Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಜನವರಿ ತಿಂಗಳೊಳಗೆ ಕಾಂಗ್ರೆಸ್ ಸರ್ಕಾರ ಪತನ

ಚಂದ್ರವಳ್ಳಿ ನ್ಯೂಸ್, ಚನ್ನಪಟ್ಟಣ:
2025ನೇ ಸಾಲಿನ ಜನವರಿ ತಿಂಗಳೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿರುವುದು ಭವಿಷ್ಯ ಅಲ್ಲ
, ವಾಸ್ತವ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುನರುಚ್ಚರಿಸಿದರು.

ಈ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ. ಸೋಮಣ್ಣ ಅವರಿಗೂ ಜೋತಿಷ್ಯ ಕೇಳುವ ಅಭ್ಯಾಸ ಇದೆ. ಆದರೆ, ಅವರು ಸತ್ಯವನ್ನೇ ಹೇಳಿದ್ದಾರೆ. ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿದ್ದೆವು. ನಾನು ಪಾದಯಾತ್ರೆ ಮಾಡಿದರೆ, ಅವರು ಪಾದಯಾತ್ರೆ ಮಾಡುತ್ತಿದ್ದರು. ಆದರೆ, ನಾವಿಬ್ಬರು ಈಗ ಒಂದಾಗಿರುವುದೇ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ ಪ್ರಕರಣವನ್ನು ಬಳಸಿಕೊಂಡು, ಇಡೀ ದೇವೇಗೌಡರ ಕುಟುಂಬ ಮುಗಿಸಲು ಹುನ್ನಾರ ನಡೆದಿತ್ತು. ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಡಿಕೆ ಶಿವಕುಮಾರ್ ಅವರಿಗೆ ಅವರ ಮಾತುಗಳೇ ಮುಳುವಾಗಲಿದೆ.

ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ಹಣಕ್ಕಾಗಿ ಮಹಾನುಭಾವನೊಬ್ಬನಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದೇ ಚನ್ನಪಟ್ಟಣದ ಮಹಾ ಜನತೆಯಿಂದಲೇ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅಂತಹ ಅನಿವಾರ್ಯತೆಯೇ ಇಲ್ಲ.

ಕಾಂಗ್ರೆಸ್ ಎಂದಿಗೂ ನಂಬಿಕೆಗೆ ಅರ್ಹರಲ್ಲ ಎಂದು ಅವರ ಜತೆ ಸಹವಾಸವೇ ಬೇಡ ಎಂದು ಕುಮಾರಸ್ವಾಮಿಗೇ ಹೇಳಿದ್ದೆ. ಆದರೆ, ಅವರ ಮೇಲೆ ಒತ್ತಡ ಹಾಕಿ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ರಚಿಸಲಾಗಿತ್ತು ಎಂದು ವಿಷಾದಿಸಿದರು.

ನಿಖಿಲ್ ನಮ್ಮ ಅಭ್ಯರ್ಥಿ ಎಂದು 11 ದಿನದ ಹಿಂದೆ ಯಾರು ಹೇಳಿರಲಿಲ್ಲ. ಆದರೆ, 6 ತಿಂಗಳಿನಿಂದ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ಗೆ ಈಗ ಏನಾಗಿದೆ? ಅವರ ಬದಲು ಮತ್ತೊಬ್ಬರು ಅಖಾಡದಲ್ಲಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.

ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದೆ ಈ ದೇವೇಗೌಡ. ಮತ್ತೆ ಅವರೇನು ಎಂದು ಹೇಳಲು ನಾನು ಹೋಗಲ್ಲ. ನಿಖಿಲ್ ನನ್ನ ಮೊಮ್ಮಗ ಎನ್ನುವ ಮಾತು ಬೇಕಿಲ್ಲ. ನಾಮಪತ್ರ ಸಲ್ಲಿಸುವವರೆಗೂ ನಿಖಿಲ್ ಹೆಸರನ್ನು ನಾನು ಉಲ್ಲೇಖಿಸಲೇ ಇಲ್ಲ.

ಮಹಾನುಭಾವ ಎನ್ನುವ ಡಿ.ಕೆ.ಶಿವಕುಮಾರ್ ಸೊಕ್ಕು ಮುರಿಯಲು ನಿಖಿಲ್ ಗೆಲುವು ಅನಿವಾರ್ಯ. ಪುಣ್ಯಾತ್ಮರಾದ ಮತದಾರರ ನಿರ್ಣಯವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ. ಇದೇ ತಿಂಗಳ 24ರ ಬೆಳಗ್ಗೆ ನಾನು ಹಾಗೂ ಯಡಿಯೂರಪ್ಪ ಅವರು ಒಟ್ಟಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು