ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರುಶ್ರೀರಂಗಪಟ್ಟಣಕಲ್ಲಹಳ್ಳಿಮೇಲುಕೋಟೆಮಾರ್ಗದಲ್ಲಿ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರದಂದು ಪ್ಯಾಕೇಜ್ ಟೂರ್‍ನ್ನು ಮೇ 31 ರಿಂದ ಆರಂಭಸಲಿದೆ.

- Advertisement - 

ಪ್ಯಾಕೇಜ್ ಟೂರ್‍ನಲ್ಲಿ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ /ರಾತ್ರಿ ಊಟವನ್ನು ಹೊರತುಪಡಿಸಿ ವಯಸ್ಕ ಪ್ರಯಾಣಿಕರಿಗೆ ಕರ್ನಾಟಕ ಸಾರಿಗೆ ಪ್ರಯಾಣದರ ಮುಂಗಡ ಬುಕಿಂಗ್ ಸೇರಿ ರೂ. 670/-, 6 ರಿಂದ 12 ವರ್ಷದ ಮಕ್ಕಳಿಗೆ ರೂ. 500/-, ನಿಗದಿಪಡಿಸಲಾಗಿದೆ.

- Advertisement - 

ಕೆಎಸ್‍ಆರ್‍ಟಿಸಿ ಬಸ್ ಬೆಂಗಳೂರಿನಿಂದ ಬೆಳಿಗ್ಗೆ 6.30 ಗಂಟೆಗೆ ನಿರ್ಗಮಿಸಿ 8.30 ಗಂಟೆಗೆ ನಿಮಿಷಾಂಬ ದೇವಸ್ಥಾನ ತಲುಪುವುದು. ನಿಮಿಷಾಂಬ ದೇವಸ್ಥಾನ ವೀಕ್ಷಣೆ ಹಾಗೂ ಉಪಹಾರ ಮುಗಿಸಿ ನಿಮಿಷಾಂಬದಿಂದ ಶ್ರೀರಂಗಪಟ್ಟಣಕ್ಕೆ ಹೊರಟು ಶ್ರೀರಂಗನಾಥ (ಆದಿರಂಗ) ದೇವಸ್ಥಾನ ವೀಕ್ಷಣೆಯ ನಂತರ ಶ್ರೀರಂಗಪಟ್ಟಣದಿಂದ ಹೊರಟು ಕಲ್ಲಹಳ್ಳಿಯ ಭೂ ವರಾಹ ಸ್ವಾಮಿ ವೀಕ್ಷಣೆ ನಂತರ ಊಟ ಮುಗಿಸಿ ಮಧ್ಯಾಹ್ನ 2.30 ಗಂಟೆಗೆ ಮೇಲುಕೋಟೆ ತಲುಪುವುದು. ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನ, ತಂಗಿ ಕೊಳ, ಅಕ್ಕ ಕೊಳ, ರಾಯಗೋಪುರಂ ವೀಕ್ಷಣೆ ಮುಗಿಸಿ ಸಂಜೆ 5.00 ಗಂಟೆಗೆ ಮೇಲುಕೋಟೆಯಿಂದ ಬೆಂಗಳೂರಿಗೆ ಪ್ರಯಾಣಿಸಿ ರಾತ್ರಿ 8.15 ಗಂಟೆಗೆ ಬೆಂಗಳೂರು ತಲುಪುವುದು.

 ಸಾರ್ವಜನಿಕ ಪ್ರಯಾಣಿಕರು ಈ ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯದ ಟಿಕೆಟ್‍ನ್ನು ಜಾಲತಾಣ www.ksrtc.in    ಅಥವಾ  www.ksrtc.karnataka.gov.in ರ ಮೂಲಕ ಪಡೆಯಬಹುದು.
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080-26252625 / 7760990100 / 7760990560 / 7760990287 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

 

Share This Article
error: Content is protected !!
";