ಸಿಲಿಕಾನ್‌ ಸಿಟಿ ಜನರಿಗೆ ಕತ್ತಲೆ ಭಾಗ್ಯ ಕರುಣಿಸಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಧನ ಸಚಿವ ಕೆ.ಜೆ ಜಾರ್ಜ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ
ಇದೇನಾ ನಿಮ್ಮ ಬ್ರ್ಯಾಂಡ್‌ಬೆಂಗಳೂರು ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಬ್ರ್ಯಾಂಡ್‌ಬೆಂಗಳೂರು ನೆಪದಲ್ಲಿ ಹಣ ಲೂಟಿ ಹೊಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಿಲಿಕಾನ್‌ಸಿಟಿ ಜನರಿಗೆ ಕತ್ತಲೆ ಭಾಗ್ಯ ನೀಡಿದೆ ಎಂದು ಜೆಡಿಎಸ್ ದೂರಿದೆ.
ಅಭಿವೃದ್ಧಿ ಮಾತು ಬಿಡಿ
, ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ತೇಪೆ ಹಾಕುವಲ್ಲಿಯೂ ವಿಫಲರಾಗಿರುವ ಉಸ್ತುವಾರಿ ಮಂತ್ರಿ ಡಿಕೆಶಿ ಅವರೇ ರಾತ್ರಿ ವೇಳೆ ಸಿಲಿಕಾನ್‌ಸಿಟಿಯನ್ನು ಕತ್ತಲಿನಲ್ಲಿ ಇಟ್ಟಿದ್ದೀರಿ.

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳು ಸಂಪೂರ್ಣವಾಗಿ ಹಾಳಾಗಿ ಕತ್ತಲುಮಯವಾಗಿದ್ದರೂ, ಇಂಧನ ಸಚಿವ ಕೆ.ಜೆ. ಜಾರ್ಜ್‌ಅವರಿಗೆ ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಡಿಕೆಶಿ ಹಾಗೂ ಕೆ.ಜೆ.ಜಾರ್ಜ್‌ಅವರೇ ನೈಟ್‌ರೌಂಡ್ಸ್‌ಹಾಕಿ ಒಮ್ಮೆ ನಗರ ಪ್ರದಕ್ಷಿಣೆ ಮಾಡಿ ಬೀದಿ ದೀಪಗಳನ್ನು ಸರಿಪಡಿಸಿ
, ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಸಂಚರಿಸುವ ಪ್ರಯಾಣಿಕರ ಜೀವವನ್ನು ಉಳಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

 

Share This Article
error: Content is protected !!
";