Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಪಟ್ಟಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಹಾಗೂ  ಈದ್ ಮಿಲಾಹಿದ್ ಕುರಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯ ಡಿವೈಎಸ್ಪಿ ಯಾದ ಮಲ್ಲೇಶ್ ದೊಡ್ಮನಿ ಇವರ ನೇತೃತ್ವದಲ್ಲಿ ನಡೆದ ಪೊಲೀಸ್ ಪಥಸಂಚಲನ  ಮಾಡುವುದರೊಂದಿಗೆ  ಸಾರ್ವಜನಿಕರಲ್ಲಿ ಯಾವುದೇ ಭಯ ಭೀತಿ ಇಲ್ಲದೆ ಧಾರ್ಮಿಕ ಹಬ್ಬಗಳನ್ನು ಉತ್ಸಾಹದಿಂದ ಆಚರಣೆಗಳನ್ನು  ಮಾಡಿ ನಿಮ್ಮ ಜೊತೆ ಪೊಲೀಸ್ ಇಲಾಖೆ ಯಾವಾಗಲೂ ರಕ್ಷಣೆಯಲ್ಲಿ ಇರುತ್ತದೆ
,ಎಂಬ ಸಂದೇಶದೊಂದಿಗೆ ಕೂಡ್ಲಿಗಿ ಪಟ್ಟಣದ ಅನೇಕ ವಾರ್ಡ್ ಗಳ ಮೂಲಕ ಮಾರ್ಚ್ ರೂಟ್ ಮಾಡಲಾಯಿತು.

  ಹಾಗೆ ಈ ಪಥಸಂಚಲನದ ಸಂದೇಶ ಯಾವುದೇ ಸಮುದಾಯಗಳು ಹಬ್ಬ ಆಚರಣೆಗಳು ಮಾಡುವಾಗ ಯಾವುದೇ ತರಹದ ಕೋಮು ಗಲಭೆಯ ಗದ್ದಲ ಗಲಾಟೆಗಳಿಗೆ ಆಸ್ಪದ ವಿಲ್ಲ, ಹಾಗೆ ಯಾವುದೇ ಕಿಡಿಗೇಡಿಗಳು ಧಾರ್ಮಿಕ ಹಬ್ಬಗಳಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸ್ ರಕ್ಷಣೆ ಸೂಕ್ತವಾದ ಬಂದೋಬಸ್ತಿನೊಂದಿಗೆ ನೀಡುವ ಸಂದೇಶವನ್ನು ಈ ಸಮಯದಲ್ಲಿ ಸಾರ್ವಜನಿಕರಲ್ಲಿ ಯಾವುದೇ ಭಯವಿಲ್ಲದೆ ಹಬ್ಬ ಆಚರಣೆ ಮಾಡಲು ಈ ಮೂಲಕ ಪಥ ಸಂಚಲನ  ಮಾಡಿದರು.


 ಈ ಸಂದರ್ಭದಲ್ಲಿ ಸಿ.ಪಿ.ಐ ಪ್ರಹ್ಲಾದ ಆರ್ ಚೆನ್ನಗಿರಿ, ಕೂಡ್ಲಿಗಿ ಪಿಎಸ್ಐ ಸಿ ಪ್ರಕಾಶ್, ಕೊಟ್ಟೂರು ಪಿಎಸ್ಐ ಗೀತಾಂಜಲಿ ಸಿಂಧೆ, ಗುಡೆಕೋಟೆ  ಪಿಎಸ್ಐ ಸುಬ್ರಹ್ಮಣ್ಯ, ಹಾಗೆ ಕೆ ಎಸ್ ಆರ್ ಪಿ ಮೂರು ತುಕಡಿಗಳ ದಂಡುಗಳ  ಜೊತೆಗೆ ಕೂಡ್ಲಿಗಿ,ಕೊಟ್ಟೂರು, ಗುಡೆಕೋಟೆ, ಠಾಣೆಗಳ  ಪೊಲೀಸ್ ಸಿಬ್ಬಂದಿಗಳು ಈ ಪಥ ಸಂಚಾರದಲ್ಲಿ ಭಾಗವಹಿಸಿದ್ದರು ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು