ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ಮಾಡಿದ ಆಂಧ್ರಪ್ರದೇಶದ ಸ್ಪೀಕರ್ ಮತ್ತು ಉಪಸಭಾಪತಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸಂಸತ್ತಿನ  ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಕಛೇರಿಗೆ ಆಂಧ್ರಪ್ರದೇಶದ ಸ್ಪೀಕರ್ ಚಿಂತಕಾಯಲ ಅಯ್ಯಣ್ಣ ಪತ್ರುಡು ಅವರು ಮತ್ತು ಉಪಸಭಾಪತಿ ರಘು ರಾಮ ಕೃಷ್ಣರಾಜು ಅವರು ಭೇಟಿ ಮಾಡಿ ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

- Advertisement - 

ಉಕ್ಕು ಮತ್ತು ಭಾರೀ ಕೈಗಾರಿಕೆಗಳ ವಲಯದಲ್ಲಿ ಸಹಯೋಗವನ್ನು ಬಲಪಡಿಸುವ ಕುರಿತು ಆಂದ್ರಪ್ರದೇಶದ ನಾಯಕರೊಂದಿಗೆ ಅರ್ಥಪೂರ್ಣ ಚರ್ಚೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. 

- Advertisement - 

ನಾಯಕರು ತಮ್ಮ ಭೇಟಿಯ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಆಶೀರ್ವಾದವನ್ನೂ ಪಡೆದರು.

ಈ ಸಂದರ್ಭದಲ್ಲಿ ಜೊತೆಯಾದ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಮತ್ತು ಕೋಲಾರ ಸಂಸದ ಮಲ್ಲೇಶ್ ಬಾಬು ಪ್ರಗತಿಯನ್ನು ಚಾಲನೆ ಮಾಡುವ ದೂರದೃಷ್ಟಿಯ ನಾಯಕರೊಂದಿಗೆ

- Advertisement - 

ಸಂವಹನ ನಡೆಸಲು ಯಾವಾಗಲೂ ಸಂತೋಷವಾಗುತ್ತದೆ! ಎಂದು ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

 

Share This Article
error: Content is protected !!
";