ಟ್ರಂಪ್ ಅಧಿಕಾರ- ಅನ್ಯ ರಾಷ್ಟ್ರಗಳ ಪ್ರಜೆಗಳಿಗೆ ಸಂಕಷ್ಟ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೇರಿಕಾದ ನೂತನ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಿಂದಲೇ ಅಲ್ಲಿ ನೆಲೆಸಿರುವ ಅನ್ಯ ರಾಷ್ಟ್ರಗಳ ಪ್ರಜೆಗಳಿಗೆ ಸಂಕಷ್ಟ ಎದುರಾಗಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಅಕ್ರಮ ವಲಸಿಗರನ್ನು ಅಮೇರಿಕಾದಿಂದ ಹೊರಹಾಕಿದ ಬೆನ್ನಲ್ಲೇ ಈಗ ವಲಸಿಗ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ. ಉದ್ಯೋಗಿಗಳಿಗಾಗಿ ನೀಡುವ ಪ್ರತ್ಯೇಕ ವೀಸಾದಲ್ಲಿ ಬದಲಾವಣೆ ಆಗಲಿದೆ.
ಹೆಚ್1ಬಿ ವೀಸಾ ಹಾಗೂ ಎಲ್ 1, ಎಲ್ 2 ವೀಸಾ ಹೊಂದಿರುವವರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಪ್ರಧಾನಿ ಮೋದಿ ಅಮೆರಿಕದ ಭಾರತೀಯ ಉದ್ಯೋಗಿಗಳ ಪರ ನಿಲ್ಲುವ ಧೈರ್ಯ ತೋರುತ್ತಾರಾ? ಎಂದು ಕಾಂಗ್ರೆಸ್ ಸವಾಲ್ ಹಾಕಿದೆ.
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.