Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಪತ್ರಕರ್ತರ ಭವನ ನಿರ್ಮಾಣಕ್ಕೆ ಒತ್ತು--ಶ್ರೀನಿವಾಸ್

ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಪತ್ರಕರ್ತರ ಭವನ ನಿರ್ಮಾಣ,ಪತ್ರಕರ್ತರಿಗೆ ವಿಮಾ ಸೌಲಭಕ್ಕೆ ಒತ್ತು ನೀಡುವುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ ತಿಳಿಸಿದರು.ಪಟ್ಟಣದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ. 2025-28 ನೇ ಸಾಲಿಗೆ ನಡೆಯಲಿರುವ ಚುನಾವಣೆಗೆ ನಾಮ ಪತ್ರ ಸಲ್ಲಿಸಿ ಮಾತನಾಡಿದ ಅವರು ಕಳೆದ ಸಾಲಿನ ಚುನಾವಣೆಯಲ್ಲಿ ನೀಡಿದ ಭರವಸೆಯಲ್ಲಿ ಶೆಕಡ 90 ರಷ್ಟು ಭರವಸೆಗಳನ್ನು ಈಡೇರಿಸಿದ್ದು ಕಳೆದ ಸಾಲಿನ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಉಚಿತ ಸದಸ್ಯತ್ವ,

ರಾಜ್ಯ ಸಂಘದ ಸಮ್ಮೇಳನಕ್ಕೆ ಬರುವ ಸದಸ್ಯರಿಗೆ ಪ್ರಯಾಣ ಭತ್ಯೆ ಸೇರಿದಂತೆ ಹಲವು ಭರವಸೆಗಳು ಈಡೇರಿಸಿದ್ದು  ಸಂಘದ ಪತ್ರಕರ್ತರ ಭವನಕ್ಕೆ 5 ಗುಂಟೆ ಜಾಗವನ್ನು ಸಂಭಂದಪಟ್ಟ ಇಲಾಖೆಗಳಿಂದ ಜಾಗ ಮಂಜೂರಾತಿಗಾಗಿ ಹಗಲಿರುಳು ಶ್ರಮವಹಿಸಿ ಭವನದ ಜಾಗ ಈಗ ಸರ್ಕಾರದ ಮಟ್ಟದಲ್ಲಿ ಇದ್ದು ಈ ಚುನಾವಣೆ ಮುಗಿದ ನಂತರ ರಾಜ್ಯ ಸಂಘದ ಸಹಕಾರದೊಂದಿಗೆ ಜಾಗ ಮಂಜೂರಾತಿಗೆ ಹೋರಾಡಿ ಜಾಗ ದಕ್ಕಿದ ಕೂಡಲೆ ಜಿಲ್ಲಾ ಪತ್ರಕರ್ತರ ಭವನದ ನಿರ್ಮಾಣಕ್ಕೆ ಒತ್ತು ನೀಡಲಾಗುವುದೆಂದರು.

ಕಳೆದ ಚುನಾವಣೆಯ ನಾಯಕತ್ವ ವಹಿಸಿದ್ದ ದೊಡ್ಡಬಳ್ಳಾಪುರ ಕೇಬಲ್ ಆರ್ ರಮೇಶ್ ತಂಡ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ನುಡಿದಂತೆ ನಡೆದಿದ್ದು ಸಂಘ ಹಲವುಬೆಳವಣಿಗೆ ಕಂಡಿದ್ದು ದಶಕಗಳ ಕಾಲ ಬಣ್ಣವೇ ಕಾಣದ  ಹಾಲಿ ಪತ್ರಕರ್ತರ ಭವನಕ್ಕೆ ಹೊಸ ರೂಪ ನೀಡಿ ಬಣ್ಣ ಬಳಿಸಿ ಪತ್ರಿಕಾಗೋಷ್ಠಿಗೆ ಮೆರಗು ನೀಡಲು ಧ್ವನಿವರ್ಧಕವನ್ನು ತಮ್ಮ ಸ್ವಂತ ಹಣದಿಂದ ನೀಡಲಾಗಿದೆ.ನಮ್ಮ ಕಳೆದ  ಮೂರು ವರ್ಷದ ಅವದಿಯಲ್ಲಿ ಸಂಘದ ಆಡಿಟ್ ಮಾಡಿಸಿ ಕ್ಷೇಮ ನಿಧಿಗೆ ಸದಸ್ಯರು ನೀಡಿದ 250 ರೂಗಳ ಶುಲ್ಕದಿಂದ ಕಚೇರಿಗೆ ಸಯಾಯಕಿಯನ್ನು ನೇಮಿಸಿ ಸಂಘವು ದಿನವು ಬಾಗಿಲು ತೆರದು ಕಾರ್ಯ ನಿರ್ವಹಿಸಲು ಅನವು ಮಾಡಿಕೊಟ್ಟಿದ್ದೇವೆ ಹಾಗು ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಈ ತನಕ ಬ್ಯಾಂಕ್ ಖಾತೆಯಲ್ಲಿ ಉಳಿಸಲಾಗಿದೆ ಎಂದರು.

ಕಳೆದ ಬಾರಿ ಬದಲಾವಣೆಗಾಗಿ ಚುನಾವಣೆ ಎದುರಿಸಿ ಅಧಿಕಾರ ಪಡೆದು ಈ ಒಂದಿಷ್ಟು ಕೆಲಸವನ್ನು ಮಾಡಿದ್ದು ಈಗ ಮತ್ತೊಮ್ಮೆ ದೊಡ್ಡಬಳ್ಳಾಪುರ ರಮೇಶ್ ನೇತೃತ್ವದ ತಂಡದಿಂದ ಮತ್ತೆ ಚುನಾವಣೆಯಲ್ಲಿ ಸ್ಪರ್ದಿಸಿ ಬದಲಾವಣೆ ಕಂಡ ಸಂಘ ಇನ್ನು ಮುಂದೆ ಅಭಿವೃದ್ಧಿ ಕಡೆ ಕೆಲಸ ಮಾಡುವುದು ನಮ್ಮ ಮುಖ್ಯ ಗುರಿ ಎಂದರು.

ನಾಮ ಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ನಗರದ ಪ್ರಸಿದ್ದ ದೇವಾಲಯಗಳಲ್ಲೊಂದಾದ ವೇಣು ಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಮ್ಮ ತಂಡದಿಂದ ನಾಮ ಪತ್ರ ಸಲ್ಲಿಸಲಾಗಿದ್ದು ಪತ್ರಕರ್ತ ಸದಸ್ಯರು ಈ ಬಾರಿಯೂ ನಮ್ಮ ತಂಡಕ್ಕೆ ಮತ ನೀಡಿ ಜಯಶೀಲರನ್ನಾಗಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು .

ನಾಮ ಪತ್ರ ಸಲ್ಲಿಸಿದವರ ವಿವರ-
ಜಿ.ಶ್ರೀನಿವಾಸ (ಅಧ್ಯಕ್ಷ ಸ್ಥಾನ) ಉಪಾಧ್ಯಕ್ಷ ಸ್ಥಾನಕ್ಕೆ, ಜೆ.ಆರ್.ಮುನಿವೀರಣ್ಣ, ಶಾಂತಮೂರ್ತಿ, ಎಸ್.ಬಿ.ರಫೀವುಲ್ಲ, ರಾಜ್ಯ ಸಮಿತಿ ಸ್ಥಾನಕ್ಕೆ ವಿ.ಮಂಜುನಾಥ, ಪ್ರದಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್ ರಮೇಶ್, ಕಾರ್ಯದರ್ಶಿ ಸ್ಥಾನಕ್ಕೆ  ಮುರುಳಿಮೋಹನ, ಡಿ.ಎನ್ ಸುರೇಶ್, ಆರ್ ಸತೀಶ್, ಖಜಾಂಚಿ ಸ್ಥಾನಕ್ಕೆ-ಎ ಮಧು.

ಜಿಲ್ಲಾ ಕಾರ್ಯಕಾರಿ ಸಮಿತಿಯ ಸ್ಥಾನಕ್ಕೆ ಎನ್.ಸಿಮನಿವೆಂಕಟರಮಣ, ವಿನಯ್ ಎಂ, ರಾಜ್ ಗೋಪಾಲ್, ಅಬ್ದುಲ್ ಮುಯೀದ್, ಪಿ.ನಟರಾಜು, ಆರ್.ರಂಗನಾಥ್, ಜಯಲಕ್ಷ್ಮಿ, ಎನ್.ಎಸ್ ಮೂರ್ತಿ, ವಿ.ಜಗದೀಶ್, ಬಿ.ರಮೇಶ್, ಚಂದ್ರಪ್ಪ, ಮುನಿಯಪ್ಪ, ಕೃಷ್ಣ ಮೂರ್ತಿ ಸೇರಿದಂತೆ ಇನ್ನು ಅನೇಕರು ತಮ್ಮ ನಾಮಪತ್ರ ಸಲ್ಲಿಸಿದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು