Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಜಾತಿಗಣತಿಯಲ್ಲಿ ವಿಶ್ವಕರ್ಮ ಎಂದು ಬರೆಸಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಗಣತಿಯಲ್ಲಿ ವಿಶ್ವಕರ್ಮ ಎಂದು ಬರೆಸುವಂತೆ ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನ ನಿಕಟ ಪೂರ್ವ ಅಧ್ಯಕ್ಷ ಪ್ರಸನ್ನಕುಮಾರ್ ಮನವಿ ಮಾಡಿದರು.


ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜವನ್ನು ೪೧ ಉಪ ಜಾತಿಗಳಿಂದ ಕರೆಯಲಾಗುತ್ತದೆ. ಕಮ್ಮಾರಿಕೆ, ಬಡಗಿ, ಚಿನ್ನ-ಬೆಳ್ಳಿ, ಶಿಲ್ಪಕಲೆ, ಕಂಚಿನ ಕೆಲಸ ಮಾಡಿಕೊಂಡು ವಿಶ್ವಕರ್ಮರು ಜೀವನ ಸಾಗಿಸುತ್ತಿದ್ದಾರೆ.

ಹೊಟ್ಟೆಪಾಡಿಗಾಗಿ ಈಗಲೂ ಹಳ್ಳಿಗಾಡಿನಲ್ಲಿ ಕಮ್ಮಾರಿಕೆ ಕೆಲಸ ಮಾಡುವವರಿದ್ದಾರೆ. ಹಿಂದಿನ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ನಮ್ಮ ಜನಸಂಖ್ಯೆ ೧೫ ಲಕ್ಷ ತೋರಿಸಲಾಗಿದೆ. ಕ್ರಿಶ್ಚಿಯನ್ ವಿಶ್ವಕರ್ಮ ಎನ್ನುವ ಪದ ಗೊಂದಲ ಮೂಡಿಸಿದೆ. ಹಾಗಾಗಿ ಗಣತಿಯಲ್ಲಿ ನಿಖರವಾಗಿ ವಿಶ್ವಕರ್ಮ ಎಂದೆ ಬರೆಸುವಂತೆ ಪ್ರಸನ್ನಕುಮಾರ್ ವಿನಂತಿಸಿದರು.

ವಡ್ಡನಾಳ್‌ನ ಶಂಕರಾತ್ಮಾನಂದ ಸ್ವಾಮೀಜಿ ಮಾತನಾಡಿ ಸೆ.೨೨ ರಿಂದ ಅ.೭ ರವರೆಗೆ ನಡೆಯುವ ಗಣತಿಯಲ್ಲಿ ವಿಶ್ವಕರ್ಮ ಎಂದು ಬರೆಸಬೇಕು. ಕುಲಕಸುಬು ವಿಚಾರ ಬಂದಾಗ ಅವರವರ ವೃತ್ತಿಯನ್ನು ಬರೆಸಿಕೊಳ್ಳಿ. ಯಾವುದೇ ಕಾರಣಕ್ಕು ಉಪ ಜಾತಿ, ಉಪ ಪಂಗಡಗಳನ್ನು ಬರೆಸುವುದು ಬೇಡ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವುದಕ್ಕಾಗಿ ಗಣತಿದಾರರು ಮನೆ ಮನೆಗೆ ಬಂದಾಗ ಸಂಪೂರ್ಣ ಮಾಹಿತಿ ಕೊಡಿ. ಸರಿಯಾದ ಸಂಖ್ಯೆ ತಿಳಿಯಬೇಕಾಗಿರುವುದರಿಂದ ಯಾರು ಸಮೀಕ್ಷೆಯಿಂದ ವಂಚಿತರಾಗಬೇಡಿ. ಹಿಂದೂ ಧರ್ಮಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆಯಿದೆ. ವಿಶ್ವಕರ್ಮ ಕ್ರಿಶ್ಚಿಯನ್ ಎನ್ನುವ ಪದ ತೆಗೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ನೈಜ ಗಣತಿ ಹೊರಬಿದ್ದಾಗ ಮಾತ್ರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಶಂಕರಾತ್ಮಾನಂದ ಸ್ವಾಮೀಜಿ ಹೇಳಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಶಂಕರಾಚಾರ್ಯ, ಕಾರ್ಯಾಧ್ಯಕ್ಷ ಎಂ.ಶಂಕರಮೂರ್ತಿ, ವಿಶ್ವಕರ್ಮ ನಿಗಮದ ಸದಸ್ಯ ಡಿ.ವೆಂಕಟೇಶ್, ಮಾಜಿ ಸದಸ್ಯರುಗಳಾದ ಸಿ.ನಾರಾಯಣಚಾರ್, ಎಸ್.ನಾಗೇಂದ್ರಚಾರ್, ಚಳ್ಳಕೆರೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್.ಚಂದ್ರಶೇಖರಾಚಾರ್, ಮೊಳಕಾಲ್ಮುರುವಿನ ಉಮೇಶ್, ಲೋಕೇಶ್ ನಾಯಕನಹಟ್ಟಿ, ಶ್ರೀಧರಾಚಾರ್, ಸಂಜಯ್, ಭಾನು ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು