Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಾಮಾಜಿಕ ಬದುಕಿನ ಒಳಪುಟ

ಸಾಮಾಜಿಕ ಬದುಕಿನ ಒಳಪುಟ...........
ಚಂದ್ರವಳ್ಳಿ ನ್ಯೂಸ್, ಬೆಂಗಳೂರು

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ,
ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ,.....

ಮೆಚ್ಚುವವರಿಗೆ ಬರವಿಲ್ಲ,
ಟೀಕಿಸುವವರು ಕಡಿಮೆಯೇನಿಲ್ಲ,.......

ಅಸೂಯೆ ಒಳಗೊಳಗೆ,
ಕುಹುಕ ನಗು ಮೇಲಿನ ಹೊದಿಕೆ,....

ಎತ್ತಿ ಕಟ್ಟುವವರು ಹಲವರು,
ಎಚ್ಚರಿಸುವವರು ಕೆಲವರು,......

ಹೃದಯ ತಟ್ಟುವವರು ಇದ್ದಾರೆ,
ಬೆನ್ನಿಗೆ ಇರಿಯುವವರೂ ಉಂಟು,......

ಧೈರ್ಯ ತುಂಬುವವರು,
ಭಯ ಪಡಿಸುವವರು,
ಜೊತೆಯಾಗುವವರು,
ದೂರ ಸರಿಯುವವರು,
ಸ್ವಾಗತಿಸುವವರು,
ವಿರೋಧಿಸುವವರು,......

ತಪ್ಪು ಅರ್ಥೈಸಿಕೊಂಡವರು,
ನಿಜದ ಅನುಭಾವಿಗಳು,
ಪೂರ್ವಾಗ್ರಹ ಪೀಡಿತರು,
ವಿಶಾಲ ದೃಷ್ಟಿಯವರು,
ಮಜಾ ತೆಗೆದುಕೊಳ್ಳುವವರು,
ಹಿತ ಬಯಸುವವರು,.....

ನಿರ್ಲಿಪ್ತರು - ನಿರ್ಲಕ್ಷ್ಯವಹಿಸುವವರು,
ಹಿಂಸಾವಾದಿಗಳು, ಕರುಣಾಮಯಿಗಳು,
ಮೇಲೆತ್ತುವವರು,
ಕೆಳಗೆ ತುಳಿಯುವವರು,
ಸ್ವಾಭಿಮಾನಗಳು,
ಮಾರಿಕೊಂಡವರು,......

ಮುಖವಾಡ ಧರಿಸಿರುವವರು,
ಸಹಜ ಸ್ವಭಾವದವರು,
ಆಕ್ರೋಶ ನುಡಿಯ ಮಾತುಗಳು
ಮೆಲು ಧ್ವನಿಯ ವಿನಯಿಗಳು,
ನಗುನಗುತ್ತಾ ಅಳಿಸುವವರು,
ಅಳುವಿನಲ್ಲಿ ನಗುತ್ತಾ ಜೊತೆಯಾಗುವವರು,.....

ನಿಜ ವೀರರು,
ರಣ ಹೇಡಿಗಳು,
ಬಹುಮಾನಿಸುವವರು,
ಅವಮಾನಿಸುವವರು,
ಪ್ರೇರೇಪಿಸುವವರು,
ಪ್ರಚೋದಿಸುವವರು,
ತ್ಯಾಗಿಗಳು - ಸ್ವಾರ್ಥಿಗಳು,
ಜಾಣ ಪೆದ್ದರು - ಪೆದ್ದ ಜಾಣರು,......

ನವ ರಸಗಳು,
64 ವಿದ್ಯೆಗಳು,
ಊಹೆಗೂ ನಿಲುಕದ ಮನಸುಗಳು......

18 ರ ಕನಸುಗಳು,
30 ರ ಆಸೆಗಳು,
50 ರ ಭರವಸೆಗಳು,
70 ರ ನೋವುಗಳು,
ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು,....

ಯೇಸುವನ್ನೇ ಶಿಲುಬೆಗೇರಿಸಿದರು,
ಬಸವನನ್ನೇ ಕೊಂದರು,
ಅಬ್ರಹಾಂ ಲಿಂಕನ್ನನ್ನನ್ನೇ ಇಲ್ಲವಾಗಿಸಿದರು,
ಪೈಗಂಬರನನ್ನೇ ಓಡಿಸಿದರು,
ಗಾಂಧಿಗೇ ಗುಂಡಿಕ್ಕಿದರು,.......

ನಮ್ಮ ತನವೂ ಇರಬೇಕು,
ಹೊಂದಾಣಿಕೆಯೂ ಆಗಬೇಕು,
ಸಹಕಾರವೂ ಸಿಗಬೇಕು.....
ವೈವಿಧ್ಯತೆಯೂ ಬೆರೆಯಬೇಕು,
ಅತಿರೇಕಗಳ ನಡುವೆ ಸಮನ್ವಯ.. ‌...

ಈ ಎಲ್ಲದರ ನಡುವೆ ‌ವಾಸ್ತವದ ಬದುಕು,
ವ್ಯಾವಹಾರಿಕ ಬದುಕು, ನೆಮ್ಮದಿಯ ಜೀವನದ ಹುಡುಕಾಟ.......

ವಯಸ್ಸಿನ ಅಂತರ,
ಹಣಕಾಸಿನ ವ್ಯತ್ಯಾಸ,
ಜಾತಿಯ ಕಂದರ,
ವಿದ್ಯೆಯ ಭಿನ್ನತೆ,
ಅಧಿಕಾರದ ಅಸಮಾನತೆ,

ಬದುಕನ್ನು ಬಯಸುವವರಿಗೆ,
ಹೆದರಿಕೆ, ನಾಚಿಕೆ, ಅವಮಾನ,
ಆಸೆ, ಸಾವನ್ನು ಸ್ವಾಗತಿಸುವವರಿಗೆ.......

ಹೀಗೆ ಬದುಕೊಂದು ಊಹೆಗೆ ನಿಲುಕದ ಅನಂತದೆಡೆಗೆ ಪಯಣ.......

ಅದರಲ್ಲಿ,
ಬರುವವರಿಗೆ ಸ್ವಾಗತ,
ಹೋಗುವವರಿಗೆ ವಂದನೆಗಳು,.....

ಮೆಚ್ಚುವವರಿಗೆ ಧನ್ಯವಾದಗಳು,
ಟೀಕಿಸುವವರಿಗೆ ನಮಸ್ಕಾರಗಳು,....

ಅಭಿಮಾನಿಸುವವರಿಗೆ ಕೃತಜ್ಞತೆಗಳು,
ಅಸೂಯೆಪಡುವವರಿಗೆ ಸಹಾನುಭೂತಿಗಳು,.....

ಪ್ರೀತಿಸುವವರಿಗೆ ನಗು,
ದ್ವೇಷಿಸುವವರಿಗೆ ನಿರ್ಲಕ್ಷ್ಯ,.....

ಸಹಾಯ ಮಾಡುವವರಿಗೆ ಸಲಾಂ,
ತೊಂದರೆ ಕೊಡುವವರಿಗೆ ಗುಡ್ ಬೈ,.....

ಆತ್ಮೀಯರಿಗೊಂದಷ್ಟು ಅಪ್ಪುಗೆ,
ಪರಿಚಿತರಿಗೊಂದಷ್ಟು ಸಲುಗೆ,.....

ಪ್ರೋತ್ಸಾಹಿಸುವವರಿಗೆ ನಮನಗಳು,
ಕಾಲೆಳೆಯುವವರಿಗೆ ತಿರಸ್ಕಾರಗಳು,....

ಜೊತೆಯಾಗುವವರಿಗೆ
ಯಶಸ್ಸಾಗಲಿ,
ದೂರಾವಾಗುವವರಿಗೆ ಒಳ್ಳೆಯದಾಗಲಿ,......

ಗೆದ್ದವರಿಗೆ ಅಭಿನಂದನೆಗಳು,
ಸೋತವರಿಗೆ ಹಿತ ನುಡಿಗಳು,.....

ಹೀಗೆ, ಎಲ್ಲಾ ಭಾವನೆಗಳೊಂದಿಗೆ, ಸಾಗುತ್ತಲೇ ಇದೆ ಬದುಕು,....

ನನ್ನದು, ನಿಮ್ಮದು, ಎಲ್ಲರದೂ,

ಬದುಕಿನೊಂದಿಗೆ ಸರಸವಾಡುತ್ತಾ,
ವಿಧಿಯೊಂದಿಗೆ ಚೆಲ್ಲಾಟವಾಡುತ್ತಾ,
ಬರುವುದನ್ನು ಸ್ವೀಕರಿಸುತ್ತಾ,
ಹೋಗುವುದನ್ನು ಬೀಳ್ಕೊಡುತ್ತಾ,
ನಗುತ್ತಾ, ಅಳುತ್ತಾ,....‌...‌‌‌

ಸಾಗುತ್ತಲೇ ಇರಲಿ ಜೀವನ.....ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ..‌‌‌..............
ವಿವೇಕಾನಂದ. ಎಚ್. ಕೆ.
9844013068......

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು