ಜಿಂಕೆ ಬೇಟೆಯಾಡಿದವರಿಗೆ ಮೂರು ವರ್ಷ ಜೈಲುವಾಸ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :

- Advertisement - 

ಜಿಂಕೆ ಬೇಟೆಯಾಡಿದ ಆರೋಪ ಹಾಗೂ ಅದರ ಮಾಂಸ ಸಾಗಣೆಗೆ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಕೋರ್ಟ್‌ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.  

- Advertisement - 

ಪ್ರಕರಣ ಸಂಬಂಧ ಒಟ್ಟು ನಾಲ್ವರಿಗೆ ತೀರ್ಥಹಳ್ಳಿಯ ಒಂದನೇ ಹೆಚ್ಚುವರಿ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿ ಆದೇಶ ಮಾಡಿದೆ.  

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಮಕ್ಕಿಬೈಲು ಗ್ರಾಮದ ಪ್ರಕಾಶ ಗೌಡ , ಹರೀಶ ಗೌಡ , ಎಸ್.ಅಂಬರೀಷ ಹಾಗೂ ಸಿಂಗನಬಿದಿರೆ ಸಮೀಪದ ಶೆಡ್ಗಾರು ಗ್ರಾಮದ ದಯಾನಂದ ಗೌಡ ಶಿಕ್ಷೆಗೊಳಗಾದವರು ಎಂದು ತಿಳಿದು ಬಂದಿದೆ. 

- Advertisement - 

2018ರ ಆಗಸ್ಟ್ 2ರಂದು ಸಕ್ರೆಬೈಲು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಶೆಡ್ಗಾರು ರಸ್ತೆಯಲ್ಲಿ ಬರುತ್ತಿದ್ದ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ, ಅದರಲ್ಲಿ ಬೇಟೆ ಪತ್ತೆಯಾಗಿತ್ತು. ಅದರಲ್ಲಿದ್ದ ಚೀಲವೊಂದರಲ್ಲಿ 15 ಕೆ.ಜಿ. ಜಿಂಕೆ ಮಾಂಸ, ಕತ್ತಿ ಹಾಗೂ ಚೂರಿ ಪತ್ತೆಯಾಗಿತ್ತು.

 ಈ ಸಂಬಂಧ ಪ್ರಕರಣ ದಾಖಲಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಮುಗಿದು ಕೋರ್ಟ್‌ಆರೋಪಿಗೆ ಮೂರು ವರ್ಷ ಶಿಕ್ಷೆ ವಿಧಿಸಿದೆ.

 

 

Share This Article
error: Content is protected !!
";