Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಪರಿಷ್ಕರಣೆಗೊಂಡ ರೈಲ್ವೆ ವೇಳಾಪಟ್ಟಿ, ಇಂದಿನಿಂದ ಜಾರಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು ಹೊಸ ರೈಲ್ವೆ  ವೇಳಾಪಟ್ಟಿ
01.01.2025 ರಿಂದ ಜಾರಿಗೆ ಬಂದಿದ್ದೂ, ಭಾರತೀಯ ರೈಲ್ವೆಯಾದ್ಯಂತ ಮೈಸೂರು ಮತ್ತು ಇತರ ನಿಲ್ದಾಣಗಳಿಂದ ಹೊರಡುವ/ಆಗಮಿಸುವ ಹಲವಾರು ರೈಲುಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಷ್ಕರಿಸಲಾಗಿದೆ. ಎಲ್ಲಾ ಪ್ರಯಾಣಿಕರು ರೈಲು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಈ ಕೆಳಗೆ ನೀಡಿರುವ ವೆಬ್ ಸೈಟ್ ಲಿಂಕ್‌ನ ಸಹಾಯದಿಂದ ಹೊಸ ರೈಲು ವೇಳಾಪಟ್ಟಿಯನ್ನು ಪರಿಶೀಲಿಸಲು ವಿನಂತಿಸಲಾಗಿದೆ.

01.01.2025 ರಿಂದ ಮೈಸೂರು ಮತ್ತು ಇತರ ನಿಲ್ದಾಣಗಳಿಗೆ ನಿರ್ಗಮಿಸುವ ಮತ್ತು ಆಗಮಿಸುವ ರೈಲುಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುವ ರೈಲುಗಳ ಪಟ್ಟಿಯನ್ನು ಪ್ರಯಾಣಿಸುವ ಯಾತ್ರಿಕರ ಮಾಹಿತಿಗಾಗಿ ಈ ಕೆಳಗೆ ಪಟ್ಟಿ ಮಾಡಲಾಗಿದೆ.

  1. ಮೈಸೂರಿನಿಂದ ಸಾಯಿನಗರ ಶಿರಡಿಗೆ ಹೊರಡುವ ರೈಲು ಸಂಖ್ಯೆ 16217 ದಿನಾಂಕ 06.01.2025 ರಿಂದ ಬೆಳಿಗ್ಗೆ 05:00 ಗಂಟೆಗೆ ಮೈಸೂರಿನಿಂದ ಹೊರಡಲಿದೆ.


  2. 2. ಟುಟಿಕೋರಿನ್‌(ತೂತುಕುಡಿ)ನಿಂದ ಮೈಸೂರಿಗೆ ಹೊರಡುವ ರೈಲು ನಂ.16235 ಪಾಂಡವಪುರ ನಿಲ್ದಾಣಕ್ಕೆ 08:39 ಗಂಟೆಗೆ ತಲುಪುತ್ತದೆ ಮತ್ತು 08:40 ಗಂಟೆಗೆ ಹೊರಟು ಅಂತಿಮವಾಗಿ 09:30 ಗಂಟೆಗೆ ಮೈಸೂರು ತಲುಪುತ್ತದೆ.


  3. ನಂಜನಗೂಡಿನಿಂದ ಮೈಸೂರಿಗೆ ಹೊರಡುವ ರೈಲು ನಂ.06299 ನಂಜನಗೂಡಿನಿಂದ 10:25 ಗಂಟೆಗೆ ಹೊರಟು 11:15 ಗಂಟೆಗೆ ಮೈಸೂರು ತಲುಪಲಿದೆ. ಮಾರ್ಗದಲ್ಲಿ ರೈಲು ಸುಜಾತಪುರಂ ಹಾಲ್ಟ್ ನಲ್ಲಿ 10:25 - 10:29, ತಾಂಡವಪುರ ಹಾಲ್ಟ್ 10:32 - 10:33, ಕಡಕೋಳ 10:38 - 10-:39, ಅಶೋಕಪುರಂ 10:48 - 10:49, ಚಾಮರಾಜಪುರಂ ನಿಲ್ದಾಣದಲ್ಲಿ 10:54 - 10:55 ಆಗಮಿಸುತ್ತದೆ – ನಿರ್ಗಮಿಸುತ್ತದೆ.


  4. ಮೈಸೂರಿನಿಂದ ನಂಜನಗೂಡಿಗೆ ಹೊರಡುವ ಪ್ಯಾಸೆಂಜರ್ ರೈಲು ನಂ.06300 ನಂಜನಗೂಡಿಗೆ 10:00 ಗಂಟೆಗೆ ತಲುಪಲಿದೆ.
    5. ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ಪ್ಯಾಸೆಂಜರ್ ರೈಲು ನಂ.60276 ಮೈಸೂರಿನಿಂದ 11:45 ಗಂಟೆಗೆ ನಿರ್ಗಮಿಸುತ್ತದೆ ಮತ್ತು ಚಾಮರಾಜನಗರಕ್ಕೆ 13:30 ಗಂಟೆಗೆ ತಲುಪುತ್ತದೆ. ಮಾರ್ಗದಲ್ಲಿ ರೈಲು ಚಾಮರಾಜಪುರಂನಲ್ಲಿ 11:50-11:51, ಅಶೋಕಪುರಂ 11:56-11:55, ಕಡಕೋಳ 12:08-12:09, ತಾಂಡವಪುರ ಹಾಲ್ಟ್ 12:14-12:15,

  5. ಸುಜಾತಪುರಂ ಹಾಲ್ಟ್ 12:18-12:19, ನಂಜನಗೂಡು ಟೌನ್ 12:23-12:25, ಚಿನ್ನದಗುಡಿ ಹುಂಡಿ ಹಾಲ್ಟ್ 12:35-12:36, ನರಸಾಂಬುಧಿ ಹಾಲ್ಟ್ 12:38-12:39, ಕವಲಂದೆ ಹಾಲ್ಟ್ 12:44-12:45, ಕೊಣ್ಣನೂರು ಹಾಲ್ಟ್ 12:50-12:51, ಬದನಗುಪ್ಪೆ ಹಾಲ್ಟ್ 12:56-12:57, ಮರಿಯಾಲ ಹಾಲ್ಟ್ 13:03-13:04 ಗಂಟೆಗೆ ಆಗಮಿಸುತ್ತದೆ – ನಿರ್ಗಮಿಸುತ್ತದೆ.


  6. 6. ಚಾಮರಾಜನಗರದಿಂದ ಮೈಸೂರಿಗೆ ಹೊಗುವ ಪ್ಯಾಸೆಂಜರ್ ರೈಲು ನಂ.06234 ಅಶೋಕಪುರಂಗೆ 11:53 ಕ್ಕೆ ತಲುಪುತ್ತದೆ ಮತ್ತು 11:55 ಕ್ಕೆ ನಿರ್ಗಮಿಸುತ್ತದೆ ಹಾಗು ಚಾಮರಾಜಪುರಂಗೆ 12:01 ಕ್ಕೆ ಆಗಮಿಸಿ 12:02 ಕ್ಕೆ ನಿರ್ಗಮಿಸುತ್ತದೆ.
    7. ಚಾಮರಾಜನಗರದಿಂದ ತುಮಕೂರು ಪ್ಯಾಸೆಂಜರ್ ರೈಲು ನಂ.07345 ಚಿನ್ನದಗುಡಿ ಹುಂಡಿಯಲ್ಲಿ 07:51- 07:52, ನಂಜನಗೂಡು ಟೌನ್ 08:02-08:04, ಸುಜಾತಪುರಂ ಹಾಲ್ಟ್ 08:08 - 08:09, ತಾಂಡವಪುರ ಹಾಲ್ಟ್ 08:13 - 08:14, ಕಡಕೋಳ 08:19-08:20, ಅಶೋಕಪುರಂ 08:33-08:34 ಮತ್ತು ಚಾಮರಾಜಪುರಂ 08:39-08:40.


  7. ಪ್ರಯಾಣಿಸುವ ಯಾತ್ರಿಕರ ಅನುಕೂಲಕ್ಕಾಗಿ ಪ್ರಕಟಣೆ ಹೊರಡಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ
    ತಿಳಿಸಿದ್ದಾರೆ.


 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು