Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ಕರ್ನಾಟಕ ಕಲಾಶ್ರೀಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು 2024-25 ನೇ ಸಾಲಿನ ಕರ್ನಾಟಕ ಕಲಾಶ್ರೀಪ್ರಶಸ್ತಿಗೆ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ.


2024-25
ನೇ ಸಾಲಿನ ಕರ್ನಾಟಕ ಸಂಗೀತ ಮತ್ತು ಗಾಯನದಲ್ಲಿ ಬೆಂಗಳೂರಿನ ಶ್ರೀಮತಿ ಭಾನುಮತಿ ನರಸಿಂಹನ್ ಮತ್ತು ನೃತ್ಯದಲ್ಲಿ ಹಾಸನದ ಗುರು ಶ್ರೀಮತಿ ಗಾಯತ್ರಿ ಕೇಶವನ್ ಇವರುಗಳು ಗೌರವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ವಾರ್ಷಿಕ ಪ್ರಶಸ್ತಿ ವಿಭಾಗದಲ್ಲಿ ಕರ್ನಾಟಕ ಸಂಗೀತದಲ್ಲಿ ಕೋಲಾರದ ವಾನರಾಶಿ ಬಾಲಕೃಷ್ಣ ಭಾಗವತರ್, ಬೆಂಗಳೂರಿನ ಎಸ್.ವಿ.ಗಿರಿಧರ್ ಮೃದಂಗ, ಆನೇಕಲ್‍ನ ನಾಗಭೂಷಣಯ್ಯ- ಪಿಟೀಲು ವಿಭಾಗದ ಪ್ರಶಸ್ತಿ ಪುರಸ್ಕøತರು.

ಹಿಂದೂಸ್ಥಾನಿ ಸಂಗೀತ ವಿಭಾಗದಲ್ಲಿ ಗುಲಬರ್ಗಾದ ಮಹದೇವಪ್ಪ ಪೂಜಾರ, ಬೆಳಗಾಂನ ರವೀಂದ್ರ ಕಾಟೋಟಿ - ಹಾರ್ಮೋನಿಯಂ ಮತ್ತು ಉತ್ತರಕನ್ನಡದ ಅನಂತ ಭಾಗವತ್ ಗಾಯನ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ನೃತ್ಯ  ವಿಭಾಗದಲ್ಲಿ ಬೆಳಗಾಂನ ಟಿ. ರವೀಂದ್ರ ಶರ್ಮ, ಬೆಂಗಳೂರಿನ ಶ್ರೀಮತಿ ಅನುರಾಧ ವಿಕ್ರಾಂತ್, ಬೆಂಗಳೂರಿನ ಸುಗ್ಗನಹಳ್ಳಿ ಷಡಾಕ್ಷರಿ, ಬೆಂಗಳೂರಿನ ಬಿ,ಆರ್. ಹೇಮಂತ ಕುಮಾರ್ - ನೃತ್ಯಕ್ಕೆ ಪಿಟೀಲು ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಸುಗಮ ಸಂಗೀತ ವಿಭಾಗದಲ್ಲಿ ರಾಯಚೂರಿನ ಸೂಗೂರೇಶ ಅಸ್ಕಿಹಾಳ್, ಬೆಂಗಳೂರಿನ ಎನ್.ಎಲ್.ಶಂಕರ್ - ಪಕ್ಕವಾದ್ಯ ತಬಲಾ ವಿಭಾಗದಲ್ಲಿ, ಕಥಾಕೀರ್ತನ ವಿಭಾಗದಲ್ಲಿ ಕೋಲಾರದ ಕೆ.ಎನ್.ಕೃಷ್ಣಪ್ಪ, ಗಮಕ ವಿಭಾಗದಲ್ಲಿ  ಹಾಸನದ ಶ್ರೀಮತ ರತ್ನಾಮೂರ್ತಿ ವ್ಯಾಖ್ಯಾನ ಹಾಗೂ ಸಂಘಸಂಸ್ಥೆ ವಿಬಾಗದಲ್ಲಿ ಗದಗದ ವೀರೇಶ್ವರ ಪುಣ್ಯಾಶ್ರಮ ಮತ್ತು ಬೆಂಗಳೂರಿನ ಸುನಾದ ನಾದ ಕಲ್ಚರಲ್ ಸೆಂಟರ್ ಇವರುಗಳು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು