ಒಳ ಮೀಸಲು ಜಾರಿಗಾಗಿ ತುದಿಗಾಲ ಮೇಲೆ ನಿಂತಿದ್ದ ಹೋರಾಟಗಾರರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ದತ್ತಾಂಶ ಸಂಗ್ರಹಣೆಗಾಗಿ ನ್ಯಾ. ನಾಗಮೋಹನ ದಾಸ್‌‍ಅವರ ಏಕ ಸದಸ್ಯ ಆಯೋಗ ನೀಡಿರುವ ಸಮೀಕ್ಷೆ ಹಾಗೂ ಶಿಫಾರಸ್ಸುಗಳ ವರದಿಯನ್ನು ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ಆಗಸ್ಟ್-19ರ ಮಂಗಳವಾರವೇ ಜಾರಿಗೆ ತರಲಿದ್ದಾರೆ ಎನ್ನುವ ಕಾತುರದಿಂದ ರಾಜ್ಯಾದ್ಯಂತ ಆಗಮಿಸಿದ್ದ ಒಳ ಮೀಸಲಾತಿ ಜಾರಿ ಹೋರಾಟಗಾರರು

ಫ್ರೀಡಂ ಪಾರ್ಕ್ ನಲ್ಲಿ ಸಂಜೆಯಾದರೂ ಒಂದಿಂಚು ಕದಲದೆ ಕಾಯುತ್ತಿದ್ದರು. ಒಳ ಮೀಸಲಾತಿ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಪೊಲೀಸ್ ರ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

- Advertisement - 

ಅದೂ ಅಲ್ಲದೆ ಎಲ್ಲ ಮುಖಂಡರು ಫ್ರೀಡಂ ಪಾರ್ಕ್ ಗೆ ಆಗಮಿಸಬೇಕೆಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ಮಾಧ್ಯಮಗಳ ಮೂಲಕ ಕರೆ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಮಾದಿಗ ಮುಖಂಡರು, ಹೋರಾಟಗಾರರು ಆಗಮಿಸಿ ಚಾತಕಪಕ್ಷಿಗಳಂತೆ ಬೆಳಿಗ್ಗೆಯಿಂದ ಕಾಯುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಸಂಪುಟಸಭೆ ಈಗ ನಡೆಯುತ್ತೇ, ಆಗ ನಡೆಯುತ್ತೇ ಎಂದು ತುದಿಗಾಲ ಮೇಲೆ ನಿಂತಿದ್ದರು. ಹೋರಾಟಗಾರರಲ್ಲಿ ಜಾತಿಗಣತಿ ಮತ್ತು ಒಳ ಮೀಸಲಾತಿಯ ಸಂಬಂಧಪಟ್ಟಂತ ಚರ್ಚೆಗಳು ತೀವ್ರಗೊಳ್ಳುತ್ತಿದ್ದವು. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ವಿಶೇಷ ಸಚಿವ ಸಂಪುಟ ಸಭೆ ಬಹುತೇಕ ತೀರ್ಮಾನ ಮಾಡಿ ಘೋಷಣೆ ಮಾಡಿಯೇ ತೀರುತ್ತದೆ ಎನ್ನುವ ಕಾತುರ ಹೆಚ್ಚಿತ್ತು.

- Advertisement - 

ಹಲವು ಮುಖಂಡರು ಗುಂಪು ಗುಂಪಾಗಿ ಚರ್ಚಿಸಿರುವುದು ಕುತೂಹಲ ಕೆರಳಿಸಿತ್ತು. ನ್ಯಾ. ನಾಗಮೋಹನ ದಾಸ್‌‍ಅವರ ಸಮೀಕ್ಷೆ ವರದಿಯನ್ನು ಸಚಿವ ಸಂಪುಟ ಸಭೆ ಇಂದೇ ಅಂಗೀಕರಿಸಲಿದೆ ಎನ್ನುವ ಆಶಾಭಾವನೆ ಇಮ್ಮಡಿಗೊಳಿಸಿತ್ತು.

ಇದರ ಮಧ್ಯ ಪರಿಶಿಷ್ಟ ಜಾತಿಗಳಲ್ಲಿ ವರದಿ ಅಂಗೀಕಾರಗೊಳ್ಳಬಾರದು ಎಂದು ಬಲಗೈ ಸಮುದಾಯ ಮುಖಂಡರಾದ ಸಚಿವರಾದ ಡಾ. ಜಿ ಪರಮೇಶ್ವರ್‌, ಎಚ್‌.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ ಅವರ ವಿರೋಧ ವ್ಯಕ್ತವಾಗುತ್ತಿತ್ತು. ಸಾಲದಕ್ಕೆ ಶಿವರಾಜ ತಂಗಡಗಿ, ವಿಧಾನಸಭೆಯ ಉಪಾಧ್ಯಕ್ಷ ರುದ್ರಪ ಲಮಾಣಿ ಅವರುಗಳು ಸಹ ಒಲ್ಲದ ಮನಸ್ಸು ಇದೆ ಎನ್ನುವ ಸುದ್ದಿ ಬೆಳಿಗ್ಗೆಯಿಂದ ಹರಿದಾಡುತ್ತಿತ್ತು.

 

 

Share This Article
error: Content is protected !!
";