Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಜನಾಕರ್ಷಣೆ ಪಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನ, ಮಾರ್ಚ್-1ರವರೆಗೆ ವಿಸ್ತರಣೆ

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆಯುತ್ತಿರುವ 33ನೇ ಫಲ-ಪುಷ್ಪ ಪ್ರದರ್ಶನ ಜನಾಕರ್ಷಣೆಯತ್ತಾ ದಾಪುಗಾಲು ಹಾಕುತ್ತಿದೆ.
ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಶ್ರಮ ವಹಿಸಿ ಮಾಡಿರುವಂತ ಪ್ರದರ್ಶನದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಕಲಾಕೃತಿ
, ಐತಿಹಾಸಿಕ ಕೋಟೆ, ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ, ಜಾನೂರ್ ಕಲಾಕೃತಿಗಳು, ಬಿ.ಎಲ್ ವೇಣು ಅವರ ಕುರಿತ ಮಾಹಿತಿಗಳ ಪ್ರದರ್ಶನ ಜನಮನದಲ್ಲಿ ಉಲಿದಿದೆ.
ಹಾಗಾಗಿ ಸಾರ್ವಜನಿಕರು, ಶಾಲಾ ಕಾಲೇಜ್ ಗಳ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳ ಒತ್ತಾಯದ ಮೇರೆಗೆ ಫಲ-ಪುಷ್ಪ ಪ್ರದರ್ಶನವನ್ನು ಮಾರ್ಚ್-01ರವರೆಗೆ ವಿಸ್ತರಣೆ ಮಾಡಲಾಗಿದೆ. ಇಷ್ಟೊಂದು ದಿನ ಫಲಪುಷ್ಪ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ದಾಖಲೆಯಾಗಿದೆ.


ಪ್ರದರ್ಶನದಲ್ಲಿ ಅಪರೂಪದ ಹೂವಿನ ಗಿಡಗಳು, ನಾಯಕನಹಟ್ಟಿ ತಿಪ್ಪೇರುದ್ರನ ಬೃಹತ್ ಕಟ್ಟಡದ ಆಕೃತಿ, ತಿಪ್ಪೇಶನ ಪ್ರತಿಮೆ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಸಾರ್ವಜನಿಕರನ್ನ ತನ್ನತ್ತ ಸೆಳೆಯುತ್ತಿದೆ.

ಫಲ-ಪುಷ್ಪ ಪ್ರದರ್ಶನವನ್ನು ಕಳೆದ ಫೆಬ್ರವರಿ 20 ರಿಂದ 22ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಜನರು ತಮ್ಮ ಮಕ್ಕಳೊಂದಿಗೆ ಈ ಸುಂದರ ಪ್ರದರ್ಶನ ವೀಕ್ಷಿಸಲು ಸಾಗರೋಪಾಯದಿಯಲ್ಲಿ ಆಗಮಿಸುತ್ತಿರುವುದರಿಂದ ಮತ್ತೊಂದು ದಿನ ವಿಸ್ತರಣೆ ಮಾಡಲಾಯಿತು. ಸಾರ್ವಜನಿಕರು ಫಲಪುಷ್ಪ ವೀಕ್ಷಣೆಗೆ ಸಾಲುಗಟ್ಟಿ ಬರುತ್ತಿದ್ದು ಕೋರಿಕೆ ಮೇರೆಗೆ ಮಾರ್ಚ್-1ರ ತನಕ ವಿಸ್ತರಣೆ ಮಾಡಲಾಗಿದೆ.


ಜನಾಕರ್ಷಣೆ ಮಾಡುತ್ತಿರುವ ಕಲಾಕೃತಿಗಳು-
ತೋಟಗಾರಿಕೆ ಆವರಣದಲ್ಲಿ ಹಲವು ಶಿಲ್ಪಿಗಳು ಪರಿಶ್ರಮದಿಂದ ಅರಳಿರುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಹೊರಮಠ
, ಒಳಮಠ ದೃಶ್ಯ, ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿ, ಸಾಹಿತಿ ಬಿ.ಎಲ್. ವೇಣು, ಜಾನೂರ್ ಕಲಾಕೃತಿಗಳು, ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಮರಳು ಕಲೆ ಪ್ರದರ್ಶನ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲುಮರದ ತಿಮ್ಮಕ್ಕ ಕಲಾಕೃತಿಗಳು ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆ ಆಗಿವೆ.

