Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ತಾಳಿ ಕಟ್ಟುವ ಶುಭ ವೇಳೆಯಲ್ಲೇ ಕ್ಷುಲ್ಲಕ ಕಾರಣ ಸ್ಥಗಿತಗೊಂಡ ಮದುವೆ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಡಿಯಲು ನೀರು ಕೊಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಕೆಲಸದಲ್ಲಿರುವ ಜಗಳೂರು ಮೂಲದ ಯುವಕ ಹಾಗೂ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಶಿರಾ ಮೂಲದ ಯುವತಿ ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದರು. ಯುವಕ-ಯುವತಿ ಇಬ್ಬರೂ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್​ ವೃತ್ತಿ  ಮಾಡುತ್ತಿದ್ದರು.


 ಹಿರಿಯೂರು ನಗರದ ಹೊರ ವಲಯದಲ್ಲಿರುವ ಬಲಿಜ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಂಪ್ರದಾಯದಂತೆ ಇತ್ತ ಯಾವುದೇ ಸಮಸ್ಯೆ ಇಲ್ಲದೆ ಶನಿವಾರ ರಾತ್ರಿ ರಿಸೆಪ್ಷನ್ ಕಾರ್ಯಕ್ರಮವನ್ನು ಮಾಡಿ ಮುಗಿಸಿದ್ದರು.

ತಡ ರಾತ್ರಿ ವಧುವಿನ ಕಡೆಯವರು ಕುಡಿಯಲು ನೀರು ಕೇಳಿದ್ದಾರೆ. ಆಗ ವರನ ಕಡೆಯವರು ಕ್ಯಾಟರಿಂಗ್​ ಮಾಡಿಸಿದ್ದು ಈಗ ತಡವಾಗಿದೆ. ಇಷ್ಟು ಹೊತ್ತಿಗೆ ನೀರು ಕೊಡಲ್ಲ. ಅವರು ಎಲ್ಲ ಬೀಗ ಹಾಕಿಕೊಂಡು ತೆರಳಿದ್ದಾರೆ. ನಮ್ಮಿಂದ ಕೊಡಲು ಸಾಧ್ಯವಿಲ್ಲ. ಬೇರೆ ಕಡೆ ಕುಡಿಯಿರಿ ಎಂದಿದ್ದಾರೆ ಎಂದು ತಿಳಿಸಿದ್ದಾರೆ.

ಇದರಿಂದ ಬೇಸರಗೊಂಡ ವಧು(ಯುವತಿ)ವಿನ ಕಡೆಯವರು ನೀರಿಲ್ಲದಿದ್ದರೆ ಹೆಂಗೆ, ಮದುವೆಗೆ ಆಗಮಿಸಿರುವ ಸಂಬಂಧಿಕರಿಗೆಲ್ಲ ಕುಡಿಯಲು ನೀರು ನೀಡಿದ್ದರೆ ಹೇಗೆ, ಅದೂ ಅಲ್ಲದೆ ಕಲ್ಯಾಣ ಮಂಟಪ ಊರ ಹೊರಭಾಗದಲ್ಲಿದೆ. ಇಷ್ಟೊತ್ತಿನಲ್ಲಿ ನೀರು ಎಲ್ಲಿ ಸಿಗುತ್ತದೆ, ಈಗ ಏನು ಮಾಡುವುದು ಎಂದು ಕಾರಣ ತಿಳಿಸಿ ವಧುವಿನ ಕಡೆಯವರೇ ಮದುವೆ ರದ್ದುಗೊಳಿಸಿದ್ದಾರೆ. ಹೀಗೆ ಶುರುವಾದ ಮನಸ್ತಾಪ ಹಸೆಮಣೆ ಏರುವ ಮೊದಲೇ ಮದುವೆ ಮುರಿದು ಬೀಳಲು ಕಾರಣವಾಗಿದೆ ಎಂದು ವರನ ದೊಡ್ಡಪ್ಪ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಏಕಾಏಕಿ ವಧು ಮದುವೆ ನಿರಾಕರಣೆ ಮಾಡಿದ್ದಕ್ಕೆ ವರ ಕಂಗಾಲಾಗಿದ್ದಾನೆ. ಆ ರಾತ್ರಿ ನೀರಿನ ಜಗಳ‌ಮರೆತು ಮದುವೆಗೆ ಒಪ್ಪುವಂತೆ ವರ ಹಾಗೂ ಆತನ ಪೋಷಕರು ವಧುವಿಗೆ ಹಾಗೂ ಆಕೆಯ ಕುಟುಂಬಕ್ಕೆ ಮನವಿ ಮಾಡಿದ್ದಾರೆ. ಆದರೆ ಈ ವರನ ಜೊತೆ ಮದುವೆ ಬೇಡವೇ ಬೇಡ ಎಂದು ವಧು ನಿರಾಕರಿಸಿ, ಗಂಟು ಮೂಟೆ ಕಟ್ಟಿ‌ಕೊಂಡು ಸಂಬಂಧಿಕರು ಮನೆಗೆ ತೆರಳಿದ ಘಟನೆ ನಡೆದಿದೆ.ಮದುವೆ ಕಾರ್ಯ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ ಘಟನೆ ಕೂಡಾ ಜರುಗಿದೆ. ಒಟ್ಟಾರೆ ಕ್ಷುಲ್ಲಕ ಕಾರಣ ನೀಡಿ ಹಸೆಮಣೇ ಏರು ಸಂದರ್ಭದಲ್ಲಿ ಮದುವೆ ಮುರಿದು ಬಿದ್ದಿರುವುದು ಸೋಜಿಗವಾಗಿದೆ.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