ರಸ್ತೆ ವಿಸ್ತರಣೆ ಸಂಬಂಧ ಪರಿಹಾರ ನೀಡಲು ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಸ್ತೆ ಅಗಲೀಕರಣ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿ ಕಟ್ಟಡವನ್ನು ಒಡೆಯಲಿ ಎಂದು ಕಟ್ಟಡ ಮಾಲೀಕ ಎಚ್.ಎಸ್ ಪ್ರಶಾಂತ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು  ನ್ಯಾಯಾಲಯದಲ್ಲಿ ಕಟ್ಟಡ ಮಾಲೀಕರ ಕಟ್ಟಡಗಳನ್ನು ಎದುರುದಾರರು ಒಡೆಯುವಂತಿಲ್ಲ, ಹಾಗೂ ರಸ್ತೆ ಅಗಲೀಕರಣಕ್ಕೆ ಕಾನೂನಿನ ನಿಯಮ ಪಾಲಿಸಿ ಅಗಲೀಕರಣ ಮಾಡಬೇಕೆಂದು ಆದೇಶಿಸಿರುತ್ತದೆ.

ಏಕಾಏಕಿ ಕಟ್ಟಡ ಒಡೆಯುವುದು ಸಮಂಜಸವಲ್ಲ ಪರಿಹಾರ ನೀಡಿ ವಿಸ್ತರಣೆ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು. ಸಂಬಂಧಪಟ್ಟವರು ಇದಕ್ಕೆ ಯಾವುದೇ ಕೋರ್ಟಿನ ಆಜ್ಞೆ ಇಲ್ಲ ಎಂದು ಅಪ ಪ್ರಚಾರ ಮಾಡುತ್ತಿದ್ದು ಮಾನ್ಯ ಉಚ್ಛ ನ್ಯಾಯಾಲಯದ ಆದೇಶವನ್ನು  ಗಾಳಿಗೆ ತೂರಿ ನ್ಯಾಯಾಲಯಕ್ಕೆ ಅಗೌರವ ತೋರುತ್ತಿದ್ದಾರೆ.

ಹಿರಿಯೂರು ನಗರದಲ್ಲಿ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ನಮಗೆ ಅನ್ಯಾಯವಾಗುತ್ತಿದೆ ಕೆಲವು ಕಟ್ಟಡ ಮಾಲೀಕರು 1956 57 ರಲ್ಲಿ ನಿವೇಶನಗಳನ್ನು ಸರ್ಕಾರದಿಂದ ಜಿಲ್ಲಾಧಿಕಾರಿಯವರ ಸೇಲ್ ಡೀಡ್ ಪ್ರಕಾರ ಹರಾಜಿನಲ್ಲಿ ಕೊಂಡುಕೊಂಡಿರುತ್ತಾರೆ.

ಮತ್ತು ಕೆಲವು ಕಟ್ಟಡ ಮಾಲೀಕರು 70,80 ವರ್ಷಗಳಿಂದ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸಿಕೊಂಡು ಬಂದಿರುತ್ತಾರೆ ಇವರಲ್ಲಿ 70,80 ವರ್ಷಗಳ ಹಿಂದಿನ ಮೂಲ ದಾಖಲಾತಿಗಳು ಇರುತ್ತವೆ. ಇಂತಹ ಆಸ್ತಿಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇನಾಮಿ ಆಸ್ತಿಗಳೆಂದು ಹೇಳತ್ತಿರುವುದು ದುರಾದೃಷ್ಟಕರ, ನಾವು ಕಂದಾಯ ಕಟ್ಟುತ್ತಾ ಬಂದಿದ್ದೇವೆ.

ಆದರೆ ಏಕಾಏಕಿಯಾಗಿ ನಗರಸಭೆಯವರು ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸುತ್ತಿದ್ದು ಕಟ್ಟಡಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವಂತೆ ನಗರಸಭೆಯ ವಾಹನದಲ್ಲಿ ಪ್ರಚಾರ ಪಡಿಸುತ್ತಿದ್ದಾರೆ. ನಮಗೆ ಪರಿಹಾರ ನೀಡದೆ ಕಟ್ಟಡ ಧ್ವಂಸ ಗೊಳಿಸಿದ್ದಲ್ಲಿ ಅದು ಕಾನೂನು ವಿರುದ್ಧವಾಗುತ್ತದೆ ಎಂದು  ಪತ್ರಿಕೆಗೆ ತಿಳಿಸಿದ್ದಾರೆ.

ಸಂವಿಧಾನಾತ್ಮಕವಾಗಿ ಮತ್ತು ನ್ಯಾಯಯುತವಾಗಿ ವಿಸ್ತರಣೆ ಮಾಡಲು ನಾವು ಸಹಕರಿಸುತ್ತೇವೆ. ಆದರೆ ಕಾನೂನು ಬಾಹಿರವಾಗಿ ವಿಸ್ತರಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿರುತ್ತಾರೆ.

ರಸ್ತೆ ವಿಸ್ತರಣೆ ಮಾಡಲು ಕಾನೂನಾತ್ಮಕವಾಗಿ ವಿಧಾನ ಸಭೆಯ ಅಧಿವೇಶನದಲ್ಲಿ ಆದೇಶವಾಗಬೇಕು, ಗೆಜೆಟ್ ನೋಟಿಪಿಕೇಶನ್ ಆಗಬೇಕು, ಮೌಲ್ಯ ದೃಢೀಕರಣವಾಗಿ ನಂತರ ಪರಿಹಾರ ನೀಡಿ ಕಾರ್ಯಾರಂಭಿಸಬೇಕು ಏಕಾಏಕಿ ಉಚ್ಛ ನ್ಯಾಯಾಲಯದ ತೀರ್ಪನ್ನೂ ವಿರೋಧಿಸಿ ಇಡೀ ಊರಿನ ರಸ್ತೆ ಅಂಗಡಿಗಳನ್ನು ದ್ವಂಸಗೊಳಿಸಿದ್ದಲ್ಲಿ ಅದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗುತ್ತದೆ.

ಆದಷ್ಟೂ 35 ಅಡಿಗೆ ರಸ್ತೆ ವಿಸ್ತರಣೆ ಮಾಡಿದರೆ ಅಂಗಡಿಗಳು ಉಳಿಯುತ್ತವೆ ರಸ್ತೆ ವಿಸ್ತರಣೆಯು ಆಗುತ್ತದೆ  ಅಂಗಡಿ ಮಾಲೀಕರಿಗೆ  ಅನುಕೂಲವಾಗುತ್ತದೆ ಅಂಗಡಿಗಳನ್ನು ಕಳೆದುಕೊಂಡು ನಾವು ಬೀದಿಗೆ ಬಂದರೆ ನಮ್ಮ ಸಾಲ, ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕೂ ತುಂಬಾ ತೊಂದರೆಯಾಗುತ್ತದೆ.

ಎಲ್ಲರೂ ದಯಾ ಮರಣ ಕೋರಬೇಕಾಗುತ್ತದೆ ಈಗಾಗಲೇ ಹಿರಿಯೂರಿನಲ್ಲಿ ಜೀವರ್ಗಿ ಚಾಮರಾಜನಗರ ಹೆದ್ದಾರಿಗೆ ಬೈಪಾಸ್ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಮತ್ತು ತಾಲ್ಲೂಕು ಕಛೇರಿ ಹಾಗೂ ತಾಲ್ಲೂಕು ಪಂಚಾಯ್ತಿ ಕಚೇರಿಗಳು ಸ್ಥಳಾಂತರಗೊಳ್ಳಲಿವೆ ನಂತರ ವಾಹನ ದಟ್ಟಣೆ ತಾನೇತಾನಾಗಿ ಕಡಿಮೆಯಾಗುತ್ತದೆ ಸಂಬಂಧಪಟ್ಟವರು ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎಚ್.ಎಸ್ ಪ್ರಶಾಂತ್, ಜಿ.ಎಸ್ ಕಿರಣ್, ಮಂಜುನಾಥ್, ಕಮಲೇಶ್, ಸೀತಾರಾಮ ರೆಡ್ಡಿ, ವಿಶ್ವೇಶ್ವರ ಉಡುಪ, ಪುರುಷೋತ್ತಮ್, ರವೀಂದ್ರನಾಥ್, ರಾಧಿಕಾ ಮತ್ತಿತರರು ಇದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";