Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಇದೇ 5ರಂದು ರಥಸಪ್ತಮಿ; ಸಾಮೂಹಿಕ ಸೂರ್ಯ ನಮಸ್ಕಾರ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ;
ಬರುವ ಇದೆ ಐದರಂದು ಜಿಲ್ಲಾ ಯೋಗ ಸಂಸ್ಥೆ ,ಚಿತ್ರದುರ್ಗಚಿತ್ರದುರ್ಗ ರೋಟರಿ ಕ್ಲಬ್ ಫೋರ್ಟ್ ,ಇನ್ನರ್ವಿಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಚಿತ್ರದುರ್ಗ ಜಿಲ್ಲಾ ವೀರಶೈವ ಸಮಾಜ  ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯವನಲ್ಲಿ ಬೆಳಗ್ಗೆ 5-30ರಿಂದ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರಥಸಪ್ತಮಿಯ ಮಹತ್ವ-
ರಥಸಪ್ತಮಿಯನ್ನು ಅಚಲ ಸಪ್ತಮಿ, ಮಾಘಸಪ್ತಮಿ ಅಥವಾ ಸೂರ್ಯ ಸಪ್ತಮಿ ಎಂದು ಕರೆಯುವರು.ರಥಸಪ್ತಮಿಯನ್ನು ಬಹು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವುದು ಒಂದು ವಿಶೇಷ. ಹಾಗೇ  ಇದು ವಿಶಿಷ್ಟ ಹಬ್ಬವಾಗಿದೆ. ರಥಸಪ್ತಮಿಯು ಮಾಘ ಮಾಸದ ಶುಕ್ಲ ಪಕ್ಷದ 7ನೇ ತಿಥಿ ಅಂದರೆ ಸಪ್ತಮಿಯ ದಿವಸದಂದು ಆಚರಿಸಲ್ಪಡುವ ಪದ್ಧತಿಯಾಗಿದೆ. ಸೂರ್ಯನ ಜನ್ಮದಿನವೆಂತಲೂ ಭಾವಿಸಲಾಗಿದೆ.

ನಮ್ಮ ರಾಷ್ಟ್ರದಲ್ಲಿ ಅಲ್ಲದೆ ಜಗತ್ತಿನ ಅನೇಕ ಭಾಗಗಳಲ್ಲಿಯೂ ರಥಸಪ್ತಮಿಯನ್ನು ಆಚರಿಸುವರು. 108 ನಾಮ ಜಪ ಅಲ್ಲದೆ ವಿಶೇಷವಾಗಿ ಯೋಗ ಸಾಧಕರು 108 ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ .ಈ ದಿನ ಅತ್ಯಂತ ಮಹತ್ವದ್ದಾಗಿರುವುದೇಕೆಂದರೆ ಸೂರ್ಯ  ತನ್ನ ಪಥವನ್ನು ಅಂದರೆ ದಿಕ್ಕನ್ನು ಉತ್ತರಾಯಣದ ಕಡೆ ಬದಲಿಸುವ ದಿನ. ಇಂದಿನಿಂದ ಸೂರ್ಯನ ಓಜಸು, ತೇಜಸ್ಸು ಹೆಚ್ಚು ಪ್ರಖರತೆಯನ್ನು ಉಂಟು ಮಾಡಿ ಸಕಲ ಚರಾಚರ ವಸ್ತುಗಳ ಮೇಲೆ ಪ್ರಕೃತಿ ಮತ್ತು ಮಾನವನ ಬದುಕಿಗೆ ಚೈತನ್ಯವನ್ನು ಉಂಟುಮಾಡುವ ದಿನ.

   ಸೂರ್ಯನು ಆರೋಗ್ಯದಾತನೆಂಬುದಾಗಿ, ವೇದವು ಅವನನ್ನು ಪ್ರಾರ್ಥಿಸಿದೆ. ವೇದಗಳು ಅಲ್ಲದೆ ಪುರಾಣಗಳು ಸಹ ಸೂರ್ಯನನ್ನು ರೋಗನಿವಾರಕನೆಂದು ಸಾರಿವೆ. ಸರ್ವವ್ಯಾಧಿಗಳು, ಮಹಾವ್ಯಾಧಿಗಳು ನಿವಾರಣೆಯಾಗುತ್ತದೆ ಎಂದು  ಜನರಲ್ಲಿ ನಂಬಿಕೆ .ಸೂರ್ಯ ನಮಸ್ಕಾರಗಳಿಂದ ಬಲಸಂವರ್ಧನೆ, ಆರೋಗ್ಯ, ಆಯುಷ್ಯಾಭಿವೃದ್ದಿ, ಮನಃಶಕ್ತಿಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗೆ ಆಗುತ್ತದೆ.

ಯೋಗ ಸಾಧಕರು ಸೇರಿದಂತೆ ಇತರೆ ಆಸಕ್ತಿಯುಳ್ಳವರು ಬನ್ನಿ. ನಾವೆಲ್ಲರೂ ಒಂದಾಗಿ ಸೇರಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ. ನಮ್ಮ- ನಿಮ್ಮ  ಆರೋಗ್ಯ ವೃದ್ಧಿಗೆ ಸಂಕಲ್ಪ ಮಾಡೋಣ. ಹೆಚ್ಚಿನ ಮಾಹಿತಿಗಾಗಿ 99862 95285, 94481 44871, 9620653375.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು