ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಐಕ್ಯೂಎಸಿ ಸಹಯೋಗದಲ್ಲಿ ಜೂನ್ 02ರಂದು ಬೆಳಿಗ್ಗೆ 10.30ಕ್ಕೆ ನಗರದ ಸ್ಟೇಡಿಯಂ ರಸ್ತೆಯ ಜಿ.ಜಿ.ಸಮುದಾಯ ಭವನದಲ್ಲಿ “ಪ್ರತಿಭೋತ್ಸವ ಸಮಾರಂಭ” ಹಮ್ಮಿಕೊಳ್ಳಲಾಗಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು “ಮಹಿಳಾ ಸಿರಿ” ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಬಹುಮಾನ ವಿತರಣೆ ಮಾಡುವರು. ಹಿರಿಯ ವಕೀಲೆ ಡಿ.ಕೆ.ಶೀಲಾ ಸಮಾರೋಪ ಭಾಷಣ ಮಾಡುವರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಅಧ್ಯಕ್ಷತೆ ವಹಿಸುವರು.
ಮಹಿಳಾ ಸಿರಿ ವಾರ್ಷಿಕ ಸಂಚಿಕೆ ಸಂಪಾದಕ ಡಾ.ಡಿ.ಓ.ಸಿದ್ದಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಶಿವಣ್ಣ, ಅಧ್ಯಾಪಕರ ಸಂಘ ಕಾರ್ಯದರ್ಶಿ ಡಾ.ಪಿ.ಎನ್.ಮಧುಸೂದನ, ಐಕ್ಯೂಎಸಿ ಸಂಚಾಲಕ ಹಲಸಂದಿ ಸತೀಶ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಹೆಚ್.ಶಕುಂತಲ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಎಂ.ಗಿರೀಶ್, ಕ್ರೀಡಾ ಸಮಿತಿ ಸಂಚಾಲಕ ಆರ್.ಶಿವಪ್ರಸಾದ್, ಪತ್ರಾಂಕಿತ ವ್ಯವಸ್ಥಾಪಕ ಆರ್.ವೆಂಕಟೇಶ್ ಉಪಸ್ಥಿತರಿರುವರು.
ಬಿ.ಕಾಂ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದ ಎಂ.ಜೆ.ಸಿಂಧು ಹಾಗೂ ಬಿಎ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದ ಎಂ.ಎಸ್.ದೀಪಾ ಅವರನ್ನು ಸನ್ಮಾನಿಸಲಾಗುವುದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ತಿಳಿಸಿದ್ದಾರೆ.