Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಭವಿಷ್ಯದ ಅನಾಹುತಗಳನ್ನು ತಡೆಗಟ್ಟುವ ಸಾಮರ್ಥ್ಯ ವಿಶ್ವೇಶ್ವರಯ್ಯನವರಲ್ಲಿತ್ತು

ಭವಿಷ್ಯದ ಅನಾಹುತಗಳನ್ನು ತಡೆಗಟ್ಟುವ ಸಾಮರ್ಥ್ಯ ವಿಶ್ವೇಶ್ವರಯ್ಯನವರಲ್ಲಿತ್ತು
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ವಿಶ್ವವೇ ಜ್ಞಾನಪಿಸಿಕೊಳ್ಳುವಂತ ಕೊಡುಗೆ ನೀಡಿರುವುದರಿಂದ ಇಂದಿಗೂ ಎಲ್ಲರ ಮನದಲ್ಲಿ ಸ್ಮರಣೀಯವಾಗಿ ಉಳಿದಿದ್ದಾರೆಂದು ಅಪರಾಧ ಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಸ್ಮರಿಸಿಕೊಂಡರು.

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ೧೬೪ ಜನ್ಮ ದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ಸ್ ಸಿವಿಲ್ ಇಂಜಿಯರ್ಸ್ಚ ಅಸೋಸಿಯೇಷನ್ ವತಿಯಿಂದ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರನೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ಇಂಜಿನಿಯರ್ಸ್ಭ ಡೇಯನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಶಿಕ್ಷಕರಾಗಿದ್ದು, ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವುದರಲ್ಲಿ ವಿಶೇಷತೆಯಿದೆ ಎಂದು ಹೇಳಿದರು.

ಸರ್ ಎಂ.ವಿಶ್ವೇಶ್ವರಯ್ಯನವರ ಪೂರ್ವಜರು ಆಂಧ್ರದಿಂದ ಕರ್ನಾಟಕಕ್ಕೆ ಬಂದು ಪೂಜೆ, ಪುನಸ್ಕಾರ ಮಾಡಿಕೊಂಡು ಜೀವಿಸುತ್ತಿದ್ದರು. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ವಿಶ್ವೇಶ್ವರಯ್ಯನವರು ಇಂಜಿನಿಯರ್ ಆಗಿ ದೇಶ ಮರೆಯಲಾರದಂತ ಕೊಡುಗೆ ಕೊಟ್ಟಿದ್ದಾರೆಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಇಂಜಿನಿಯರ್, ಗುತ್ತಿಗೆದಾರರನ್ನು ಅವಮಾನಿಸಲಾಗುತ್ತಿದೆ. ಎಲ್ಲವನ್ನು ಮೆಟ್ಟಿ ನಿಲ್ಲಬೇಕಾದರೆ ಸರ್.ಎಂ.ವಿ.ರವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕಾದರೆ ಸರ್.ಎಂ.ವಿಶ್ವೇಶ್ವರಯ್ಯನವರ ಸಲಹೆ ಪಡೆದುಕೊಳ್ಳಲಾಗುತ್ತಿತ್ತು. ಒಂದು ಕಟ್ಟಡ, ಅಣೆಕಟ್ಟೆ ಕಟ್ಟಿದರೆ ಅದು ಎಷ್ಟು ಕಾಲ ಬಾಳಿಕೆ ಬರಬಹುದೆಂಬ ದೂರದೃಷ್ಟಿಯಿತ್ತು. ತಮಿಳುನಾಡು-ಕರ್ನಾಟಕದ ನಡುವೆ ಇಂದಿಗೂ ಕಗ್ಗಂಟಾಗಿ ಉಳಿದಿರುವ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಬ್ರಿಟೀಷರ ತಾರತಮ್ಯವನ್ನು ದಾಖಲೆ ಸಮೇತ ಸರ್.ಎಂ.ವಿಶ್ವೇಶ್ವರಯ್ಯನವರು ವಿರೋಧಿಸಿದ್ದರು. ಅಂತಹ ತಾಕತ್ತು ಅವರಲ್ಲಿತ್ತೆಂದು ಗುಣಗಾನ ಮಾಡಿದರು.
ಒಂದು ಅಣೆಕಟ್ಟೆ ಕಟ್ಟಿದರೆ ಮಳೆಗಾಲದಲ್ಲಿ ಎಷ್ಟು ನೀರು ನಿಲ್ಲಬಹುದು.

ಮಳೆಯಿಲ್ಲದಿದ್ದಾಗ ಏನೇನು ಸಮಸ್ಯೆಗಳಾಗುತ್ತದೆ. ಕೃಷಿಕರಿಗೆ ಇದರಿಂದ ಏನು ಪ್ರಯೋಜನ ಎನ್ನುವ ಚಿಂತನೆ ಸರ್.ಎಂ.ವಿ.ಯವರಲ್ಲಿತ್ತು. ಕಟ್ಟಡ ಕಟ್ಟಿದರೆ ಇಂಜಿನಿಯರ್‌ಗಳ ಕೆಲಸ ಅಷ್ಟಕ್ಕೆ ಮುಗಿಯುವುದಿಲ್ಲ. ಕಾಲ ಕಾಲಕ್ಕೆ ತಪಾಸಣೆ ಮಾಡಬೇಕು. ಮುಂದೆ ಎದುರಾಗಬಹುದಾಗ ಅನಾಹುತಗಳನ್ನು ತಡೆಗಟ್ಟುವ ಸಾಮರ್ಥ್ಯ ವಿಶ್ವೇಶ್ವರಯ್ಯನವರಲ್ಲಿದ್ದ ಕಾರಣಕ್ಕೆ ಭಾರತ ರತ್ನ ಎನಿಸಿಕೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಡಿಪೇಸ್ ಅಧ್ಯಕ್ಷ ಎಸ್.ಎಸ್.ಪ್ರಸಾದ್ ಮಾತನಾಡಿ ಯಾವುದೇ ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಕ್ವಾಲಿಫೈಡ್ ಇಂಜಿನಿಯರ್‌ಗಳಿರಬೇಕು. ಹಾಗಾಗಿ ಹೊಸಬರಿಗೆ ಪ್ರೇರಣೆಯಾಗಬೇಕೆಂಬುದು ನಮ್ಮ ಉದ್ದೇಶ. ಆರು ವರ್ಷಗಳಿಂದ ಇಂಜಿನಿಯರ್ಸ್ಣ ಡೇ ಆಚರಿಸಿಕೊಂಡು ಬರುತ್ತಿದ್ದೇವೆ. ಜೊತೆಗೆ ತಾಂತ್ರಿಕವಾಗಿ ಅವಶ್ಯವಿರುವ ಕಾರ್ಯಕ್ರಮ, ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಕೂಡ ಪ್ರತಿ ವರ್ಷವೂ ಇರುತ್ತದೆ. ಹೊಸ ಯೋಜನೆಗಳ ಮಾಹಿತಿ, ನೂನ್ಯತೆ ಬಗ್ಗೆ ಚರ್ಚಿಸಿ ಕಮಿಟಿ ರಚಿಸಿ ನಾನ್ ಟೆಕ್ನಿಕಲ್ ಹ್ಯಾಂಡ್‌ಗಳು ಜಾಸ್ತಿಯಾಗುತ್ತಿರುವುದನ್ನು ತಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆಂದು ತಿಳಿಸಿದರು.

ಸಿಡಿಪೇಸ್ ಕಾರ್ಯದರ್ಶಿ ಮಾದವ್ ಎಂ.ಪೊಕಾಳೆ, ಜೆ.ಎಸ್.ಡಬ್ಲ್ಯು, ಜನರಲ್ ಮ್ಯಾನೇಜರ್ ರಾಮಚಂದ್ರಪ್ಪ, ಅಬ್ದುಲ್ ಗಫಾರ್, ದಿವಾಕರ್ ಎಂ.ವಿ. ಇವರುಗಳು ವೇದಿಕೆಯಲ್ಲಿದ್ದರು.

ಶ್ರೀಕಾಂತ್ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿದರು. ಶಶಿಧರ್ ಗುಪ್ತ ನಿರೂಪಿಸಿದರು.
ಸಿವಿಲ್ ಇಂಜಿನಿಯರ್‌ಗಳಾದ ಎಂ.ಕೆ.ರವೀಂದ್ರ, ಪಿ.ಎಲ್.ಸುರೇಶ್‌ರಾಜು, ಆರ್ಕಿಟೆಕ್ಟ್ ಸುಜಾತ ಸೇರಿದಂತೆ ಅನೇಕ ಇಂಜಿನಿಯರ್‌ಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು