ಸದೃಢ ಹಾಗೂ ಸ್ವಾವಲಂಬಿ ಭಾರತ ಕಟ್ಟುತ್ತಿರುವ ಪ್ರಧಾನಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡತನ ಮುಕ್ತ ಭಾರತದತ್ತ ದೃಢ ಹೆಜ್ಜೆ” 11 ವರ್ಷಗಳ ಹಿಂದಿನ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಜ್ಞೆ ಕೇವಲ ಘೋಷಣೆಯಲ್ಲ, ಬದಲಾವಣೆಯ ದೃಢ ಸಂಕಲ್ಪವಾಗಿತ್ತು. ಪ್ರತಿಯೊಬ್ಬ ಭಾರತೀಯರನ್ನು ಬಡತನದಿಂದ ಮುಕ್ತಗೊಳಿಸುವ ಗುರಿ, ದೂರ ದೃಷ್ಟಿ ಹಾಗೂ ಸದೃಢ ನಾಯಕತ್ವದಲ್ಲಿ ಸಾಕಾರಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

- Advertisement - 

ದೇಶದ ತೀವ್ರ ಬಡತನವನ್ನು 27.1% ರಿಂದ ಕೇವಲ 5.3% ಕ್ಕೆ ಇಳಿದಿದ್ದು, 269 ಮಿಲಿಯನ್ ಭಾರತೀಯರನ್ನು ತೀವ್ರ ಬಡತನದಿಂದ ಹೊರತರಲಾಗಿರುವ ವರದಿ ಶತಕೋಟಿ ಭಾರತೀಯರು ಹೆಮ್ಮೆಪಡುವ ಸಂಗತಿಯಾಗಿದೆ.

- Advertisement - 

ಮಾನ್ಯ ಪ್ರಧಾನಿಗಳು ದೇಶ ಕಟ್ಟುವ ಬದ್ಧತೆಯಿಂದ ಜಾರಿಗೆ ತಂದ ದೂರದೃಷ್ಟಿ ಹಾಗೂ ಜನಪರ ಯೋಜನೆಗಳಾದ ಜನ್ ಧನ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ ಮತ್ತು ಆಯುಷ್ಮಾನ್ ಭಾರತ್‌ ನಂತಹ ಪ್ರಮುಖ ಯೋಜನೆಗಳು ದೇಶದ ಕೋಟ್ಯಂತರ ಜನರನ್ನು ಸಬಲೀಕರಣಗೊಳಿಸಿವೆ. ಅಲ್ಲದೇ ಬ್ಯಾಂಕಿಂಗ್, ವಸತಿ, ಶುದ್ಧ ಇಂಧನ, ಶುದ್ಧ ಜಲ, ಆರೋಗ್ಯ ರಕ್ಷಣೆ ಹಾಗೂ ಸುರಕ್ಷತೆ ಸೇರಿದಂತೆ ಗ್ರಾಮೀಣ ಮೂಲಸೌಕರ್ಯಗಳನ್ನು ಒದಗಿಸಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಇದರಿಂದಾಗಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದು ಪ್ರತಿಯೊಬ್ಬ ನಾಗರಿಕನು ಗೌರವದಿಂದ ಬದುಕಲು ಅವಕಾಶ ಮಾಡಿಕೊಟ್ಟಿರುವುದು ಸದೃಢ ಹಾಗೂ ಸ್ವಾವಲಂಬಿ ಭಾರತವನ್ನು ಕಟ್ಟುತ್ತಿರುವ ನಮ್ಮ ಪ್ರಧಾನಿಗಳ ಬದ್ಧತೆಯನ್ನು ಸಾಕ್ಷಿಕರಿಸುತ್ತಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";