Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Health & Fitness

ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಿ

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ ಜಿ ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ KHPT, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ICMR, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಶಾ ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಒಂದು ದಿನದ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಕಾರ್ಯಗಾರ ಏರ್ಪಡಿಸಲಾಗಿದ್ದು

ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಮೊದಲನೆ ಹಂತದ ತರಬೇತಿ ಕಾರ್ಯಕ್ರಮ ಇದಾಗಿದೆ ಕಾರ್ಯಕ್ರಮಕ್ಕೆ ಬಿಜಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭೂಮಿಕಾ  ಚಾಲನೆ ನೀಡಿದರು.


ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ( KHPT)ಹಿರಿಯ ವ್ಯವಸ್ಥಾಪಕ ಡಾ. ಆಯೇಷಾ, ತಾಲೂಕು ಆಶಾ ಮೆಂಟರ್  ರಾಧಾ, ತಾಲೂಕು ಆರೋಗ್ಯ ಕಚೇರಿ  ಸಿಬ್ಬಂದಿ ಮಾರುತಮ್ಮ, ತಾಲ್ಲೂಕು ಸಂಯೋಜಕ ಮೇಘ  ಹಾಗೂ ತರಬೇತುದಾರ ಗುರುಪ್ರಸಾದ್ SP, ಚಿಕ್ಕಣ್ಣ, ಗೋವಿಂದರಾಜ್, ತಾಲ್ಲೂಕು ನರ್ಸ್ ಮೆಂಟರ್ ಉಮಾಪತಿ.ಆರ್ ಅವರು ಭಾಗವಹಿಸಿದ್ದರು.


ಚಾಲನೆ ನೀಡಿದ ಡಾ.ಭೂಮಿಕಾ ಮಾತನಾಡಿ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡುವಲ್ಲಿ  ನಾವೆಲ್ಲರೂ ಸಮುದಾಯ ಮಟ್ಟದಲ್ಲಿ ಕೈಜೋಡಿಸಿ ಕಾರ್ಯನಿರ್ವಹಿಸಬೇಕಾಗಿದೆ ಆಗ ಮಾತ್ರ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಿ ಆರೋಗ್ಯವಂತ ಸಮುದಾಯ ಹಾಗೂ ಸಮಾಜ ನಿರ್ಮಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಾಗಿದೆ ಎಂದು ತಿಳಿಸಿದರು.

 ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ನ (KHPT)ಹಿರಿಯ ವ್ಯವಸ್ಥಾಪಕಿ  ಡಾ.ಆಯೇಷಾ ಮಾತನಾಡಿ ಒಬ್ಬ ಗರ್ಭಿಣಿಯ ಪೂರ್ಣ ಅವಧಿ ಸಾವಿರ ದಿನಗಳು ಈ ಸಾವಿರ ದಿನಗಳು ಗರ್ಭಿಣಿಯಾದಾಗ ನಿಂದ ಹಿಡಿದು ಮಗುವಿನ ಎರಡು ವರ್ಷದ ವರೆಗೆ ಕೂಡಿದ್ದು ಅಲ್ಲಿಯವರೆಗೆ

ಗರ್ಭಿಣಿಯ ಹಾರೈಕೆ ಮಗುವಿನ ಹಾರೈಕೆ ಕಾಂಗರು ಮದರ್ ಕೇರ್ ಮನೆ ಮಟ್ಟದಲ್ಲಿ ನವಜಾತ ಶಿಶುವಿನ ಹಾರೈಕೆ, ಎದೆ ಹಾಲಿನ ಮಹತ್ವ, ಪೌಷ್ಟಿಕ ಆಹಾರ, ಹೆರಿಗೆಯ ಸಿದ್ಧತೆ ಸಮುದಾಯ ಮಟ್ಟದಲ್ಲಿ ನಾವೆಲ್ಲರೂ ತಮ್ಮ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದರ ಮೂಲಕ ಆರೋಗ್ಯವಂತ ತಾಯಿ ಮತ್ತು ಮಗುವನ್ನು ಪಡೆಯುವುದರ ಜೊತೆಗೆ ತಾಯಿ ಮರಣ ಮತ್ತು ಶಿಶುಮರಣ ಕಡಿಮೆ ಮಾಡಿ ಉತ್ತಮ ಸಮಾಜ ನಿರ್ಮಿಸೋಣ ಜೊತೆಗೆ ಮಾದರಿ ಜಿಲ್ಲೆಯನ್ನಾಗಿ ಮಾಡೋಣ ಎಂದು ತಿಳಿಸಿದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಪಿಎಸ್‌ಐಗೆ ಕಪಾಳಮೋಕ್ಷ: ಎಸ್‌ಐ ಸವಿತಾ ಪಾಟೀಲ್ ಬಳಿ ವಿಡಿಯೋ ಮೂಲಕ ಕ್ಷಮೆ ಕೋರಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಗೌಡಸರ್ಕಾರಿ ಬಸ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ; 15 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕದನ: 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ200 ರೂ. ಆಸೆಗೆ ಬಿದ್ದು 9.30 ಲಕ್ಷ ರೂ. ಕಳೆದುಕೊಂಡ ಯುವತಿ: 'ವರ್ಕ್ ಫ್ರಮ್ ಹೋಮ್' ಸೈಬರ್ ವಂಚನೆ ಬಯಲುಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ: ದಿಢೀರ್ ಹೆಚ್ಚಾದ ಅಕ್ಕಿ ದರ, ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹಬೆಂಗಳೂರು ವಿಮಾನ ನಿಲ್ದಾಣದಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನ ವಶ, 6 ಜನರ ಬಂಧನ