Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ಅಪರೂಪದ ದುಬಾರಿ ಖಾಯಿಲೆಗಳು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ಅಪರೂಪದ ದುಬಾರಿ ಖಾಯಿಲೆಗಳು..........ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ದುಬಾರಿ ಖಾಯಿಲೆಗಳು...

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು ನೋಡುತ್ತೇವೆ..

" ನನಗೆ ತುಂಬಾ ಗಂಭೀರ ಮತ್ತು ಅಪರೂಪದ ಖಾಯಿಲೆ ಬಂದಿದೆ. ಅದಕ್ಕೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಸುಮಾರು 10/20/30...... ಲಕ್ಷಗಳಷ್ಟು ಹಣ ಬೇಕಾಗಿದೆ. ಒಂದು ಇಂಜೆಕ್ಷನ್ ಬೆಲೆ 50000/100000/200000.....
ನಾವು ಬಡವರು. ನಮ್ಮ ಬಳಿ ಅಷ್ಟು ಹಣವಿಲ್ಲ. ಆದ್ದರಿಂದ ಯಾರಾದರೂ ದಾನಿಗಳು ದಯವಿಟ್ಟು ಕೆಳಕಂಡ ಬ್ಯಾಂಕ್ ಅಕೌಂಟಿಂಗೆ ಹಣ ಸಹಾಯ ಮಾಡಿ " ಎಂಬ ನಿಜವಾದ ನತದೃಷ್ಟರ ಮನವಿಗಳು ಕರುಳು ಕಿವುಚಿದಂತೆ ಮಾಡುತ್ತದೆ. ( ಸುಳ್ಳು - ವಂಚನೆಗಳನ್ನು ಹೊರತುಪಡಿಸಿ )....

ಇಂತಹ ಪ್ರಕರಣಗಳಲ್ಲಿ ಆರೋಗ್ಯ ವಿಮೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮುಂತಾದ ಯೋಜನೆಗಳು ಹೆಚ್ಚು ‌ಉಪಯೋಗ ಆಗುವುದಿಲ್ಲ. ಒಂದು ವೇಳೆ ಆಗುವುದಾದರು ಸರ್ಕಾರದ ಸವಲತ್ತುಗಳನ್ನು ಪಡೆಯಲು ತುಂಬಾ ತುಂಬಾ ಶ್ರಮಪಡಬೇಕು ಮತ್ತು ಸಾಕಷ್ಟು ಸಮಯ ಬೇಕಾಗುತ್ತದೆ. ರೋಗಿಯ ಅಥವಾ ಅವರ ಹತ್ತಿರದ ಸಂಬಂಧಿಕರ ಬಳಿ ಅಷ್ಟು ಚೈತನ್ಯವೇ ಉಳಿದಿರುವುದಿಲ್ಲ....

ಗಂಡ ಹೆಂಡತಿ ಅಪ್ಪ ಅಮ್ಮ ಮಗ ಮಗಳು ಯಾರು ಬೇಕಾದರೂ ಈ ಪರಿಸ್ಥಿತಿಯಲ್ಲಿ ಇರಬಹುದು. ಸಾವಿನ ನಿರೀಕ್ಷೆಯ ಆ ಮನೆಯ ವಾತಾವರಣ ಕಲ್ಪಿಸಿಕೊಳ್ಳುವುದರಿಂದ ನಮ್ಮ ನೋವಿನ ಪ್ರಮಾಣ ಹೆಚ್ಚಾಗುತ್ತದೆ....

ರೋಗಿಯ ಸಂಕಟ, ಅವಲಂಬಿತರ ನರಳಾಟ, ಪ್ರೀತಿ ಪಾತ್ರರ ಗೋಳಾಟ, ವಿಧಿಯ ಅಸಹಾಯಕತೆ ಎಲ್ಲವೂ ನರಕಯಾತನೆ. ಇಂತಹ ಬಹುತೇಕ ಘಟನೆಗಳಲ್ಲಿ ರೋಗಿಯೂ ಉಳಿಯುವ ಸಾಧ್ಯತೆ ಕಡಿಮೆ. ಹಣವೂ ಖರ್ಚು. ಉಳಿದರು ಎಂದಿನ ಬದುಕು ಸಾಧ್ಯವಿಲ್ಲ.....

ರೋಗ ಬಂದಿರುವುದು ಒಬ್ಬರಿಗೆ. ಆದರೆ ನರಳುವುದು ಮಾತ್ರ ಇಡೀ ಕುಟುಂಬ. ಹಾಗೆಂದು ರೋಗಿಯನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಮತ್ತು ಅದು ಅಮಾನವೀಯ. ಬಹುಶಃ ಇದಕ್ಕೊಂದು ಕ್ರಮಬದ್ಧ ಯೋಜನೆ ಸರ್ಕಾರ ರೂಪಿಸಬೇಕಿದೆ....

ಯಾವುದೇ ವ್ಯಕ್ತಿ ಹಣದ ಕಾರಣದಿಂದ ವೈದ್ಯಕೀಯ ಚಿಕಿತ್ಸೆ ಪಡೆಯದೆ ಸಾಯಲು ಸಮಾಜ ಮತ್ತು ಸರ್ಕಾರ ಬಿಡಬಾರದು. ಅದು ಎಷ್ಟೇ ವೆಚ್ಚದ್ದಾಗಿದ್ದರು ವ್ಯಕ್ತಿಗಳಿಗೆ ಸಿಗಬೇಕು. ಅವಕಾಶ ಇದ್ದರೂ ಮನುಷ್ಯರ ಜೀವ ಉಳಿಸಲಾಗದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು....

