ಖಾಲಿ ನಿವೇಶನಗಳಲ್ಲಿನ ಗಿಡ, ಪೊದೆ ಸ್ವಚ್ಛಗೊಳಿಸಿ-ಅಧ್ಯಕ್ಷೆ ಸಮಿತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಖಾಲಿ ನಿವೇಶನಗಳಲ್ಲಿ ಪೊದೆಯಂತೆ ಗಿಡ ಗಂಟೆಗಳು ಬೆಳೆದಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆಯಲ್ಲದೆ ವಿಷ ಜಂತುಗಳು
, ಕೆಟ್ಟ ಹುಳುಗಳು ಸೇರಿಕೊಳ್ಳುತ್ತಿರುವ ಕಾರಣಕ್ಕಾಗಿ ಮಾಲೀಕರುಗಳು ತಮ್ಮ ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡ ಪೊದೆಗಳನ್ನು

- Advertisement - 

 ಹದಿನೈದು ದಿನಗಳಲ್ಲಿ ತೆಗೆಸಿ ಸ್ವಚ್ಛಗೊಳಿಸಿಕೊಂಡು ಕಾಂಪೌಂಡ್ ನಿರ್ಮಿಸಿ ಮಾಲೀಕರ ಹೆಸರು, ವಿಳಾಸ, ಖಾತಾ/ ಅಸೆಸ್‌ಮೆಂಟ್ ಸಂಖ್ಯೆ, ಅಳತೆ, ಪಿ.ಐ.ಡಿ.ನಂ. ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನೊಳಗೊಂಡ ನಾಮಫಲಕ ಅಳವಡಿಸಿ ಬಂದೋಬಸ್ತ್ ಮಾಡಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತ ಈರುಳ್ಳಿ ರಘು ಮನವಿ ಮಾಡಿದ್ದಾರೆ.

- Advertisement - 

ಒಂದು ವೇಳೆ ಮಾಲೀಕರುಗಳು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳದಿದ್ದರೆ ನಗರಸಭೆಯಿಂದ ಗಿಡ ಗಂಟೆಗಳನ್ನು ತೆಗೆಸಿ ಅದಕ್ಕೆ ತಗಲುವ ವೆಚ್ಚವನ್ನು ಕೆ.ಎಂ.ಬುಕ್‌ನಲ್ಲಿ ಷರಾ ಬರೆದು ಮಾಲೀಕರುಗಳಿಂದ ವಸೂಲಿ ಮಾಡಲಾಗುವುದಲ್ಲದೆ ದಂಡ ವಿಧಿಸಲಾಗುವುದು.

ಇದಕ್ಕೆ ನಿವೇಶನಗಳ ಮಾಲೀಕರುಗಳು ಸ್ಪಂದಿಸದಿದ್ದರೆ ಖಾತಾ, ಇ-ಸ್ವತ್ತುಗಳನ್ನು ನೀಡಲಾಗುವುದಿಲ್ಲ ಎಂದು ಅಧ್ಯಕ್ಷೆ ಸುಮಿತ ಬಿ.ಎನ್.ಈರುಳ್ಳಿ ರಘು ಎಚ್ಚರಿಸಿದ್ದಾರೆ.

- Advertisement - 

 

 

Share This Article
error: Content is protected !!
";