ಷಿಸಿ ಆಶ್ರಯ ನೀಡುವ ಅನಾಥಾಶ್ರಮ ಇದೊಂದೇ! ಅಷ್ಟೇ ಏಕೆ ಹತ್ತಿರದ ಹಾವೇರಿ
, ಶಿವಮೊಗ್ಗ ಜಿಲ್ಲೆಯವರೂ ಇದೇ ಆಶ್ರಮವನ್ನು ಆಶ್ರಯಿಸುತ್ತಾರೆ.

12 ವರ್ಷದ  ಹಿಂದೆ ಶಿರಸಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಅನಾಥರಿಗೆ ಆಶ್ರಯ ತಾಣವಾಗಿಸುತ್ತಾರೆ. ನಂತರ ಸಿದ್ದಾಪುರದ ಕೆಲವು ಕಡೆ ಬಾಡಿಗೆ ಜಾಗಕ್ಕೆ ಆಶ್ರಮ ಸ್ಥಳಾಂತರವಾಗುತ್ತದೆ. ಈಗ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ನೆಲೆಯೂರಿದೆ. ಯಾಕೆ ನೆಲೆಯೂರಿದೆ ಅಂದೆನೆಂದರೆ, ಹಿಂದಿನ ಸ್ಥಳದಲ್ಲಿ ಆಶ್ರಮದ ಅಕ್ಕ ಪಕ್ಕದ ಜನರಿಂದಾದ ಕೆಟ್ಟ ಅನುಭವಗಳಿಂದ ಬೇಸತ್ತು ಸಾಲ ಸೋಲ ಮಾಡಿ ಸ್ವಂತ ನೆಲ ಖರೀದಿಸಿ ಆಶ್ರಮ ಕಟ್ಟಡನಿರ್ಮಿಸುತ್ತಿದ್ದಾರೆ.

ಮೂರು ಜಿಲ್ಲೆಯ ಜನರೂ ಬೀದಿಯಲ್ಲಿ ಅನಾಥರನ್ನು ಕಂಡಾಗ ನಾಗರಾಜ ನಾಯ್ಕರಿಗೆ ಕಾಲ್ ಮಾಡಿ ತಿಳಿಸುತ್ತಾರೆ. ಆಗ ಒಂದು ಕ್ಷಣವೂ ತಡಮಾಡದೆ ಅವರು ಅನಾಥ ರಕ್ಷಣೆಗೆ ಧಾವಿಸುತ್ತಾರೆ. ಅವರ ಗಾಯ ತೊಳೆದು ಮುಲಾಮು ಹಚ್ಚುತ್ತಾರೆ.  ಮನಸ್ಸಿಗಾದ ಗಾಯಕ್ಕೂ ಚಿಕಿತ್ಸೆ ಕೊಡಿಸುತ್ತಾರೆ. ಊಟ ವಸತಿಯೊಂದಿಗೆ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಅದಕ್ಕೆಲ್ಲ ದುಡ್ಡು ಬೇಡವೇ?! ನಾಗರಾಜ ನಾಯ್ಕರೇನು ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿಲ್ಲ. ಅಲ್ಲದೆ, ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಕಿರುಕುಳಕ್ಕೆ 'ಅನಾಥ'ರಾದವರು. ಒಂಟಿಯಾಗಿ ಅಲೆಯುತ್ತ, ಸಣ್ಣಪುಟ್ಟ ಕೆಲಸ ಮಾಡುತ್ತ ಬದುಕು ಕಟ್ಟಿಕೊಂಡರು. ಅವರಿಗೂ ಸಂಸಾರವಿದೆ.

ಈಗ ಆಶ್ರಮದಲ್ಲಿ 80ಕ್ಕೂ ಅಧಿಕ ಅನಾಥರಿದ್ದಾರೆ. ಇನ್ನೂ ಬರುತ್ತಿರುತ್ತಾರೆ. ಇದಕ್ಕೆಲ್ಲ ಪ್ರತಿ ತಿಂಗಳೂ ಖರ್ಚಿಗೆ ಬೇಕಾಗುವ ಹಣ ಎಷ್ಟು ಗೊತ್ತಾ? 4.30 ರಿಂದ 5 ಲಕ್ಷ ರೂಪಾಯಿಗಳು. ಈ ಹಣಕ್ಕೆ ನಾಗರಾಜರು ದಾನಿಗಳನ್ನೇ ಅವಲಂಬಿಸಿದ್ದಾರೆ.


ಸರ್ಕಾರ ಹಾಗೂ ಕಾರ್ಪೊರೇಟ್ ಜಗತ್ತು ಒಂಚೂರೂ ಸಹಾಯಧನ ಒದಗಿಸಿಲ್ಲ. ನಮ್ಮ ನಿಮ್ಮಂತವರು ಕೊಟ್ಟರೆ ಅನಾಥರಿಗೆ ಬದುಕು. ದಿನ ಬೆಳಗಾದರೆ ನಾಗರಾಜರು ಸಹಾಯದ ನಿರೀಕ್ಷೆಯಲ್ಲಿ ಊರೂರು ಅಲೆಯುತ್ತಾರೆ. ಸಾಮಾನ್ಯವಾಗಿ ಒಂದು ಕೇಜಿ ಅಕ್ಕಿ ಅಥವಾ 10 ರಿಂದ 100 ರೂ. ಕೊಡುವವರು ಸಿಗುತ್ತಾರೆ. ದೊಡ್ಡ ಮಟ್ಟದ ಸಹಾಯ ಮಾಡುವವರ ಕೊರತೆಯಿದೆ. ಹಾಗಾಗಿ ಸಂಪನ್ಮೂಲ ಸಂಗ್ರಹದ ಅಲೆದಾಟದಲ್ಲಿ ಅವರ ಜೀವನದ ಹೆಚ್ಚಿನ ಸಮಯ ಕಳೆದು ಹೋಗುತ್ತಿದೆ. ಆದರೂ ಬೇಕಾದಷ್ಟು ಸಂಗ್ರಹವಾಗದೆ ಸಾಲವನ್ನು ಮಾಡಿಯಾದರೂ ಅನಾಥರನ್ನು ಸಾಕುತ್ತಿದ್ದಾರೆ.

ಇಂತಹ ನಾಗರಾಜರಿಗೆ, ಅವರ ಆಶ್ರಮಕ್ಕೆ ನಾವೆಲ್ಲರೂ ಧನಸಹಾಯ ಮಾಡಬೇಕು. ಜಾತಿ, ಮತ, ಪಂಥ ಮುಂತಾದ ಅಹಂಗಳನ್ನು ಬದಿಗಿಟ್ಟು ನೆರವಿಗೆ ಧಾವಿಸಬೇಕು. ಈ ರೀತಿಯ ಸೇವೆ ಯಾರಿಂದಾದರೂ ಮಾಡಲು ಸಾಧ್ಯವೇನ್ರಿ? ದೇವರು ದಿಂಡಿರು, ಹಬ್ಬ ಹರಿದಿನ, ಜಾತ್ರೆ ಪಾತ್ರೆ, ಹುಟ್ಟಿದ ಹಬ್ಬ, ಸತ್ತ ತಿಥಿ, ಆ ಸಮಾರಂಭ, ಈ ಪಾರ್ಟಿ, ಪ್ರವಾಸ, ತೀರ್ಥಯಾತ್ರೆ ಮುಂತಾಗಿ ವರ್ಷವಿಡೀ ಸಾವಿರಾರು ರೂಪಾಯಿ ಚೆಲ್ಲುತ್ತೇವೆ.

ಆದರೆ, ಬೀದಿಯಲ್ಲಿ ಬಿದ್ದ ಅನಾಥನನ್ನು ನೋಡದೆ ಮುಂದೆ ಹೋಗುತ್ತೇವೆ. ಹೀಗೆ ಹೋಗುವಾಗ ನಮ್ಮೊಳಗೊಂದು ಅಪರಾಧಿ ಪ್ರಜ್ಞೆ ಕಾಡುವುದಿಲ್ಲವೇ? ಆ ಅಪರಾಧಿ ಭಾವವನ್ನು ನಾಗರಾಜ ನಾಯ್ಕರು ತೊಳೆದು ಹಾಕುವುದಿಲ್ಲವೇ? ನನ್ನ ಕೇಳಿದರೆ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಉತ್ಪನ್ನದಲ್ಲಿ ಸಣ್ಣದಾದರೂ ಧನಸಹಾಯ ಮಾಡಬಹುದು; ಮಾಡಬೇಕು. ಉಳ್ಳವರು ಪ್ರತಿ ವರ್ಷ ದೊಡ್ಡ ಮೊತ್ತ ನೀಡಿ ಸಮಾಜದ ಋಣ ತೀರಿಸಬೇಕು.

ನಾಗರಾಜರ ಈ ಎಲ್ಲ ಕಾರ್ಯಗಳಿಗೆ ಅವರ ಪತ್ನಿ ಮಮತಾ ನಾಯ್ಕ ಬೆಂಬಲವಾಗಿ ನಿಂತಿದ್ದಾರೆ. ಆಶ್ರಮದ ಮೇಲ್ವಿಚಾರಕಿ ಅವರೇ! ದಂಪತಿ ಮಾಡುತ್ತಿರುವ ಈ ಸಾಮಾಜಿಕ ಕಾರ್ಯ ಬಹು ಅಮೂಲ್ಯವಾದದ್ದು. ಇವರಿಗೆ ಒಳಿತಾಗಲಿ ಎಂದೆಂದೂ. ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಲೇಖನ-ಗಣೇಶ ಪಿ. ನಾಡೋರ.


PUNITH RAJKUMAR ASHRAYADHAMA ANATHASHRAMA SEVA SAMITI
A/C NO : 40918142470
IFSC CODE  : SBIN0040131
BANK NAME : STATE BANK OF INDIA
BRANCH : SIDDAPUR

UPI ID : 9481389187@ybl
GOOGLE  PAY & PHONE PAY :
9481389187        


          ‌‌‌‌‌ಹೆಚ್ಚಿನ ಮಾಹಿತಿಗಾಗಿ
ಡಾ. ನಾಗರಾಜ ನಾಯ್ಕ, ಮುಖ್ಯಸ್ಥರು, ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ದೇವಸ್ಥಳ
, ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) – 581355.
ಸಂಪರ್ಕಿಸಲು ಮೊ. 9481389187
, 8073197439

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು