ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಪರ್ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಳಿ ನರೇಗಾ ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಹಣವಿಲ್ಲ.! ಕಳೆದ 6 ತಿಂಗಳಿಂದ ಸ್ಯಾಲರಿ ನೀಡದ ಪರಿಣಾಮ ನೌಕರರು ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೀದಿಗೆ ಇಳಿದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮರೆತು, ಸ್ವಯಂ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಒತ್ತುಕೊಟ್ಟಿದ್ದರಿಂದ ಸಾವಿರಾರು ನರೇಗಾ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲು ನೀಡಿದರೂ ಕಾಂಗ್ರೆಸ್ ಸರ್ಕಾರ ಮಾತ್ರ ಸಂಬಳ ನೀಡುತ್ತಿಲ್ಲ.! ಎಂದು ಬಿಜೆಪಿ ದೂರಿದೆ.
ಪಾಪರ್ ಸರ್ಕಾರದ ಲಾಟರಿ ಸಿಎಂ ಸಿದ್ದರಾಮಯ್ಯ ನವರೇ, ಕೂಡಲೇ ನರೇಗಾ ನೌಕರರಿಗೆ ಸಂಬಳ ಪಾವತಿಸಿ ಅನುಕೂಲ ಮಾಡಿಕೊಡಿ ಇಲ್ಲವೇ, ಸರ್ಕಾರ ದಿವಾಳಿಯಾಗಿದೆ ಎಂದು ಅಧಿಕೃತ ಘೋಷಣೆ ಮಾಡಿ, ಮನೆಗೆ ನಡೆಯಿರಿ.! ಎಂದು ಬಿಜೆಪಿ ತಾಕೀತು ಮಾಡಿದೆ.