Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಾಹಿತ್ಯ ಲೋಕದಲ್ಲಿ ಕಳೆದು ಹೋದ ಸರಸ್ವತಿ ಪುತ್ರ ಎಸ್. ಎಲ್. ಭೈರಪ್ಪ…

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯ ಕಾದಂಬರಿಕಾರ
, ವಿದ್ವಾಂಸ ಹಾಗೂ ಅನನ್ಯ ವ್ಯಕ್ತಿತ್ವ ಹೊಂದಿರುವ ಡಾ.ಎಸ್. ಎಲ್. ಭೈರಪ್ಪ ಅವರ ನಿಧನವು ಕೇವಲ ಒಂದು ಲೇಖಕರ ಹೃದಯ ನಿಲ್ಲುವುದಲ್ಲ. ಇದು ಒಂದು ದಶಮಾನಗಳ ಸಾಂಸ್ಕೃತಿಕ ಧ್ವನಿಯೇ ಮೌನವಾದಂತೆ ಆಗಿದೆ. ಆದರೆ ಅವರ ಜೀವನದ ಕೊನೆಯ ಕೆಲವು ದಿನಗಳು ಹಾಗೂ ಆಸ್ಪತ್ರೆಯಲ್ಲಿ ಕಳೆದ ಕ್ಷಣಗಳು, ಅವರನ್ನು ಕೇವಲ "ಮಹಾನ್ ಕಾದಂಬರಿಕಾರ"ನೆಂದು ಅಲ್ಲದೆ "ಸರಳ ಮಾನವ"ನೆಂದು ನೆನಪಿಸುವಂತಿವೆ.

ಭೈರಪ್ಪ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ತಮ್ಮ ಸಹಜ ಗುಣವನ್ನು ಬದಲಿಸಿಕೊಂಡಿರಲಿಲ್ಲ. ಅವರು ಮಂಚದಲ್ಲಿ ಮಲಗಿದ್ದರೂ ಕೈಯಲ್ಲಿ ಪುಸ್ತಕವಿತ್ತು. ಬರಹವು ಅವರ ಉಸಿರು, ಓದುವುದು ಅವರ ಧರ್ಮ, ಅಂತ್ಯ ಕ್ಷಣಗಳಲ್ಲೂ ಅದನ್ನೇ ಹಿಡಿದುಕೊಂಡಿದ್ದರು.

ಆಸ್ಪತ್ರೆಯ ಸಿಬ್ಬಂದಿಯವರಿಗೂ ಅವರು ಕೇವಲ ರೋಗಿ ಅಲ್ಲ ಆತ್ಮೀಯ ಮಿತ್ರ. ವೈದ್ಯರು, ನರ್ಸ್‌ಗಳು, ಸಹಾಯಕರು ಎಲ್ಲರೊಡನೆ ಅವರು ಹಾಸ್ಯಮಯವಾಗಿ ಮಾತನಾಡಿ ಬೆಸೆಯುತ್ತಿದ್ದರು. ಆಗಸ್ಟ್ 20ರಂದು ಅವರ ಹುಟ್ಟುಹಬ್ಬವನ್ನು ಆಸ್ಪತ್ರೆಯವರೇ ಸೇರಿ ಆಚರಿಸಿದ್ದರು. ಇದು ಕೇವಲ ಒಂದು ಜನ್ಮದಿನ ಆಚರಣೆ ಅಲ್ಲ, ಸಾಹಿತ್ಯ ಲೋಕದ ಬೆಳಕನ್ನು ಹಿಡಿದಿಟ್ಟುಕೊಳ್ಳುವ ಒಂದು ಸಂಭ್ರಮ. ಅಂತಿಮ ದಿನದ ಬೆಳಿಗ್ಗೆಯೂ ಭೈರಪ್ಪ ಅವರ ಮುಖದಲ್ಲಿ ಸಮಾಧಾನವಿತ್ತು.

