ಹನುಮಂತೇಗೌಡರ ಮೇಲೆ ಹಲ್ಲೆ ಮಾಡಿದ ಪಿಎಸ್ಐ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶುಕ್ರವಾರ ತಡ ರಾತ್ರಿ ರಸ್ತೆ ಬದಿ ನಿಂತಿದ್ದ ಬಿಜೆಪಿ‌ಮುಖಂಡ ಸೇರಿ ಇತರೆ ಮೂರು ಮಂದಿಗೆ ಮನೆಗೆ ತೆರಳುಲು
ಪೊಲೀಸರ ಸೂಚನೆ ನೀಡುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ಪಿಎಸ್ಐ ನಿಂಧಿಸಿ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ನಗರದಲ್ಲಿ ಜರುಗಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡ ಕೂಡ ಪ್ರತಿ ದಾಳಿ ಮಾಡಿ ಪಿಎಸ್ಐ ಮೇಲೆ ಹಲ್ಲೆ ಮಾಡಿರುವುದು ಕೂಡ ಜರುಗಿದೆ. ಈ ಹಿನ್ನೆಲೆಯಲ್ಲಿ ಇಡೀ ರಾತ್ರಿ ಮತ್ತು ಭಾನುವಾರ ಇಡೀ ದಿನ ಚಿತ್ರದುರ್ಗದಲ್ಲಿ ಹೈ ಡ್ರಾಮ ನಡೆಯಿತು.

 ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ರಸ್ತೆ ಬಳಿ ಹನುಮಂತೇಗೌಡ ಮತ್ತು ಇತರೆ ಇಬ್ಬರು ಸ್ನೇಹಿತರು ಆರೋಗ್ಯ ಸಮಸ್ಯೆ ಚರ್ಚೆ ಮಾಡುತ್ತಾ ನಿಂತಿರುವ ಸಂದರ್ಭದಲ್ಲಿ ರಾತ್ರಿ ಗಸ್ತು ಪೊಲೀಸರು ಆ ಜಾಗಕ್ಕೆ ಆಗಮಿಸಿದ್ದಾರೆ.
ಆರಂಭದಲ್ಲಿ ಪಿಎಸ್ಐ ಗಾದಿ ಲಿಂಗ ಗೌಡರ್ ಮತ್ತು ಹನುಮಂತೇಗೌಡರ ಮಧ್ಯ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭದಲ್ಲಿ ಏಕಾಏಕಿ ಪಿಎಸ್ಐ ಗಾದಿಲಿಂಗ ಗೌಡರ ಅವರು ಹನುಮಂತೇಗೌಡರ ಮೇಲೆ ಹಲ್ಲೆ ಮಾಡಿದ್ದಲ್ಲ ಅವಾಚ್ಯ ಶದ್ಬಗಳಿಂದ ನಿಂಧಿಸಿದ್ದಾರೆ. ಇದರಿಂದ ಕುಪಿತಗೊಂಡ ಬಿಜೆಪಿ‌ಮುಖಂಡ ಬಿ.ಸಿ ಹನುಮಂತೇಗೌಡ ಅವರು ಪಿಎಸ್ಐ ಗಾದಿ ಲಿಂಗ ಗೌಡರ ಮೇಲೆ ಹಲ್ಲೆ ಮಾಡಿದ್ದಾರೆ.

ಇದರಿಂದ ಮತ್ತೊಷ್ಟು ರೇಗಾಡಿದ ಪೊಲೀಸ್ PSI ಗಾದಿ ಲಿಂಗ ಗೌಡರ್ ಪೊಲೀಸ್ ಠಾಣೆಗೆ ಕರೆದೊಯ್ದು ಬೂಟ್ ಕಾಲಿನಲ್ಲಿ ಮರ್ಮಾಂಗ, ಎದೆ ಹೀಗೆ ಸಿಕ್ಕ ಸಿಕ್ಕ ಕಡೆ ಬಿಜೆಪಿ ಮುಖಂಡ ಹನುಮಂತೇಗೌಡರ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರು ಮಾಡಿದ ಹಲ್ಲೆಯಿಂದಾಗಿ ಕುಸಿದು ಬಿದ್ದ ಹನುಮಂತೆ ಗೌಡರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
 ಹಲ್ಲೆ ಮಾಡಿದ ಪಿಎಸ್ಐ ಗಾದಿ ಲಿಂಗ ಗೌಡರ ಅವರೂ ಕೂಡಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಗೌಡ ಯಾರು?
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ ಹನುಮಂತೆ ಗೌಡ, ಎಂಟೆಕ್ ಪದವೀಧರನಾಗಿದ್ದು ಎಸ್ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸಹಾಯಕ ಪ್ರಾಧ್ಯಾಪಕ ವೃತ್ತಿ ಮಾಡುತ್ತಲೇ ಎಬಿವಿಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ
ಹನುಮಂತೇ ಗೌಡ ಚಿತ್ರದುರ್ಗ ನಗರದ ಮರುಳಪ್ಪ ಬಡಾವಣೆ ನಿವಾಸಿಯಾಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಹನುಮಂತೇಗೌಡರ ವಿರುದ್ಧ ಪಿಎಸ್ಐ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ಆದರೆ ಹನುಮಂತೇಗೌಡರ ಮೇಲೆ ಪಿಎಸ್ಐ ಹಲ್ಲೆ ಮಾಡಿದ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿಲ್ಲ.

 

Share This Article
error: Content is protected !!
";