ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ತುಳಸಿ ಕಲ್ಯಾಣ ಮಂಟಪದಲ್ಲಿ ಡಾ.ಬಾಬು ಜಗಜೀವನ್ ರಾಮ್ ಯುವಕ ಸಂಘದ ಉದ್ಘಾಟನೆ ಹಾಗೂ 2024-25ನೇ ಸಾಲಿನ ಮಾದಿಗ ಸಮಾಜದ ಎಸ್‍ಎಸ್‍ಎಲ್‍ಸಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರಿಗೂ ಮತ್ತು ನಗರಸಭೆ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗ, ಹರಳಯ್ಯ ಸ್ವಾಮಿಜಿಗಳು ಹಾಗೂ ಷಡಕ್ಷರಮುನಿ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿ ಮಾತನಾಡಿದರು. ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್, ಚಲನಚಿತ್ರದ ನಟ ಚೇತನ್ ಭಾಗವಹಿಸಿ ಮಾತನಾಡಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಎಲ್. ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಉದ್ಯಮಿಗಳು ಹಾಗೂ ಕಾಂಗ್ರೆಸ್ ಮುಖಂಡ ಆಸಿಫ್ ಅಲಿ ಆದಿವಾಲ, ಕಂದಿಕೆರೆ ಜಗದೀಶ್, ಪ್ರಕಾಶ್, ತಿಪ್ಪಮ್ಮ, ನಾಗರಾಜ್, ಜೀವೇಶ್, ಕಿರಣ್ ಪಟ್ರಳ್ಳಿ, ಕೃಷ್ಣಮೂರ್ತಿ, ಕೃಷ್ಣಾಪುರ ನಾಗರಾಜ್, ವಕೀಲರು ಸ್ವಾಮಿ, ಕುಮಾರ್, ನಂದಕುಮಾರ್, ಮಾರುತಿ, ನಾಗರಾಜ್, ಹರೀಶ್ ಕುಮಾರ್, ಪ್ರದೀಪ್ ಕಂಬದಹಳ್ಳಿ ರಂಗಸ್ವಾಮಿ ಇನ್ನು ಮುಂತಾದವರು ಭಾಗವಹಿಸಿದರು.