ಬೆಳಗಿನ ನಗು, ಪ್ರೀತಿಯಿಂದ ಎಲ್ಲರೊಂದಿಗೆ ಮಾತನಾಡಿದ ಶಬ್ದಗಳು ಇವು ಅವರ ಜೀವನದ ಕೊನೆಯ ಬಾಳ ಸಂಗೀತ. ಆದರೆ ಮಧ್ಯಾಹ್ನದ ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿಹೋಯಿತು. ಆಸ್ಪತ್ರೆಗೆ ಆಗಮಿಸಿದ ಅಭಿಮಾನಿಗಳು, ಕುಟುಂಬಸ್ಥರು, ಬಂಧುಮಿತ್ರರು ಎಲ್ಲರಿಗೂ ಒಂದು ಮಾತು ಮಾತ್ರ ನೆನಪಾಯಿತು.
ಭೈರಪ್ಪ ಇನ್ನೂ ನಮ್ಮ ಜೊತೆಗೆ ಇದ್ದರೆ ಎಷ್ಟು ಚೆನ್ನಾಗಿತ್ತು!


ನಾನೂ ಕೂಡಾ ಆ ರಾತ್ರಿ 10.35ರ ಸುಮಾರಿಗೆ ಆಸ್ಪತ್ರೆಗೆ ತಲುಪಿದಾಗ ಅಲ್ಲಿ ಕಾಣಸಿಗುತ್ತಿತ್ತು ಭಾರಿ ಕಾವಲು. ನೂರುಕ್ಕೂ ಹೆಚ್ಚು ಪೊಲೀಸರು ಆಸ್ಪತ್ರೆಯ ಸುತ್ತಮುತ್ತ ನಿಂತಿದ್ದರು. ಆಸ್ಪತ್ರೆಯ ದ್ವಾರದ ಹೊರಗೆ ನಿಂತಿದ್ದ ನಾವೆಲ್ಲರೂ ಕೇವಲ ಒಂದು ಹಂಬಲದಲಿ – "ಒಮ್ಮೆ ಅವರನ್ನು ನೋಡಬೇಕೆಂದು." ರಾತ್ರಿಯೆಲ್ಲ ಜಾಗರಣೆಯಲಿ ಕಳೆದುಹೋಯಿತು.

ಅರ್ಧರಾತ್ರಿ ಬಳಿಕ, ಸುಮಾರು 2.15ರ ಹೊತ್ತಿಗೆ, ಆಸ್ಪತ್ರೆಯ ಸಿಬ್ಬಂದಿ ಅವರ ದೇಹವನ್ನು ಗೌರವಪೂರ್ವಕವಾಗಿ ಸಾಗಿಸಲು ಸಿದ್ಧತೆ ಮಾಡುತ್ತಿದ್ದರು.




 ಆ ದೃಶ್ಯವು ಹೃದಯ ಮುಟ್ಟುವಂತಾಗಿತ್ತು. ಸಾಹಿತ್ಯ ಲೋಕವನ್ನು ನಡುಗಿಸಿದ ಮೌನವೇ ಅಲ್ಲಿ ಆವರಿಸಿತ್ತು. ಬೆಳಗಿನ 6 ಗಂಟೆಯ ಸುಮಾರಿಗೆ, ಒಂದು ಫ್ರೀಜರ್ ಬಾಕ್ಸ್‌ನಿಂದ ಅವರನ್ನು ಹೊರತೆಗೆದು ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಆ ಅರ್ಧ ಗಂಟೆಯ ಸಮಯ ನನಗೆ ಒಂದು ಜೀವನಪಾಠವಾಯಿತು.


ಮನುಷ್ಯನ ದೇಹ ಕ್ಷೀಣಿಸಬಹುದು, ಆದರೆ ಅವನ ಆತ್ಮ, ಅವನ ಕೃತಿಗಳು ಎಂದಿಗೂ ಸಾಯುವುದಿಲ್ಲ.
ಆಸ್ಪತ್ರೆಯ ಹೊರಗೆ ನೋಡಿದರೆ ಇನ್ನೊಂದು ಜಗತ್ತೇ ಎದುರುಗೊಳ್ಳುತ್ತಿತ್ತು. 200ಕ್ಕೂ ಹೆಚ್ಚು ಅಭಿಮಾನಿಗಳು
ಕಣ್ಣು ತುಂಬಿಕೊಳ್ಳಲು ಕಾದವರು. ಅವರಿಗೆ ಒಂದೇ ಬೇಡಿಕೆ "ಒಮ್ಮೆ ಭೈರಪ್ಪನ ದರ್ಶನ." ಬೆಳಿಗ್ಗೆ 9 ಗಂಟೆಗೆ ಶವಗಾರದ ಬಳಿಯಲ್ಲಿ 5 ನಿಮಿಷಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ಆ ಸಮಯದಲ್ಲಿ ಕಣ್ಣೀರು ತುಂಬಿದ ಕಣ್ಣುಗಳು, ಮೌನದ ಹೃದಯಗಳು, ಮಂಕಾದ ನಗು ಎಲ್ಲವೂ ಒಟ್ಟಿಗೆ ಸೇರಿ ಒಂದು ಹೃದಯಮಿಡಿತದ ಕಥೆಯನ್ನು ಹೇಳಿದವು.

ನಂತರ, ಗೌರವದೊಂದಿಗೆ, ಮುಚ್ಚಿದ ಆಂಬುಲೆನ್ಸ್‌ನಲ್ಲಿ ಅವರ ದೇಹವನ್ನು ಕಲಾಮಂದಿರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸಾವಿರಾರು ಅಭಿಮಾನಿಗಳು, ಸಾಹಿತ್ಯಪ್ರಿಯರು, ವಿದ್ಯಾರ್ಥಿಗಳು, ರಾಜಕೀಯ ಮುಖಂಡರು, ಬಾಂಧವರು ಸೇರಿ ಅವರ ಅಂತಿಮ ದರ್ಶನ ಪಡೆದರು. ಅದು ಕೇವಲ ಒಂದು ಅಂತಿಮ ಯಾತ್ರೆ ಅಲ್ಲ ಅದು ಕನ್ನಡದ ಆತ್ಮವನ್ನು ಮುಟ್ಟಿದ ಒಂದು ಮೌನ ಮಹೋತ್ಸವ. ಭೈರಪ್ಪ ಅವರ ಜೀವನ ಕಾದಂಬರಿಯಂತೆ. ಅದರ ಪ್ರತಿ ಅಧ್ಯಾಯವು ಗಾಢ, ಸತ್ಯಸಂಧ ಹಾಗೂ ಅನನ್ಯ. ಆದರೆ ಅವರ ಅಂತಿಮ ಕ್ಷಣಗಳು ನಮಗೆ ನೀಡಿದ ಪಾಠ ಏನೆಂದರೆ "ಮಹಾನ್ ವ್ಯಕ್ತಿತ್ವವು ತನ್ನ ಕೊನೆಯ ಉಸಿರಿನವರೆಗೂ ಸರಳವಾಗಿಯೇ ಉಳಿಯುತ್ತದೆ."


ಇಂದು ಅವರು ನಮ್ಮ ನಡುವೆ ದೇಹವಾಗಿ ಇಲ್ಲದಿದ್ದರೂ, ಅವರ ಕೃತಿಗಳು  ಪರ್ವ, ಸಾರ್ಥ, ವಂಶವೃಕ್ಷ, ಆವರಣ, ಗ್ರಹಣ, ಶಾಶ್ವತವಾಗಿ ಬದುಕುತ್ತವೆ. ಅವರ ಮೌನವು ಶಬ್ದವಿಲ್ಲದ ಭಾಷೆ, ಆದರೆ ಆ ಭಾಷೆ ನಮ್ಮನ್ನು ಸದಾ ಪ್ರೇರೇಪಿಸುತ್ತದೆ….
ಲೇಖನ- ಹರಿಯಬ್ಬೆ ನಾಗಭೂಷಣ.ಡಿ ತಾಡಜ್ಜನವರ.


 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು