Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ತಾಲಿಬಾನ್ ಮಂತ್ರಿಯ ಆದೇಶ, ಪ್ರಧಾನಿಗಳೇ ಇದಕ್ಕೆ ನಿಮ್ಮ ಉತ್ತರ ಸಿಗಬಹುದೇ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾಲಿಬಾನ್ ಮಂತ್ರಿಯ ಆದೇಶ.......ಮಾನ್ಯ ಪ್ರಧಾನಿಗಳೇ ಇದಕ್ಕೆ ನಿಮ್ಮ ಟ್ವೀಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಗಬಹುದೇ....

ಮೂಲಭೂತವಾದ ಎಂಬ ಶ್ರೇಷ್ಠತೆಯ ವ್ಯಸನ ಎಲ್ಲಿಗೆ ಬಂದು ನಿಂತಿದೆ ಎಂದರೆ, ಭಾರತ ಸರ್ಕಾರ ಮತ್ತು ಬಹುತೇಕ ಜನರಿಂದ  " ಭಯೋತ್ಪಾದಕರು " ಎಂದು ಕರೆಯಲ್ಪಡುತ್ತಿದ್ದ ತಾಲಿಬಾನ್ ಎಂಬ ಸಂಘಟನೆ ಆಫ್ಘಾನಿಸ್ತಾನದಲ್ಲಿ ಆಡಳಿತ ಮಾಡುತ್ತಿರುವಾಗ, ಅದರ ಜೊತೆಗೆ ಸ್ನೇಹ ಬೆಳೆಸಿಕೊಂಡು ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಸಿದ್ಧಾಂತಕ್ಕೆ ಬಲಿಯಾಗಿ, ಆ ತಾಲಿಬಾನಿ ಸರ್ಕಾರದ ಮಂತ್ರಿಯೊಬ್ಬ ನಮ್ಮದೇ ಸರ್ಕಾರದ ಆಹ್ವಾನದ ಮೇರೆಗೆ ಭಾರತಕ್ಕೆ ಬಂದು, ಪತ್ರಿಕಾಗೋಷ್ಠಿ ನಡೆಸುವಾಗ, ಅಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿ ತಾನು ಪತ್ರಿಕಾಗೋಷ್ಠಿ ನಡೆಸುವ ಹಂತಕ್ಕೆ ಬಂದುಬಿಡುತ್ತದೆ.....

ಛೇ ಛೇ ಛೇ.......ತೀರಾ ಅನ್ಯಾಯ, ಅಸಹಾಯಕ ಮತ್ತು ನಾಚಿಕೆಗೇಡಿನ ಸಂಗತಿ..... ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದ ಯಾವ ನಾಗರಿಕ ಮನುಷ್ಯನು ಸಹ ಅಲ್ಲೊಂದು ಸರ್ಕಾರವಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದೊಂದು ಭಯೋತ್ಪಾದಕರ, ಸರ್ವಾಧಿಕಾರಿಗಳ, ಮತಾಂಧರ ಅನಾಗರಿಕ ಆಡಳಿತ. ಅಧಿಕಾರ ಹಿಡಿಯುವಾಗ ಅವರು ಸ್ವಾತಂತ್ರ್ಯ ಯೋಧರೋ, ಭಯೋತ್ಪಾದಕರೋ ಏನೇ ಆಗಿರಲಿ, ಆದರೆ ಒಮ್ಮೆ ಅಧಿಕಾರ ದೊರೆತ ನಂತರ ಕನಿಷ್ಠ ನಾಗರಿಕ ಆಡಳಿತ ನಡೆಸಬೇಕಲ್ಲವೇ......

ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿರುವುದು ಮಾತ್ರವಲ್ಲ, ಸಾರ್ವಜನಿಕವಾಗಿ ಅವರ ಸಹಜ ಓಡಾಟವನ್ನೇ ನಿಯಂತ್ರಿಸುವ ಮಟ್ಟಕ್ಕೆ, ಅವರು ಸಾರ್ವಜನಿಕವಾಗಿ ಕಾಣದಂತೆ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚುವ ಹಂತಕ್ಕೆ, ಅದೂ ಬುರ್ಖಾ ಹಾಕಿಕೊಂಡ ನಂತರವೂ ಇಷ್ಟೊಂದು ಕಠಿಣ ನಿಯಮಗಳನ್ನು ಅನುಸರಿಸಿ, ಮಹಿಳೆ ಎಂದರೆ ಭೋಗದ ವಸ್ತು ಎನ್ನುವ ರೀತಿಯಲ್ಲಿ ಅವರನ್ನು ಪಶುಗಳಂತೆ ಕಾಣುವ, ರಸ್ತೆಯಲ್ಲಿ ಕಲ್ಲು ಹೊಡೆಯುವ ಸರ್ಕಾರದ ಮಂತ್ರಿಯನ್ನು ನಾವು ಆಹ್ವಾನಿಸುವುದು ಎಷ್ಟರಮಟ್ಟಿಗೆ ಸರಿ.....

"ಬೇಟಿ ಪಡಾವೋ ಬೇಟಿ ಬಚಾವೋ " ಎಂದು ಭಾರತ ರೂಪಿಸಿರುವ ನಿಯಮಗಳ ಬಗ್ಗೆ ಆ ತಾಲಿಬಾನ್ ಸಚಿವರಿಗೆ ಯಾರು ಮಾಹಿತಿ ನೀಡಲಿಲ್ಲವೇ. ಭಾರತವೆಂಬುದು ಮಹಿಳಾ ಸ್ವಾತಂತ್ರ್ಯದ, ಮಹಿಳಾ ಸಮಾನತೆಯ, ಮಹಿಳಾ ಪೂಜ್ಯತೆಯ ದೇಶ ಎಂಬುದನ್ನು ಆ ತಾಲಿಬಾನ್ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾದ ಸರ್ಕಾರ ಆತನ ಚಿಂತನೆಗೆ ಒಗ್ಗಿಕೊಂಡಿದ್ದು  ಮತಾಂಧತೆಯ ನಿಜ ಮುಖದ ಬಯಲಾಗುವಿಕೆಯಾಗಿದೆ.

ಮೇಲ್ನೋಟದ ಮಾತುಗಳಿಗೂ ತಾವು ಬದುಕುತ್ತಿರುವ ರೀತಿಗೂ ಒಂದಕ್ಕೊಂದು ಸಂಬಂಧವಿಲ್ಲದ ಮನಸ್ಥಿತಿ ಇದ್ದರೆ ಅದರ ಪರಿಣಾಮವಾಗುವುದು ಹೀಗೆಯೇ.

ಪಾಕಿಸ್ತಾನ ನಮ್ಮ ಶತ್ರು ದೇಶವಾಗಿದೆ. ಅದರ ಮತ್ತೊಂದು ಶತ್ರುದೇಶ ಮತ್ತು ಅದಕ್ಕಿಂತಲೂ ಆನಾಗರಿಕ ಆಡಳಿತ ನಡೆಸುತ್ತಿರುವ, ಭಾರತದ ಸರ್ವನಾಶಕ್ಕೆ ಒಮ್ಮೆ ಪಣತೊಟ್ಟಿದ್ದ ತಾಲಿಬಾನ್ ಆಡಳಿತವಿರುವ ಆಫ್ಘಾನಿಸ್ತಾನದೊಂದಿಗೆ ನಾವು ಮಿತ್ರತ್ವ ಸಾಧಿಸುವುದು ಆಧುನಿಕ ಅಂತರರಾಷ್ಟ್ರೀಯ ರಾಜಕೀಯದ ತಂತ್ರಗಾರಿಕೆ ಎನ್ನಬಹುದೇ.....

ಆ ತಾಲಿಬಾನ್ ಸಚಿವರಿಗೆ ಭಾರತದ ಪ್ರಧಾನ ಮಂತ್ರಿಗಳು ಅಥವಾ ವಿದೇಶಾಂಗ ಮಂತ್ರಿಗಳು ಅಥವಾ ಹಣಕಾಸು ಮಂತ್ರಿಗಳು ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಗಳು ಹೇಳಬೇಕಿತ್ತು.

 "  ಮಾನ್ಯ ತಾಲಿಬಾನ್ ಸಚಿವರೇ, ಹೆಣ್ಣೆಂದರೆ ಅದು ನಿನಗೆ ಜನ್ಮ ನೀಡುವ ತಾಯಿ, ಹೆಣ್ಣೆಂದರೆ ಅದು ನಿನಗೆ ಅರ್ಧಾಂಗಿಯಾಗುವ ಜೀವ, ಹೆಣ್ಣೆಂದರೆ ನಿನ್ನ ತಂಗಿ ಮತ್ತು ನಿನ್ನ ಮಗಳು, ಹೆಣ್ಣೆಂದರೆ ಈ ಜಗತ್ತಿನ ಮುಂದುವರಿಕೆಯ ಮತ್ತು ಸಂತಾನವೃದ್ಧಿಯ ಪ್ರಮುಖ ಜೀವ. ಅವರನ್ನೇ ನೀವು ನಿಯಂತ್ರಣಕ್ಕೊಳಪಡಿಸಿ ಅವರ ಮೇಲೆಯೇ ದೌರ್ಜನ್ಯ ಮಾಡಿ ಆಡಳಿತ ನಡೆಸುವುದು ಧರ್ಮಕ್ಕೂ, ಮಾನವ ಸಮಾಜಕ್ಕೂ ಮಾಡುವ ದ್ರೋಹ.

ಹೆಣ್ಣೇನು ವಿಚಿತ್ರ ಪಶುವಲ್ಲ, ಆಕೆಯೂ ಗಂಡಿನಂತೆ ಸೃಷ್ಟಿಯ ಒಂದು ಜೀವ. ಅದು  ಆಕೆಯ ಆಯ್ಕೆಯೂ ಅಲ್ಲ. ಆಕೆಗೆ ಸಮಾನತೆ ನೀಡಿ, ಶಿಕ್ಷಣ ನೀಡಿ, ಉದ್ಯೋಗ ನೀಡಿ, ಆಕೆಗೆ ಇರುವ ಜೀವನವನ್ನು ಅನುಭವಿಸಲು ಅವಕಾಶ ಕೊಡದಿದ್ದಮೇಲೆ ಆಕೆಯ ಜೀವನಕ್ಕೆ ಅರ್ಥವಿದೆಯೇ, ಆಕೆಯ ಬದುಕಿಗೆ ಅರ್ಥವಿದೆಯೇ, ಇನ್ನೊಬ್ಬರ ಗುಲಾಮರಾಗಿ ದುಡಿಯಲು ಸುಮಾರು 80 ವರ್ಷಗಳ ಜೀವನವನ್ನು ಹಿಂಸಾತ್ಮಕವಾಗಿ ಕಳೆಯಬೇಕೆ. ಹೆಣ್ಣೇನು ನಿಮ್ಮ ಪ್ರತಿಸ್ಪರ್ಧಿಯೂ ಅಲ್ಲ, ವಿರೋಧಿಯು ಅಲ್ಲ. ಹೆಣ್ಣು ನಮ್ಮ ಒಡನಾಡಿ "......


ಅದನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾದ ಸರ್ಕಾರ ಮತ್ತೆ ತನ್ನ ನಿಜ ಆಶಯದ ಮೂಲಭೂತವಾದ ಬಯಲುಗೊಳಿಸಿದೆ. ಧರ್ಮ, ದೇವರು, ರಾಷ್ಟ್ರೀಯತೆ, ದೇಶಭಕ್ತಿ, ಅಭಿವೃದ್ಧಿ ಎಂಬ ಭಾವನಾತ್ಮಕ ವಿಷಯಗಳನ್ನು ಮುಂದೊಡ್ಡಿ ಜನರ ಮಾನಸಿಕತೆಯನ್ನು ಭ್ರಷ್ಟಗೊಳಿಸಿ, ಆ ಮೂಲಕ ಮತ್ತೆ ಹೆಣ್ಣಿನ ಸ್ವಾತಂತ್ರ್ಯವನ್ನೇ ಅಪಹರಣಗೊಳಿಸುವ ಮೂಲವಾದಿತನದ ಕುತಂತ್ರ ಇದೇ ಆಗಿದೆ.

ಇದನ್ನು ಪ್ರತಿಯೊಬ್ಬರು ಖಂಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆ ಪತ್ರಿಕಾಗೋಷ್ಠಿಯನ್ನು ಮಾಧ್ಯಮ ರಂಗ ಬಹಿಷ್ಕರಿಸಿ ಆ ಮಂತ್ರಿಯನ್ನು ವಾಪಸ್ಸು ಕಳಿಸಬೇಕಾಗಿತ್ತು. ಅದು ಏನಾಯಿತೋ ನನಗೆ ಮಾಹಿತಿ ಸಿಗಲಿಲ್ಲ. ಈ ಆಧುನಿಕ ಕಾಲದಲ್ಲಿ ಮಹಿಳೆಯನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಡುವುದು ಅತ್ಯಂತ ಹೇಡಿತನದ, ವಿಕೃತ ಮನಸ್ಥಿತಿ. ಅದನ್ನು ಭಾರತ ಎಂದಿಗೂ ಸಹಿಸಬಾರದು.

ವ್ಯಾವಹಾರಿಕವಾಗಿ ಆಫ್ಘಾನಿಸ್ತಾನದೊಂದಿಗೆ ಅನಿವಾರ್ಯ ಸ್ನೇಹ ಮಾಡಬೇಕಾಗಿರಬಹುದು, ಅದನ್ನು ಒಪ್ಪಿಕೊಳ್ಳೋಣ. ಆದರೆ ಈ ರೀತಿಯ ಅನಾಗರಿಕ ಮಹಿಳಾ ದೌರ್ಜನ್ಯವನ್ನು ಎಂದಿಗೂ ಸಹಿಸಬಾರದು ಮಾನ್ಯ ಪ್ರಧಾನ ಮಂತ್ರಿಗಳೇ.........
ಲೇಖನ: ವಿವೇಕಾನಂದ. ಎಚ್. ಕೆ. 9663750451.

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