ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌ಡಿ.ಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಕನಸಿನ “ಬ್ರ್ಯಾಂಡ್‌ಬೆಂಗಳೂರು”? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಎರಡು ವರ್ಷ ಕಳೆದರೂ ನಿಮ್ಮ ಸಾಧನೆ ಕಳಪೆ ಎಂಬುದು ಜಗಜ್ಜಾಹೀರಾಗಿದೆ. ತೇಲುತ್ತಿರುವ ಬೆಂಗಳೂರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯತೆಯನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಬ್ರ್ಯಾಂಡ್‌ಬೆಂಗಳೂರು ಹೆಸರಲ್ಲಿ ರಿಯಲ್‌ಎಸ್ಟೇಟ್‌ಮಾಫಿಯಾಗೆ ಒಳ್ಳೆ ಫಸಲು ತರುವ ಯೋಜನೆಯಾಗಿ ಮಾರ್ಪಟ್ಟಿದೆ. ಬೆಂಗಳೂರು ಹೆಸರಿನಲ್ಲಿ ಸಾವಿರಾರು ಕೋಟಿ ದುಡ್ಡು ಹೊಡೆದಿದ್ದೇ ಕಾಂಗ್ರೆಸ್‌ಸರ್ಕಾರದ 2 ವರ್ಷಗಳ ಸಾಧನೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಒಂದೆರಡು ಗಂಟೆ ಸುರಿದ ಮಳೆಗೆ ಸಿಲಿಕಾನ್‌ಸಿಟಿ ನೀರಿನಲ್ಲಿ ಮುಳುಗಿದ್ದು, ಮನೆಗಳು, ಗೋಡೆಗಳು ಕುಸಿದು ಜೀವಹಾನಿಯಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿ ನಾಗರಿಕರು ಜಾಗರಣೆ ಮಾಡುತ್ತಾ, ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ದೂರದೃಷ್ಟಿ ಇಲ್ಲದ ಸಿದ್ದರಾಮಯ್ಯ ಸರ್ಕಾರ, ರಾಜಧಾನಿಯ ಜನರ ನೆಮ್ಮದಿಯನ್ನು ದಿನೇ ದಿನೇ ಕಸಿಯುತ್ತಿದೆ. ಜನಸಾಮಾನ್ಯರು ಬದುಕಲು ಮಾಡಬೇಕಾದ ಕನಿಷ್ಠ ಮೂಲ ಸೌಕರ್ಯವನ್ನು ಕಲ್ಪಿಸುವಲ್ಲಿ ನಿಮ್ಮ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಜಲಾವೃತವಾಗಿರುವ ರಸ್ತೆಗಳು, ಗುಂಡಿ ಬಿದ್ದ ರಸ್ತೆಗಳು, ಎಲ್ಲೆಂದರಲ್ಲಿ ತುಂಬಿರುವ ಕಸದ ರಾಶಿ ಡಿಕೆಶಿಯ ಅಸಮರ್ಥತೆಯನ್ನು ಸಾಕ್ಷಿಕರಿಸುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.