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ:
ಪಂಚಗಣಾಧೀಶ್ವರರಲ್ಲೊಬ್ಬರಾದ ಶ್ರೀ ತಿಪ್ಪೇರುದ್ರಸ್ವಾಮಿ ಅವರು ಪಣಿಯಪ್ಪನೆಂಬ ಶಿವಭಕ್ತನ ಇಚ್ಛೆಯಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ನೆಲಸಿ ಪ್ರಸಿದ್ದ ಪಡೆದವರಾಗಿದ್ದಾರೆ.
ಹಿಂದು-ಮುಸ್ಲೀಂ ಭಕ್ತರಿಂದ ಪೂಜಿಸಲ್ಪಡುವ ಹಟ್ಟಿ ತಿಪ್ಪೇಶ ಅವರು
ಮಾಡಿದಷ್ಟು ನೀಡು ಭಿಕ್ಷೆಎಂಬ ತತ್ವ ಭೋದಿಸಿದ್ದಲ್ಲದೆ ಹಿರೇಕೆರೆ, ಚಿಕ್ಕಕೆರೆ ಮೊದಲಾದ ಐದು ಕೆರೆಗಳನ್ನು ನಿರ್ಮಿಸಿ ರೈತರ ಪಾಲಿನ ಭಗೀರಥ ಎನ್ನಿಸಿಕೊಂಡರು.




 ನಮ್ಮ ವೇಣು”:
ಡಾ.ಬಿ.ಎಲ್ ವೇಣು ಕಥೆಗಾರರಾಗಿ ಮತ್ತು ಚಲನಚಿತ್ರ ಸಂಭಾಷಣೆಕಾರರಾಗಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕಥಾ ಸಂಕಲನಗಳು
, ಕಾದಂಬರಿಗಳು, ನಾಟಕಗಳು, ಸಿನಿಮಾ ಕ್ಷೇತ್ರದಲ್ಲಿ ಚಿತ್ರಕಥೆ ರಚನೆ, ಸಂಭಾಷಣೆ ರಚಿಸಿದ ಚಲನ ಚಿತ್ರಗಳು ವೇಣುರವರಿಗೆ  ಸಂಭ್ರಮದ ಗೌರವ ಸಮರ್ಪಣೆಯ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ.

ತೆಂಗಿನ ಗರಿ ಕಲಾಕೃತಿಗಳು:
ಜಾನೂರು ಕಲೆಯೂ ಇಂಡೊನೇಷ್ಯಾದಲ್ಲಿ ಜಾನೂರು ಕೂನಿಂಗ್ ಎಂದು ಪರಿಚಿತವಾಗಿದ್ದು ಜಾನೂರು ಎಂದರೆ ತೆಂಗಿನ ಗರಿ
, ಕೂನಿಂಗ್ ಎಂದರೆ ಹಳದಿ ಇಂಡೊನೇಶ್ಯಾದ ಜಾವನೀಸ್ ಸಂಸ್ಕೃತಿಯ ಪದ. ತೆಂಗಿನ ಎಲೆಗಳನ್ನು ಬಳಸಿ ವಿಶಿಷ್ಟ ವಿನ್ಯಾಸಗಳನ್ನು ರೂಪಿಸಲಾಗಿದೆ. ಈ ಕಲೆ ಪರಿಚಯಿಸುವ ವಿವಿಧ ಕಲಾಕೃತಿಗಳು ಕೂಡ ಪ್ರದರ್ಶನದಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ.

ಮರಳಾಕೃತಿ:
ಮರಳು ಮತ್ತು ನೀರನ್ನು ಬಳಸಿ ಯಾವುದೇ ಕೃತಕ ಅಂಟು ಪದಾರ್ಥಗಳಿಲ್ಲದೆ ಕಲಾಕೃತಿ ನಿರ್ಮಿಸಲಾಗಿದೆ. ಈ ಕಾಲಾಕೃತಿಯ ದೃಶ್ಯ ನೋಡುಗರಿಗೆ ಅಧ್ಭುತ ಅನುಭವ ನೀಡುತ್ತಿದೆ. ಕೋಟೆಯ ದೃಶ್ಯ ಹಾಗೂ ಒನಕೆ ಓಬವ್ವ ಅವರ ಮರಳಾಕೃತಿಗಳು ಗಮನ ಸೆಳೆಯುತ್ತಿವೆ.


ಜೇನುಗಳ ಪರಾಗಸ್ಪರ್ಶ ಕಲಾಕೃತಿ:
ಜೇನುನೊಣಗಳ ಕಲಾಕೃತಿಗಳು ಅತ್ಯಂತ ಆಕರ್ಷಕವಾಗಿದ್ದು ನೋಡುಗರು ಮೂಕಸ್ಮಿತರಾಗುತ್ತಿದ್ದಾರೆ. ಸಾಲುಮರದ ತಿಮ್ಮಕ್ಕನವರ ಕಲಾಕೃತಿಗಳು,  ಜಟಕಾ ಬಂಡಿ (ಟಾಂಗಾ)
, ಹುಡುಗ, ಹುಡುಗಿ, ಟಾಂಗಾ ಹಾಗೂ ಕುದುರೆ ಕಲಾಕೃತಿಗಳಿಗೆ ಹೂವಿನಿಂದ ಅಲಂಕಾರ ಮಾಡಿರುವುದು ಆಕರ್ಷಣೆಯಾಗಿದೆ. ಚಿತ್ರದುರ್ಗ ಕೋಟೆಯ ಆಕರ್ಷಣೆಗಳಲ್ಲಿ ಒಂದಾದ ಉಯ್ಯಾಲೆ ಕಂಬದ ಕಲಾಕೃತಿ, ಟಿ-20 ವರ್ಲ್ಡ್ ಕಪ್‍ ನಲ್ಲಿ ಆಟವಾಡಿದ ಸದಸ್ಯರುಗಳ ಕಲಾಕೃತಿಗಳನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಲಾಗಿದೆ. ರೈತರು ಬೆಳೆದಿರುವ ಹೂ, ತರಕಾರಿ, ಹಣ್ಣು ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ. 500ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳು, ಹಲವು ಬಗೆಯ ವಿಶೇಷ ಹೂಗಳನ್ನು ಬಳಸಿ ಚಿತ್ತಾಕರ್ಷಕವಾಗಿ ರಚನೆ ಮಾಡಲಾಗಿರುವ ವರ್ಣ ರಂಜಿತ ಕಲಾಕೃತಿಗಳು ಸೇರಿದಂತೆ ತಾವು ಎಂದೂ ಕೇಳಿರದ, ನೋಡಿರದಂತಹ ಹಲವು ಬಗೆಯ ಪುಷ್ಪಗಳು, ಪುಷ್ಪ ರಸಿಕರಿಗೆ ಮುದ ನೀಡುತ್ತಿವೆ.

ಪ್ರದರ್ಶನದ ಅಂಗವಾಗಿ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತೇಜನ ನೀಡಿದ್ದು ಸಹ ಫಲಪುಷ್ಪ ಪ್ರದರ್ಶನ ಜನಮನಗೆಲ್ಲಲು ಕಾರಣವಾಯಿತು.


ಬೆಂಗಳೂರಿನ ಲಾಲ್‍ಬಾಗ್ ಮಾದರಿಯಲ್ಲಿ ಜಿಲ್ಲಾಡಳಿತವು ಫಲ-ಪುಷ್ಪ ಪ್ರದರ್ಶನ ಆಯೋಜಿಸಿದ್ದು ಸಾಕಷ್ಟು ಗಮನ ಸೆಳೆದಿದೆ. ಅಲ್ಲದೆ ಜನಪ್ರತಿನಿಧಿಗಳು, ಶಾಲಾ ಕಾಲೇಜ್ ಗಳ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳ ಕೋರಿಕೆ ಮೇರೆಗೆ ಮಾರ್ಚ್-1ರ ತನಕ ಫಲಪುಷ್ಪ ಪ್ರದರ್ಶನ ವಿಸ್ತರಿಸಲಾಗಿದೆ.
ಜಿ.ಸವಿತಾ
, ಜಂಟಿ ನಿರ್ದೇಶಕಿ, ತೋಟಗಾರಿಕೆ ಇಲಾಖೆ, ಚಿತ್ರದುರ್ಗ.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು