ಹಾಲು ಖರೀದಿಸುವ ವಿಚಾರದಲ್ಲೂ ಕೊಳಕು ರಾಜಕಾರಣ ಮಾಡುವ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನದಾತರ ಸ್ವಾಭಿಮಾನದ ಬದುಕಿಗೆ ಕೊಳ್ಳಿಯಿಟ್ಟಿರುವ ಕರ್ನಾಟತ ಕಾಂಗ್ರೆಸ್  ಸರ್ಕಾರ, ಹಾಲು ಖರೀದಿಸುವ ವಿಚಾರದಲ್ಲೂ ಕೊಳಕು ರಾಜಕಾರಣ ಮಾಡುತ್ತಿದೆ! ಎಂದು ಸರ್ಕಾರದ ನಡೆ ವಿರುದ್ಧ ಬಿಜೆಪಿ ಟೀಕಿಸಿದೆ.

- Advertisement - 

ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ದ್ವೇಷ ರಾಜಕಾರಣಕ್ಕೆ ಕಾಡಂಕನಹಳ್ಳಿ ರೈತರ ಬದುಕು ಮೂರಾಬಟ್ಟೆಯಾಗಿದೆ. ನೂರಾರು ಲೀಟರ್ ಹಾಲನ್ನು ಬೀದಿಗೆ ಚೆಲ್ಲಿ ರೈತರು  ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement - 

ಸಿದ್ದರಾಮಯ್ಯನವರೇ, ಕೂಡಲೇ ಬಡ ರೈತರ ಹಾಲು ಖರೀದಿಗೆ ಕ್ರಮ ವಹಿಸಿ! ಹಾಗೇ ಹಾಲು ಖರೀದಿ ವಿಚಾರದಲ್ಲಿ ಸಲ್ಲದ ರಾಜಕಾರಣ ಮಾಡುತ್ತಿರುವ ಸಚಿವರಿಗೂ ಸದಾಚಾರದ ಪಾಠ ಮಾಡಿ ಎಂದು ಬಿಜೆಪಿ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದೆ.

- Advertisement - 
Share This Article
error: Content is protected !!
";