Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ನ.17 ರಂದು ರಾಜ್ಯ ಮಟ್ಟಕ್ಕೆ ಕ್ರೀಡಾಪಟುಗಳ ಆಯ್ಕೆ

ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಥಮ ಬಾರಿಗೆ ಕಲ್ಪತರು ನಗರಿಗೆ ತುಮಕೂರು ಜಿಲ್ಲೆಯಲ್ಲಿ  ಪತ್ರಕರ್ತರಿಗಾಗಿ ರಾಜ್ಯಮಟ್ಟದ ಸುವರ್ಣ ಸಂಭ್ರಮ ಕ್ರೀಡಾಕೂಟ ಆಯೋಜನೆ ಮಾಡುತ್ತಿದ್ದು ನವೆಂಬರ್ ನಲ್ಲಿ ನಡೆಯುವ  ಕ್ರೀಡಾ ಕೂಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಈಗಾಗಲೇ ಕ್ರೀಡಾಕೂಟ ಯಶಸ್ವಿಗೊಳಿಸುವಂತೆ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಸೇರಿದಂತೆ ವಿವಿಧ  ಗಣ್ಯರು ಶುಭಕೋರಿದ್ದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸುವರ್ಣ ಸಂಭ್ರಮ ಕ್ರೀಡಾಕೂಟ  ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾ

ರೆ.  ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಕೂಡ ತುಮಕೂರಿನಲ್ಲಿ ನಡೆಸಲು ನಿಶ್ಚಯಿಸಿರುವುದರಿಂದ ಜನವರಿಯಲ್ಲಿ ಪತ್ರಕರ್ತರ ಸಮ್ಮೇಳನ ನಡೆಸುವಂತೆ ದಿನಾಂಕ ನಿಶ್ಚಯಗೊಳಿಸಿದ್ದಾರೆ.

ಎಲ್ಲ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ನಡೆಯುವ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ಪತ್ರಕರ್ತರ ಸಹಕಾರ ಮುಖ್ಯವಾಗಿದೆ ಎಂದು  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಜಿಲ್ಲಾ ಪುರುಷೋತ್ತಮ ತಿಳಿಸಿದರು.

 ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸದಸ್ಯರುಗಳ ಜೊತೆಯಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ಪತ್ರಕರ್ತರಿಯಾಗಿ ನಡೆಸಬೇಕು ಕ್ರೀಡಾಂಗಣ ಸೇರಿದಂತೆ ಇದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಪತ್ರಕರ್ತರ ಸಂಘದ ವತಿಯಿಂದ ವಿವಿಧ ಸಮಿತಿಗಳನ್ನ ರಚನೆ ಮಾಡಿ ಹಲವು ಪತ್ರಕರ್ತರಿಗೆ ಜವಾಬ್ದಾರಿ ನೀಡಿದ್ದು ಇವರೆಲ್ಲರ ಸಹಕಾರ ಮತ್ತು ಜಿಲ್ಲೆಯ ಎಲ್ಲಾ ಪತ್ರಿಕಾ ಕುಟುಂಬಸ್ಥರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಗೊಳ್ಳಲಿದೆ ಎಂದು ತಿಳಿಸಿದರು.

 ತುಮಕೂರಿನಿಂದ ಪ್ರತಿನಿಧಿಸುವ ಕ್ರೀಡಾ ಅಭ್ಯರ್ಥಿಗಳನ್ನು ನವೆಂಬರ್ ೧೭ ಅಂದರೆ ಭಾನುವಾರ ಆಯ್ಕೆ ಮಾಡಿಕೊಳ್ಳಲಾಗುವುದು ಹೀಗಾಗಿ ಜಿಲ್ಲೆಯ ಆಸಕ್ತ ಪತ್ರಕರ್ತರು ತಮ್ಮ ವಿವಿಧ ನೆಚ್ಚಿನ ಕ್ರೀಡೆಗಳ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ಅಭ್ಯಾಸದಲ್ಲಿ ನಿರತರಾಗಲು ಕೋಚ್ಗಳ ಸಹಾಯ ಪಡೆಯಲು  ಪತ್ರಕರ್ತರು ಮುಂದಾಗಬೇಕು ಎಂದರು.

 ಇದೇ ನವೆಂಬರ್ ೨೦ರಂದು ಜಿಲ್ಲಾಧ್ಯಂತ ಸಂಚಾರ ಮಾಡಲಿರುವ ರಾಜ್ಯಮಟ್ಟದ ಕ್ರೀಡಾ ಜ್ಯೋತಿಯನ್ನ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಗಣ್ಯರು  ಕ್ರೀಡಾ ಜ್ಯೋತಿ ಸಂಚಾರಕ್ಕೆ ಚಾಲನೆ ನೀಡಲಿದ್ದು ಪ್ರತಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಕ್ರೀಡಾ ಜ್ಯೋತಿಯನ್ನು ತಾಲೂಕಿನ ಗಣ್ಯಮಾನ್ಯರು ಮತ್ತು ಕ್ರೀಡಾ ಸಾಧಕರು ಹಾಗೂ ಅಧಿಕಾರಿಗಳಿಂದ ಅಭೂತಪೂರ್ವವಾಗಿ ಸ್ವಾಗತಿಸಿ,

ಗೌರವಿಸಿ ಬಿಳ್ಕೊಡಬೇಕು ಅದೇ ರೀತಿಯಾಗಿ ಪತ್ರಕರ್ತರಿಗಾಗಿ ನಡೆಯುವ  ಸುವರ್ಣ ಸಂಭ್ರಮ ಕ್ರೀಡಾಕೂಟದ ಬಗ್ಗೆ ಎಲ್ಲೆಡೆ  ಪ್ರಚಾರ ಪಡಿಸಬೇಕು ಇದಕ್ಕಾಗಿ ಪ್ರಚಾರ ಸಮಿತಿಯ ಕೆಲಸರು ಪ್ರತಿ ತಾಲೂಕಿನಲ್ಲಿಯೂ ಸಂಚಾರ ಮಾಡಲಿದ್ದಾರೆ ಈ ರೀತಿಯಾಗಿ ರಾಜ್ಯಮಟ್ಟದ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತ ರಾಕ್ ಲೈನ್ ರವಿ ಮಾತನಾಡಿ ನ. ೨೪ರಂದು ಸುವರ್ಣ ಸಂಭ್ರಮ ಕ್ರೀಡಾಕೂಟದ ಉದ್ಘಾಟನೆಗೊ ಮುನ್ನ ಕ್ರೀಡಾ ಜ್ಯೋತಿ ಸೇರಿದಂತೆ ವಿವಿಧ ಕ್ರೀಡಾ ಸಾಧಕರ ಮೆರವಣಿಗೆ ನಡೆಯಲಿದ್ದು ಈ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಎಲ್ಲಾ ಕ್ರೀಡಾಪಟುಗಳು ಹಾಗೂ ಪತ್ರಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್, ಉಪಾಧ್ಯಕ್ಷ ಶಾನ ಪ್ರಸನ್ನ, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಶಾಂತರಾಜು ಅನು, ಕಾರ್ಯದರ್ಶಿ ಹಾರೋಗೆರೆ ಸತೀಶ್, ಸೇರಿದಂತೆ ಸಂಘದ ನಿರ್ದೇಶಕರುಗಳು ಹಾಗೂ ವಿವಿಧ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರುಗಳು ವಿವಿಧ ಸಮಿತಿಗಳ ಪತ್ರಕರ್ತರುಗಳು ಉಪಸ್ಥಿತರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು