ಕಾಂಗ್ರೆಸ್ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಬಗ್ಗೆಯೂ ಗೌರವವಿಲ್ಲ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಬಗ್ಗೆಯೂ ಗೌರವವಿಲ್ಲ! ದೇಶದಲ್ಲಿ ಮತ ಬ್ಯಾಲೆಟ್ ಮೂಲಕ ಚುನಾವಣೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಮಾನ್ಯ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು,

- Advertisement - 

ಚುನಾವಣೆ ಸೋತಾಗ ಮಾತ್ರ ಇವಿಎಂ ಬಗ್ಗೆ ಆಕ್ಷೇಪ ಎತ್ತುವುದರ ಔಚಿತ್ಯದ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

- Advertisement - 

ಈಗಲಾದರೂ ಕರ್ನಾಟಕ ಕಾಂಗ್ರೆಸ್ ನಾಯಕರು ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಮತಯಂತ್ರಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡೋದು ಬಿಟ್ಟು ಚುನಾವಣಾ ವ್ಯವಸ್ಥೆಯನ್ನ, ಮತದಾರರನ್ನ, ಜನಾದೇಶವನ್ನ ಗೌರವಿಸುವುದನ್ನ ಕಲಿಯಲಿ ಎಂದು ಅಶೋಕ್ ಬುದ್ದಿ ಹೇಳಿದ್ದಾರೆ.

- Advertisement - 
Share This Article
error: Content is protected !!
";