ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ತಾಲೂಕು ರೈತಸಂಘದ ಅಧ್ಯಕ್ಷರಾಗಿ ಕಳೆದ ಐದು ವರ್ಷದ ಹಿಂದೆ ನನ್ನನ್ನು ಆಯ್ಕೆ ಮಾಡಿದಾಗಿನಿಂದ ತಾಲೂಕಿನ ಪ್ರತಿಹಳ್ಳಿಯಲ್ಲೂ ರೈತಸಂಘದ ಶಾಖೆಯನ್ನು ಪ್ರಾರಂಭಿಸಿ ತಾಲೂಕಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳಾದ ನೀರಾವರಿ, ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಮಸ್ಯೆ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಅನೇಕ ರೀತಿಯ ಚಳುವಳಿ ಹೋರಾಟ ಮಾಡುತ್ತಾ ರೈತರಿಗೆ ಸರ್ಕಾರದಿಂದ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಭೆ ವತಿಯಿಂದ ಕರೆಯಲಾಗಿದ್ದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ಈಗ ನಾನು ಜಿಲ್ಲೆಯ ಅಧ್ಯಕ್ಷರಾಗಿ ಎಲ್ಲಾ ತಾಲೂಕು ಪದಾಧಿಕಾರಿಗಳು ನನ್ನನ್ನು ಆಯ್ಕೆ ಮಾಡಿರುವುದರಿಂದ ಜಿಲ್ಲೆಯಲ್ಲಿರುವ ಅನೇಕ ಜ್ವಾಲೆಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ ಮುಂದಿನ ದಿನಗಳಲ್ಲಿ ನನಗೆ ಕೊಟ್ಟಂತ ಸಹಕಾರವನ್ನು ತಾಲೂಕು ಅಧ್ಯಕ್ಷರಿಗೆ ಎಲ್ಲರಿಗೂ ಸಹಕಾರ ನೀಡಬೇಕೆಂದು ಸಭೆಗೆ ತಿಳಿಸಿದರು.
ನಂತರ ಜಿಲ್ಲಾ ಕಾರ್ಯ ಅಧ್ಯಕ್ಷರಾದ ಸಿದ್ದವೀರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮದಿಂದಲೂ ರೈತರು ಸಂಘಟಿತರಾಗಿ ನಮಗೆ ಸಂವಿಧಾನಾತ್ಮಕವಾಗಿ ಸಿಗುವ ಹಕ್ಕುಗಳನ್ನು ಕೇಳದೆ ಇದ್ದರೆ ಯಾವುದೇ ಸರ್ಕಾರ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಕೊಡುವುದಿಲ್ಲ ನಮ್ಮ ಜಿಲ್ಲೆಗೆ ನೀರಾವರಿ ವಿಚಾರವಾಗಿ ಪ್ರತಿ ತಾಲೂಕಿನಲ್ಲೂ ಸಂಘಟಿತವಾಗಿ ಹೋರಾಟ ಮಾಡಬೇಕು,
ಅದರಲ್ಲಿ ಹಿರಿಯೂರು ತಾಲೂಕು ಬಹಳಷ್ಟು ಮಂಚೂಣಿಯಲ್ಲಿ ಇವೆ ಈಗ ಕೇಂದ್ರ ಅಂತರ್ಜಲ ಸಂಶೋಧನಾ ಮಂಡಳಿಯವರು ಅಧ್ಯಯನದ ಪ್ರಕಾರ ನಮ್ಮ ಜಿಲ್ಲೆ ಬರಿ ಅಪಾಯಕಾರಿ ಪರಿಸ್ಥಿತಿಯಲ್ಲಿದೆ ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಮುಗಿಸಿ ಜಿಲ್ಲೆಯ ಎಲ್ಲಾ ಕೆರೆಗೂ ನೀರು ತುಂಬಿಸುವಂತಹ ಕೆಲಸವನ್ನು ಮಾಡುವಂತೆ ಒತ್ತಾಯಿಸಿ ಚಳುವಳಿ ರೂಪಿಸಬೇಕು
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ದುಬಾರಿ ಶುಲ್ಕ ವಸುಲಾತಿ ಮಾಡುತ್ತಿದ್ದಾರೆ ಇತ್ತ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ವಿದ್ಯಾಭ್ಯಾಸ ಕೊಡುತ್ತಿಲ್ಲ ಆದ್ದರಿಂದ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ತುಂಬಾ ಕಷ್ಟಕರವಾಗಿದೆ ಇದರ ಬಗ್ಗೆ ಶಿಕ್ಷಣ ಇಲಾಖೆ ಮುಂಭಾಗದಲ್ಲಿ ಚಳುವಳಿ ರೂಪಿಸುವ ಮೂಲಕ ಸರ್ಕಾರದ ಒತ್ತಾಯಿಸಲಾಗುವುದು ಎಂದರು
ಇದೇ ಸಂದರ್ಭದಲ್ಲಿ ತಾಲೂಕು ಗೌರವ ಅಧ್ಯಕ್ಷರಾಗಿ ತಿಮ್ಮಾರೆಡ್ಡಿ ಬಬ್ಬೂರ್ ಫಾರಂ, ತಾಲೂಕು ಅಧ್ಯಕ್ಷರಾಗಿ ಆಲೂರು ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ನಂದಿಹಳ್ಳಿ ರಂಗಸ್ವಾಮಿ, ಕಾರ್ಯ ಅಧ್ಯಕ್ಷರಾಗಿ ಹೊಸಕೆರೆ ಜಯಣ್ಣ, ಆಲೂರು ವೀರಣ್ಣಗೌಡ, ಮೀಸೆತಿಮ್ಮಯ್ಯ, ಸೂರ್ಯಗೊಂಡನಹಳ್ಳಿ, ರಾಜಪ್ಪ ಕೆಆರ್ ಹಳ್ಳಿ, ಉಪಾಧ್ಯಕ್ಷರಾಗಿ ಜಗನ್ನಾಥ್ ರಂಗೇನಹಳ್ಳಿ ,ಗಿರೀಶ್ ದಿಂಡಾವರ, ವೆಂಕಟೇಶ್ ಬಳಗಟ್ಟ, ಚಿಕ್ಕಣ್ಣ ಬೀರೇನಹಳ್ಳಿ, ಸಹ ಕಾರ್ಯದರ್ಶಿಯಾಗಿ ಚಂದ್ರಪ್ಪ ಕಣಜನಹಳ್ಳಿ, ಶಿವಣ್ಣ ಆನಸಿದ್ರೆ, ಗಿರೀಶ್ ಉಚ್ಚವನಹಳ್ಳಿ, ಗೋವಿಂದಪ್ಪಬೀರನಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಹನುಮಂತರಾಯಪ್ಪಸಾಲುಣಿಸೆ, ರಮೇಶ್ ರಂಗಾಪುರ, ಸುರೇಶ್ ಕೆಂಚಯ್ಯನಹಟ್ಟಿ, ರಾಜಪ್ಪ ಇಂಡಸ್ ಕಟ್ಟೆ, ವೀರೇಶ್ ಮದನಕುಂಟೆ,
ಮತ್ತು ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ರಾಮಕೃಷ್ಣ ಜುಲೈನಹಟ್ಟಿ, ಶಿವಣ್ಣ ಬಬ್ಬೂರ್ ಫಾರಂ, ನಾಗರಾಜು ಹಾದಿರಾಳು, ರಂಗನಾಥ್ ಮದ್ದಿಹಳ್ಳಿ, ಜಿಲ್ಲಾ ಸಮಿತಿ ಪದಾಧಿಕಾರಿಗಳಾಗಿ ಅರಳಿಕೆರೆ ತಿಪ್ಪೇಸ್ವಾಮಿ, ಸಣ್ಣತಿಮ್ಮಣ್ಣ ದಿಂಡಾವರ, ರಾಮಣ್ಣ ಸೂರಗೊಂಡನಹಳ್ಳಿ, ಆರ್ ಕೆ ಗೌಡ್ರು, ಮಂಜ ನಾಯಕ್ ಕುರುಬರಹಳ್ಳಿ, ತಾಲೂಕು ಹಸಿರು ಸೇನೆ ಸಮಿತಿ ಮಂಜುನಾಥ್ ಜೂಲೈನ ಹಟ್ಟಿ, ನಾರಾಯಣಗೌಡ ನಂದಿಹಳ್ಳಿ, ಜಿಲ್ಲಾ ಹಸಿರು ಸೇನೆ ಸಮಿತಿ ನಾಗರಾಜ್ ರಂಗನಾಥಪುರ, ಬಾಲಕೃಷ್ಣ ಜೂಲೈನ ಹಟ್ಟಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.