Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಭಗವಂತ ಯಾವ ರೂಪದಿ ಬರುತ್ತಾನೆಯೋ ಊಹಿಸಲು ಸಾಧ್ಯವಿಲ್ಲ- ವೆಂಕಟೇಶ್

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಗವಂತ ಯಾವ ರೂಪದಲ್ಲಿ ನೊಂದವರ ಪಾಲಿಗೆ ಬರುತ್ತಾನೆಯೋ ಊಹಿಸಲು ಸಾಧ್ಯವಿಲ್ಲ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತ ವೆಂಕಟೇಶ್ ತಿಳಿಸಿದರು.


ತಾಲೂಕಿನ ಚಿಕ್ಕಮ್ಮನಹಳ್ಳಿ ಸಮೀಪದ ದೇವರಹಟ್ಟಿ ಗ್ರಾಮದ ನಿವಾಸಿಗಳು ಮತ್ತು ಸದ್ಭಕ್ತರಾದ ಲಕ್ಷ್ಮೀ ಚೆನ್ನಕೇಶವ ಅವರ ಮನೆಯ ಆವರಣದಲ್ಲಿ ಶ್ರೀಶಾರದಾಶ್ರಮದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ತಮ್ಮ ಜೀವನದಲ್ಲಿ ದೇವರ ಕೃಪಾನುಭವಗಳನ್ನು ಹಂಚಿಕೊಂಡರು. 


ನಿರಂತರ ಶ್ರೀರಾಮರಕ್ಷಾ ಸ್ತೋತ್ರ ಪಠಣ ಮತ್ತು ಲಿಖಿತ ಜಪದ ಮೂಲಕ ಜೀವನದ ಕಷ್ಟಗಳಿಂದ ಸುಲಭವಾಗಿ ಪಾರಾದ ನಾನು ಚಳ್ಳಕೆರೆ ಶ್ರೀಶಾರದಾಶ್ರಮದ ಸಂಪರ್ಕದ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳುತ್ತೀದ್ದೇನೆ ಎಂದು ಸ್ವಾನುಭವಗಳನ್ನು ವಿನಿಮಯ ಮಾಡಿಕೊಂಡರು.   

                  ಆಧ್ಯಾತ್ಮಿಕ ಚಿಂತಕ ಚೇತನ್ ಕುಮಾರ್ ಮಾತನಾಡಿ ಪ್ರತಿಯೊಬ್ಬ ಸಹಮಾನವರನ್ನು ದೇವರಂತೆ ಪ್ರೀತಿಸಬೇಕು, ಅವರಲ್ಲಿರುವ ಮಹನೀಯ ಗುಣವನ್ನು  ಗುರುತಿಸಿ ಅದನ್ನು ಪ್ರೋತ್ಸಾಹಿಸಬೇಕು,ಸ್ವಾಮಿ ವಿವೇಕಾನಂದರ ಜೀವ ಶಿವಸೇವೆಯ ಆದರ್ಶವನ್ನು ಇಂದಿನ ಯುವ ಜನಾಂಗ ಮತ್ತು ನಾಗರಿಕರು ಅನುಷ್ಠಾನ ಮಾಡುವ ಅಗತ್ಯತೆಯನ್ನು ಪ್ರತಿಪಾದಿಸಿದರು. 


ಸತ್ಸಂಗದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಕುಮಾರಿ ಗಾಯನ ಅವರು ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳನ್ನು ಹೇಳಿದರು. 


ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮಾತೆಯವರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.   
ಸತ್ಸಂಗ ಸಭೆಯಲ್ಲಿ ಲಕ್ಷ್ಮೀ ಚೆನ್ನಕೇಶವ, ಡಾ.ಭೂಮಿಕಾ, ಋತಿಕ್, ಸಂತೋಷ್, ಮಾನ್ಯ,ತಿಪ್ಪಮ್ಮ, ಪಾಪಣ್ಣ,ಮಲ್ಲೇಶ್, ಚಿತ್ತಮ್ಮ, ಶಾರದಾ, ಇಂದು, ವಿಜಯಮ್ಮ, ಬೋರಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯ ಮಕ್ಕಳು ಮತ್ತು ಸದ್ಭಕ್ತರು ಭಾಗವಹಿಸಿದ್ದರು.

 

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು