Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಗ್ರಾಮೀಣ ಕೃಷಿ ಕಾರ್ಯಾನುಭವದ ಕಾರ್ಯಾಗಾರ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು
,ತೂಬಗೆರೆ ಹೋಬಳಿ      ಬೆಂಗಳೂರು ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಆನರ್ಸ್)ಕೃಷಿ, ಬಿ. ಎಸ್ಸಿ (ಆನರ್ಸ್)ಕೃಷಿ ವ್ಯವಹಾರ ನಿರ್ವಹಣೆ ಹಾಗೂ ಬಿ.ಟೆಕ್ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ಕೃಷಿ ಕಾರ್ಯನುಭವದ,ಕಾರ್ಯಗಾರನ್ನು ಅಂತರಹಳ್ಳಿಯಲ್ಲಿಆಯೋಜಿಸಲಾಗಿತ್ತು.

ಶಿಬಿರಾರ್ಥಿಗಳು ರೈತರೊಂದಿಗೆ ಹಲವು ಬಗೆಯ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹಲವಾರು ರೈತ ಸಹಕಾರಿ ಕಾರ್ಯಕ್ರಮಗಳನ್ನು ಮಾಡಿದ್ದು, ರೈತರ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿರುವ ವಿವಿಧ ರೀತಿಯ ನೂತನ ತಳಿಗಳು ಹಾಗೂ ಕೃಷಿ ತಂತ್ರಜ್ಞಾನಗಳೊಂದಿಗೆ ವೈವಿಧ್ಯಮಯ ಬೆಳೆ ಪದ್ಧತಿಗಳಿಗೆ ಅನುಗುಣವಾಗಿ ರೈತರ ಸಹಭಾಗಿತ್ವದಲ್ಲಿ ಬೆಳೆಗಳನ್ನು ಬೆಳೆಸಿ ಸುತ್ತಮುತ್ತಲಿನ ಎಲ್ಲಾ ಪ್ರಗತಿ ರೈತ ಭಾಂದವರಿಗೆ ಪರಿಚಯಿಸಲಾಯಿತು.

   ಸಮಾರಂಭದಲ್ಲಿ, ಕೃಷಿ ವಿದ್ಯಾರ್ಥಿಗಳು ನಿರ್ಮಿಸಿರುವ 'ಹಸಿರು ಸಿರಿ' ಬೆಳೆಗಳ ತಾಕು ಮತ್ತು ಪೌಷ್ಟಿಕ ಕೈ ತೋಟವನ್ನು ಕೃಷಿ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ.ಎಸ್.ವಿ ಸುರೇಶರವರು ಉದ್ಘಾಟಿಸಿದರು.

 ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ ಪೌಷ್ಟಿಕ ಕೈ ತೊಟ  ಸಮಗ್ರ ಬೇಸಾಯ ಕೃಷಿ. ಪದ್ಧತಿಗಳು.  ಕುರಿ, ಕೋಳಿ, ಮೇಕೆ ಸಾಕಾಣಿಕೆ .

ವಿವಿಧ ಬಗೆಯ ಔಷದಿ ಸಸಿಗಳು.  ಜಲಕೃಷಿ (ಹೈಡ್ರೋಫೋನಿಕ್ಸ್)  ಸಮಗ್ರ ಕೀಟ ನಿರ್ವಹಣೆ. ಸಾವಯವ ಕೃಷಿ ಕುರಿತಾದ ಮಾಹಿತಿ  ಜೈವಿಕ ಇಂಧನ ಸಸ್ಯಗಳ ತಾಕು.  ಕಿರು ಜಲನಯನ ಮಾದರಿ .

 ಕೃಷಿ ಯಂತ್ರೋಪಕರಣಗಳು. ರೈತ ಸಹಭಾಗಿತ್ವ ತಂತ್ರಜ್ಞಾನ ಪ್ರಾತ್ಯೆಕ್ಷಿಕೆಗಳು ತಾಕಿ ನಾ ವಿಶೇಷ ಆಕರ್ಷಣೆಗಳಾಗಿದ್ದವು

 ಈ ಸಂದರ್ಭದಲ್ಲಿ, ಕೃಷಿ ವಿಸ್ತರಣೆ ನಿರ್ದೇಶಕ ಡಾ.ವೈ.ಎನ್. ಶಿವಲಿಂಗಯ್ಯ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ.ಬಿ. ಜಿ ಹನುಮಂತರಾಯಪ್ಪ, ಗ್ರಾಮಪಂಚಾಯತಿ ಅಧ್ಯಕ್ಷರಾದ ಎಂ ಶ್ರೀನಿವಾಸ್ ಮತ್ತು ಶಿಬಿರಾಧಿಕಾರಿ ಡಾ.ಹೆಚ್. ಕೆ ಪಂಕಜ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು