ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಭಾಷೆಗೆ ೨,೦೦೦ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಮತ್ತು ೮ ಜ್ಞಾನಪೀಠ ಪ್ರಶಸ್ತಿಗಳ ಗರಿಮೆ ಇದೆ. ಇಂತಹ ಶ್ರೀಮಂತ ಭಾಷೆಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕನ್ನಡ ನಾಡು ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸರು, ಪುರಂದರದಾಸರು, ಸರ್ವಜ್ಞ ಮತ್ತು ಬಸವಣ್ಣನವರಂತಹ ಯುಗಪುರುಷರು ಜನಿಸಿದ ಪವಿತ್ರ ಭೂಮಿಯಾಗಿದೆ. ಅಲ್ಲದೆ ಡಿವಿಜಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು, ವಿಕೃ ಗೋಕಾಕ್, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಸಿದ್ದಲಿಂಗಯ್ಯ, ಕೆ.ಎಸ್. ನಿಸಾರ್ ಅಹಮದ್ ಹಾಗೂ ಚಂದ್ರಶೇಖರ ಕಂಬಾರ ಅವರಂತಹ ಮಹಾನ್ ಸಾಹಿತಿಗಳನ್ನು ನೀಡಿದ ಹಿರಿಮೆ ನಮ್ಮ ಭಾಷೆಗಿದೆ.
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, "ನೀವೇ ಕನ್ನಡ ಭಾಷೆಯ ನೈಜ ರಾಯಭಾರಿಗಳು. ಕನ್ನಡವು ನಮಗೆ ಸಿಕ್ಕಿರುವ ಅಮೂಲ್ಯ ಆಭರಣವಿದ್ದಂತೆ. ಈ ಆಭರಣವನ್ನು ನಿಮ್ಮ ಕೈಯಲ್ಲಿ ಒಪ್ಪಿಸಲಾಗಿದೆ.
ಇದರ ಕಾಂತಿ ಹಾಗೂ ಹೊಳಪು ಎಂದಿಗೂ ಕುಂದದಂತೆ ಕಾಯ್ದುಕೊಳ್ಳುವ ದೊಡ್ಡ ಹೊಣೆಗಾರಿಕೆ ನಿಮ್ಮ ಮೇಲಿದೆ. ಎಲ್ಲರೂ ಕನ್ನಡವನ್ನು ಪ್ರೀತಿಸಿ, ಬೆಳೆಸಿ ಮತ್ತು ಉಳಿಸಿ, ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸಬೇಕು" ಎಂದು ಕರೆ ನೀಡಿದ್ದಾರೆ.




