ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಸದಸ್ಯತ್ವ ಅಭಿಯಾನ ಪ್ರಾರಂಭಗೊಂಡಿದ್ದು, ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಜೆಡಿಎಸ್ ನಾಯಕರು ಮನವಿ ಮಾಡಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಾಯಕರು ಮಾತನಾಡಿ, ಈಗಲೇ ಈ ನಂಬರ್ʼಗೆ 9964 002028 ಮಿಸ್ಡ್ ಕಾಲ್ ನೀಡಿ, ಲಿಂಕ್ ಬಳಸಿ ಜೆಡಿಎಸ್ ಪಕ್ಷದ ಸದಸ್ಯತ್ವ ಸ್ವೀಕರಿಸಿ ಎಂದು ಕರೆ ನೀಡಿದರು.
ಸಶಕ್ತ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶಕ್ತಿ ತುಂಬಲು ಜೆಡಿಎಸ್ ಪಕ್ಷದ ಸಕ್ರಿಯ ಸದಸ್ಯರಾಗಿ ಮತ್ತು ನಿಮ್ಮವರನ್ನು ನೋಂದಣಿ ಮಾಡಿಸುವಂತೆ ಕರೆ ನೀಡಿದರು.
ರಾಜ್ಯದಲ್ಲಿ ಜನತಾದಳ ಪಕ್ಷವನ್ನು ಮುಗಿಸಲು ಎಂದಿಗೂ ಯಾರಿಗೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಮಂತ್ರಿ, ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರು ಎಚ್ಚರಿಸಿದರಲ್ಲದೆ ಜನರೊಂದಿಗೆ ಜನತಾದಳ ಸದಾ ಇರಲಿದೆ ಎಂದು ತಿಳಿಸಿದರು.
50 ಲಕ್ಷ ಜನರ ಸದಸ್ಯತ್ವದ ಗುರಿಯೊಂದಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಆರಂಭಿಸಲಾಗಿದ್ದು ಈ ನಂಬರ್ʼಗೆ 9964002028 ಮಿಸ್ಡ್ ಕಾಲ್ ನೀಡಿ, ಲಿಂಕ್ ಬಳಸಿ ಜೆಡಿಎಸ್ ಪಕ್ಷದ ಸದಸ್ಯತ್ವ ಪಡೆಯಿರಿ ಎಂದು ಅವರು ಮನವಿ ಮಾಡಿದರು.
ಸಶಕ್ತ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ರಾಜ್ಯದ ಜನ ಶಕ್ತಿ ನೀಡಬೇಕಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ರಾಜ್ಯದಲ್ಲಿ ಉತ್ಸಾಹದಿಂದ ಹೆಚ್.ಡಿ. ದೇವೇಗೌಡರ ಕಣ್ಣಮುಂದೆಯೇ ಸಶಕ್ತವಾಗಿ ಪಕ್ಷವನ್ನು ಕಟ್ಟೋಣ. ಕರ್ನಾಟಕದ ಪ್ರತಿಯೊಬ್ಬ ನಾಗರಿಕರ ಹೃದಯವನ್ನು ಗೆಲ್ಲುವ ಕೆಲಸ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷರು, ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ನಾಯಕ ಬಂಡೆಪ್ಪ ಕಶಾಂಪುರ ಸೇರಿದಂತೆ ಹಾಲಿ ಮಾಜಿ ಶಾಸಕರು, ಹಾಲಿ ಮಾಜಿ ಲೋಕಸಭಾ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.