ಪಿ ಓಪಿ ಗಣೇಶ ಮೂರ್ತಿಗಳಿಗೆ ನಿಷೇಧ ಕಡ್ಡಾಯ-ಜಿಲ್ಲಾಧಿಕಾರಿ ಬಸವರಾಜು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪರಿಸರ ಸ್ನೇಹಿ ಮಣ್ಣಿನ ಗಣಪಗಳಿಗೆ ಆದ್ಯತೆ ನೀಡಲಾಗಿದ್ದು
   ಪಿಓಪಿ ಗಣೇಶ ಮೂರ್ತಿಗಳಿಗೆ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಅಲ್ಲದೆ ಬಣ್ಣದ ಗಣಪಗಳನ್ನು ಬಳಸದಂತೆ   ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ರವರು ಸಾರ್ವಜನಿಕವಾಗಿ ತಿಳಿಸಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್  ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಗೌರಿ ಗಣೇಶ, ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಗಣೇಶ ಪ್ರತಿಷ್ಟಾಪನೆಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅವಘಡಗಳು ಸಂಭವಿಸಿದರೆ ಮುಖ್ಯಸ್ಥರೆ ಜವಾಬ್ದಾರಿಯಾಗಿರುತ್ತಾರೆ. ಪರಿಸರಕ್ಕೆ ಧಕ್ಕೆಯಾಗದಂತೆ ವಿಸರ್ಜನೆ ಮಾಡಬೇಕು. ಡಿಜೆಗೆ ಸರ್ಕಾರದ ಸೂಚನೆಗಳ ಪ್ರಕಾರ ಅನುಮತಿ ಪಡೆಯಬೇಕು. ಸಿಂಗಲ್ ವಿಂಡೋ ಮೂಲಕ ಅನುಮತಿ ನೀಡಲಾಗುವುದು. ಪ್ರತಿವರ್ಷದಂತೆ ಸೌಹಾರ್ದಯುತವಾಗಿ ಆಚರಿಸೋಣ. ಒಬ್ಬರ ಮನಸ್ಸಿಗೆ ನೋವಾಗದಂತೆ ಪ್ರೀತಿ, ವಿಶ್ವಾಸದಿಂದ ಹಬ್ಬಗಳನ್ನ ಆಚರಿಸೋಣ ಎಂದರು. 

- Advertisement - 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಮಾತನಾಡಿ ಜಿಲ್ಲೆಯ ಜನರ ಸುರಕ್ಷತೆ ನಮಗೆ ಮುಖ್ಯ, ಆಚರಣೆಗಳು ಸಂತೋಷದಿಂದ ಕೂಡಿರಬೇಕು. ಸರ್ಕಾರದ ನಿಯಮಾನುಸರ ಆಚರಿಸುವುದು ಸೂಕ್ತವಾಗಿದೆ. ಪರಿಸರಕ್ಕೆ ಹಾನಿಯಾಗದ ಮಣ್ಣಿನ ಗಣಪಗಳನ್ನು ಬಳಸಬೇಕು. ಗಣೇಶ ವಿಸರ್ಜನೆಗಳನ್ನು ತಾಲ್ಲೂಕು ಪಂಚಾಯತಿ, ನಗರಸಭೆ, ಪುರಸಭೆಗಳಿಂದ ಗುರುತಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಡಿಜೆ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅಂತಿಮ ಅದನ್ನು ಪಾಲಿಸಲೇಬೇಕು. ಗಣಪತಿ ಪ್ರತಿಷ್ಟಾಪಿಸಿರುವವರು ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಸೌಂಡ್ ಸಿಸ್ಟಂ ಮಾಲೀಕರು ಡಿಜೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಬಾಬಾ ರಾಜ್ಯಾದ್ಯಂತ ಸರ್ಕಾರದ ಆದೇಶ ಇದೆ. ನಿರ್ದಿಷ್ಟವಾದ ಸೂಚನೆಗಳಿವೆ. ಅದರ ಪ್ರಕಾರ ಪಾಲನೆ ಮಾಡಬೇಕು ಎಂದರು.

- Advertisement - 

ಈದ್ ಮಿಲಾದ್ ಕುರಿತಾಗಿ ತಾಲ್ಲೂಕಿನಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದ ಇತಿಹಾಸವಿಲ್ಲ. ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರಂತೆ ಇದ್ದೇವೆ. ಈದ್ ಮೀಲಾದ್ ಹಬ್ಬದಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಸಿಹಿ ಹಂಚಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.

ಪೌರಾಯುಕ್ತ ಕಾರ್ತಿಕೇಶ್ವರ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ತಾತ್ಕಾಲಿಕ ಹೊಂಡ ತೆರೆಯಲಾಗುವುದು. ಬೆಸ್ಕಾಂ, ಅಗ್ನಿಶಾಮಕ, ಪೊಲೀಸ್, ಇಲಾಖೆಗಳಿಂದ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಅನುಮತಿ ನೀಡಲಾಗುವುದು ಎಂದರು.

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ, ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಎಬಿ ಬಸವರಾಜು, ಎಸ್ಪಿ ಸಿ.ಕೆ ಬಾಬಾ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ವಿಭಾ ವಿದ್ಯಾರಾಠೊಡ್, ಡಿವೈಎಸ್ಪಿ ರವಿ.ಪಿ, ತಾಲ್ಲೂಕು ಪಂಚಾಯತಿ ಇಓ ಮಂಜುನಾಥ ಹರ್ತಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ, ಪೌರಾಯುಕ್ತ ಕಾರ್ತಿಕೇಶ್ವರ, ಇನ್ಸ್ಪೆಕ್ಟರ್ ಗಳಾದ ನವೀನ್ ಕುಮಾರ್, ಅಮರೇಶ್ ಗೌಡ ಮತ್ತಿತ್ತರರು ಇದ್ದರು.

 

 

Share This Article
error: Content is protected !!
";