Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸಡಗರ ಸಂಭ್ರಮದ ಸಮರೋಪ ತರಳಬಾಳು ನುಡಿಹಬ್ಬ

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ಕನ್ನಡಿಗರು ನಾಡು ಮತ್ತು ನುಡಿಯ ಬಗ್ಗೆ ನಿರಾಭಿಮಾನಿಗಳಾದರೆ ಒಂದು ಕಾಲಕ್ಕೆ ಕಾವೇರಿಯನ್ನು ಸಹ ಕಳೆದುಕೊಳ್ಳಬೇಕಾಗಬಹುದು. ಕನ್ನಡದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಭಾಷೆಯ ಬಗೆಗಿನ ಆಚರಣೆ ನವೆಂಬರ್ ೧ಕ್ಕೆ ಮಾತ್ರವೇ ಸೀಮಿತವಾಗಬಾರದು ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಸ್.ಹರಿಶಂಕರ್ ಹೇಳಿದರು.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಜರುಗಿದ ತರಳಬಾಳು ನುಡಿಹಬ್ಬ ೨೦೨೪ರ ಸಮರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳ್ನಾಡಿದರು.

ಕನ್ನಡ ಭಾಷೆಗೆ ಹಲವು ಸಂಕಷ್ಟಗಳಿವೆ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ರಾಜಕಾರಣಿಗಳು, ಭಾಷಾಭಿಮಾನಿಗಳು, ಧರ್ಮಗುರುಗಳು ಸೇರಿದಂತೆ ಎಲ್ಲರೂ ಚರ್ಚೆ ಮಾಡಬೇಕಾದ ಅಗತ್ಯ ಇದೆ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಳೆಗನ್ನಡ ಓದುವುದರಿಂದ ದೂರವಾಗಿದ್ದಾರೆ. ೨೦ನೇ ಶತಮಾನದಲ್ಲಿ ಹಲವು ಪ್ರಮುಖ ಗ್ರಂಥಗಳು ಪ್ರಕಟಗೊಂಡಿದ್ದರೂ ಅವು ಓದುಗರಿಗೆ ಮುಟ್ಟುತ್ತಿಲ್ಲ ಎಂದು ವಿಷಾದಿಸಿದರು.

ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಾಚನ ನೀಡಿ ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಉತ್ತಮ ಸ್ಥಾನ, ಸನ್ಮಾನಗಳು ಪಡೆಯುವ ಅವಕಾಶಗಳು ಲಭಿಸುತ್ತದೆ. ಸಾಹಿತಿಗಳ, ವಿದ್ವಾಂಸರ ಸ್ಪೂರ್ತಿ ಪಡೆದು ನಿಮ್ಮ ವ್ಯಕ್ತಿತ್ವವನ್ನು ದೊಡ್ಡ ಮಟ್ಟದಲ್ಲಿ ರೂಪಿಸಿಕೊಳ್ಳುವುದರ ಜೊತೆಗೆ ನಿಮ್ಮಲ್ಲಿ ಅವರ ಪ್ರೇರಣಾ ಶಕ್ತಿಯು ಸಹ ಹೆಚ್ಚಾಗಲಿ. ನಾವು ನಮ್ಮ ಸಮಯವನ್ನೇ ಸಮಾಜದ ಉಳಿತಿಗಾಗಿ ಮೀಸಲಿಟ್ಟಿದ್ದೇವೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ ೨೧ನೇ ಶತಮಾನದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನಸಾಂಪ್ರಾಯಿಕವಾಗಿ, ಧಾರ್ಮಿಕವಾಗಿ ಕ್ರಾಂತಿ ಮಾಡುತ್ತಿರುವ ಏಕೈಕ ಮಠ ಸಿರಿಗೆರೆ ಮಠ. ಕನ್ನಡ ಭಾಷೆಯ ಉಳಿವಿಗೆ ಚಳುವಳಿಯ ಅವಶ್ಯಕತೆ ಇದ್ದು, ತರಳಬಾಳು ಶ್ರೀಗಳ ಸಾನಿಧ್ಯದಲ್ಲಿ ಚಳುವಳಿಯನ್ನು ಹಮ್ಮಿಕೊಳ್ಳಬೇಕಿದೆ ಎಂದರು.

ಬೆಂಗಳೂರು ಕಸಾಪ ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಂ.ಪಟೇಲ ಪಾಂಡು ಮಾತನಾಡಿ  ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ನುಡಿಹಬ್ಬ ಯಶಸ್ವಿಯಾಗಿದೆ. ಸಿರಿಗೆರೆಯ ವಿದ್ಯಾಸಂಸ್ಥೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶ್ರೀಮಠದ ದಾಸೋಹವು ನಿಸ್ವಾರ್ಥ ಸೇವೆಯಾಗಿದೆ. ಶಿಕ್ಷಣವು ದುಬಾರಿಯಾಗುತ್ತಿರುವ ಇಂದಿನ ಕಾಲದಲ್ಲಿ ಸಿರಿಗೆರೆ ಮಠವು ಮಕ್ಕಳಿಗೆ ಉಚಿತ ದಾಸೋಹ ಮೂಲಕ ಶಿಕ್ಷಣ ನೀಡುತ್ತಿದೆ. ಇದು ಕಾಯಕದ ಪರಮ ಸೇವೆ ಹಾಗೂ ಶಿಕ್ಷಣ ಜ್ಯೋತಿಯ ಮಾರ್ಗವಾಗಿದೆ ಎಂದರು.

ಚಿತ್ರದುರ್ಗ ಜಿಲ್ಲಾ ಕಸಪಾಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ಮಾತನಾಡಿ ಸಿರಿಗೆರೆಯ ತರಳಬಾಳು ನುಡಿಹಬ್ಬವು ಗತವೈಭವ ಸಾರುವ ಹಾಗೆ ಯಶಸ್ವಿಯಾಗಿದೆ. ಇಂತಹ ಹತ್ತು ಹಲವು ಕಾರ್ಯಕ್ರಮಗಳು ಶ್ರೀಮಠದಿಂದ ಜರುಗಿದರೆ ಮಕ್ಕಳಲ್ಲಿ ಸಂಸ್ಕಾರ, ಶ್ರದ್ಧೆ ರೂಪಗೊಳ್ಳುತ್ತದೆ ಎಂದರು.

ದಾವಣಗೆರೆ ಜಿಲ್ಲಾ ಕಸಪಾಧ್ಯಕ್ಷರಾದ ಬಿ.ವಾಮದೇವಪ್ಪ ಮಾತನಾಡಿ ಶ್ರೀಗಳು ಆಡಳಿತಕ್ಕಾಗಿ ವಿಶೇಷ ತಂತ್ರಾಂಶವನ್ನು ರೂಪಿಸಿದ್ದು, ಆದರ್ಶ ಶಿಕ್ಷಣನ ಸಂಸ್ಥೆಯಾಗಿ ಸಿರಿಗೆರೆ ಮಠ ಬೆಳೆದಿದೆ ಜೊತಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

೨೦೨೪ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಿಕ್ಕಜಾಜೂರಿನ ಡಾ.ಎಚ್.ಆರ್.ಸ್ವಾಮಿ, ಚಿತ್ರದುರ್ಗದ ಎಚ್.ಬಿ.ಓಬಳೇಶ್ ಶ್ರೀಮಠದಿಂದ ಸನ್ಮಾನಿಸಲಾಯಿತು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಕನ್ನಡ ವಿಷಯದಲ್ಲಿ ಶೇ.೧೦೦ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಸಂಸ್ಥೆಯ ಆಢಳಿತಾಕಾರಿ ಡಾ.ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ.ಎಸ್.ಜತ್ತಿ, ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.



ಅಕ್ಕನ ಬಳಗದ ವತಿಯಿಂದ ನಾದವೇದಭಕ್ತಿ ನೃತ್ಯ ಪ್ರದರ್ಶನ, ಬಿ.ಎಲ್.ಆರ್ ಕಾಲೇಜಿನ ವಿದ್ಯಾರ್ಥಿಗಳಿಂದ ಆನೆ ಬಂತೊಂದಾನೆ ಇಂದ್ರನ ಪಟ್ಟದಾನೆ ಯಕ್ಷಗಾನ ನೃತ್ಯ ಹಾಗೂ ಸಿರಿಗೆರೆಯ ಶ್ರೀ ತರಳಬಾಳು ಕಲಾಸಂಘದಿಂದ ಪುಣ್ಯಕೋಟಿ ನೃತ್ಯರೂಪಕಗಳು ಜರುಗಿದವು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು