ಮಹಿಳಾ ವಿಜಯಯಾತ್ರೆಯ ಸಂಕೇತ ‘ಶಕ್ತಿ’

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳಾ ವಿಜಯಯಾತ್ರೆಯ ಸಂಕೇತ ಇದು ಶಕ್ತಿಯ ಸಂಕಲ್ಪ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು 500 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿ ದಾಖಲೆ ಬರೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ 500ನೇ ಕೋಟಿಯ ಟಿಕೆಟ್‌ನ್ನು ಕುಮಾರಕೃಪಾ ರಸ್ತೆಯಲ್ಲಿರುವ ವಿಂಡ್ಸರ್ ಸರ್ಕಲ್ ಬಳಿ ಅವರು ವಿತರಿಸಿದರು.

- Advertisement - 

ಈ ಪ್ರಯಾಣ ಶಕ್ತಿ ಯೋಜನೆಯ ಯಶಸ್ಸು ಹಾಗೂ ಸದ್ಬಳಕೆಯ ಹೆಗ್ಗುರುತಾಗಿದೆ.  ಈವರೆಗಿನ ಒಟ್ಟು ಟಿಕೆಟ್‌ ಮೌಲ್ಯ 12 ಸಾವಿರ ಕೋಟಿ ರೂ. ದಾಟಿದ್ದು, ನಮ್ಮ ಸರ್ಕಾರದ ಗ್ಯಾರಂಟಿಗಳು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

- Advertisement - 
Share This Article
error: Content is protected !!
";