ಔಷಧಿ ತಯಾರಿಕಾ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬಾಣಂತಿಯರು ಮತ್ತು ಶಿಶುಗಳ ಸಾವಿನ ವರದಿಗಳ ಆಧಾರದ ಮೇಲೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್
ಅವರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದರು ಎಂದು ಕಾಂಗ್ರೆಸ್ ತಿಳಿಸಿದೆ. ತನಿಖೆಯು ಮೆಡಿಕಲ್ ಕಂಪನಿಗಳು ಪೂರೈಸಿದ ಔಷಧಿಗಳ ಕಾರಣಕ್ಕೆ ಈ ಸಾವುಗಳು ಸಂಭವಿಸಿರುವುದನ್ನು ಬಹಿರಂಗಪಡಿಸಿದೆ.

- Advertisement - 

ಈ ಕುರಿತು ಸಚಿವರು ಗುಣಮಟ್ಟವಿಲ್ಲದ ಔಷಧಿ ತಯಾರಿಕಾ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಎರಡೆರಡು ಪತ್ರ ಬರೆದರೂ ಕೇಂದ್ರ ಸರ್ಕಾರ ಔಷಧಿಗಳನ್ನು ಪೂರೈಸಿದ ಕಂಪನಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲು, ಕಪ್ಪು ಪಟ್ಟಿಗೆ ಸೇರಿಸಲು ಮುಂದಾಗುತ್ತಿಲ್ಲ.

- Advertisement - 

ಇಂತಹ ಔಷಧ ಕಂಪನಿಗಳಿಂದ ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ನೂರಾರು ಕೋಟಿ ಸಂಗ್ರಹಿಸಿರುವುದು ಈ ಮೌನಕ್ಕೆ ಕಾರಣವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

 

- Advertisement - 

 

Share This Article
error: Content is protected !!
";