ಇದಕ್ಕಾಗಿ ಒಂದು ಕ್ರಿಯಾ ಯೋಜನೆ ರೂಪಿಸಬಹುದು. ಯಾವುದಾದರೂ ಸಣ್ಣ ಪ್ರಮಾಣದ ತೆರಿಗೆ ಮತ್ತು ದಾನಿಗಳ ಸಹಾಯದಿಂದ ಒಂದು ಶಾಶ್ವತ ನಿಧಿ ಸ್ಥಾಪಿಸಬಹುದು. ಅಪರೂಪದ ಖಾಯಿಲೆಗಳಿಗೆ ವೈದ್ಯಕೀಯ ವಿನಾಯಿತಿ ಘೋಷಿಸಬಹುದು. ಖಾಯಿಲೆಗಳ ವಿಷಯದಲ್ಲಿ ಮನುಷ್ಯ ಸುಳ್ಳು ಹೇಳುವುದು ಆಗುವುದಿಲ್ಲ. ಆದ್ದರಿಂದ ಇದರಲ್ಲಿ ಹೆಚ್ಚು ಪಾರದರ್ಶಕತೆ ಕಾಪಾಡಬಹುದು.....

ಆದರೆ ಸಮಸ್ಯೆ ಇರುವುದು ಅದರ ನಿರ್ವಹಣೆಯಲ್ಲಿ. ಎಲ್ಲವೂ ಭ್ರಷ್ಟ ಅಪ್ರಾಮಾಣಿಕ ವ್ಯವಸ್ಥೆಯಲ್ಲಿ ಇದು ಮತ್ತೊಂದು ಸಂಸ್ಥೆಯಾಗುತ್ತದೆಯೇ ಹೊರತು ನಿಜವಾದ ಅಸಹಾಯಕರಿಗೆ ಸಹಾಯವಾಗುವುದಿಲ್ಲ. ಈಗಾಗಲೇ ಈ ಕೆಲವು ಈ ರೀತಿಯ ವ್ಯವಸ್ಥೆ ಇದೆ.
ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.....

ನಮಗೆ ನೋವಾದಾಗ ನಾವು ಪ್ರತಿಕ್ರಿಯಿಸುತ್ತೇ‌ವೆ. ಇತರರ ನೋವಿಗೆ ನಾವು ಸ್ಪಂದಿಸದೆ ನಿರ್ಲಕ್ಷಿಸುತ್ತೇವೆ. ಇಡೀ ವ್ಯವಸ್ಥೆಗೆ ಆ ಜಿಡ್ಡುಗಟ್ಟಿದ ಮನಸ್ಥಿತಿ ಇದೆ. ಅದನ್ನು ಆಳುವ ವರ್ಗ ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿದೆ....

ಆಸ್ಪತ್ರೆಗಳು ಜೈಲಿಗಿಂತ ದೊಡ್ಡ ನರಕದ ಕೂಪಗಳಾಗಿವೆ. ಒಂದೊಂದು ರೋಗಿಯ ಮತ್ತು ಅವರ ಕುಟುಂಬದವರ ಕಥೆ ಕೇಳಿದಾಗಲು ದುಃಖ, ಆಘಾತ ಮತ್ತು ವ್ಯವಸ್ಥೆಯ ಬಗ್ಗೆ ಆಕ್ರೋಶ ಉಂಟಾಗುತ್ತದೆ....

ಆಹಾರ ನೀರು ಗಾಳಿಯ ಮಲಿನತೆಯ ಜೊತೆಗೆ, ಸರ್ಕಾರಗಳು ಮಲಿನವಾಗಿ ಕೊನೆಗೆ ಮನುಷ್ಯರ ದೇಹ ಮನಸ್ಸುಗಳು ಸಹ ಕೆಟ್ಟದಾಗಿ ಹೋಗಿವೆ. ಅದಕ್ಕೆ ಕಳಸವಿಟ್ಟಂತೆ ಈಗ ಸಾಮಾನ್ಯ ವೈದ್ಯಕೀಯ ಸೌಕರ್ಯಗಳಿಗೇ ಕೊರತೆಯಾಗಿದೆ.....

ಈಗಲಾದರು ಎಚ್ಚೆತ್ತುಕೊಂಡು ಭ್ರಷ್ಟಾಚಾರ ರಹಿತ, ಜನಸ್ನೇಹಿ, ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ರೂಪಿಸಿಕೊಳ್ಳಬೇಕಿದೆ. ಸಾಮಾನ್ಯ ಜನರಿಗು ಎಲ್ಲಾ ರೀತಿಯ ಮಾಹಿತಿ ಸಿಗುವಂತೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಬಹುದು.....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ. ಎಚ್. ಕೆ.
9844013068......

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಪಿಎಸ್‌ಐಗೆ ಕಪಾಳಮೋಕ್ಷ: ಎಸ್‌ಐ ಸವಿತಾ ಪಾಟೀಲ್ ಬಳಿ ವಿಡಿಯೋ ಮೂಲಕ ಕ್ಷಮೆ ಕೋರಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಗೌಡಸರ್ಕಾರಿ ಬಸ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ; 15 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕದನ: 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ200 ರೂ. ಆಸೆಗೆ ಬಿದ್ದು 9.30 ಲಕ್ಷ ರೂ. ಕಳೆದುಕೊಂಡ ಯುವತಿ: 'ವರ್ಕ್ ಫ್ರಮ್ ಹೋಮ್' ಸೈಬರ್ ವಂಚನೆ ಬಯಲುಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ: ದಿಢೀರ್ ಹೆಚ್ಚಾದ ಅಕ್ಕಿ ದರ, ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹಬೆಂಗಳೂರು ವಿಮಾನ ನಿಲ್ದಾಣದಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನ ವಶ, 6 ಜನರ ಬಂಧನ