ಕೃಷಿ ಸಖಿಯರಿಗೆ ಕೆ. ವಿ. ಕೆ ಯಲ್ಲಿ ತರಬೇತಿ ಶಿಬಿರ ಮುಕ್ತಾಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭಾ.ಕೃ.ಸಂ.ಪ – ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಅಭಿಯಾನ ಪ್ರಾಯೋಜನೆ ಇವರ ಸಹಯೋಗದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿಯರಿಗೆ) – ಕೃಷಿ ಜೀವನೋಪಾಯದ ಬಗ್ಗೆ ಆರು ದಿನಗಳ ತರಬೇತಿ ಕಾರ್ಯಕ್ರಮನ್ನು ದಿನಾಂಕ: 12.5.225 ರಿಂದ 17.5.225.ರವರೆಗೆ ಆಯೋಜಿಸಿಲಾಗಿತ್ತು.

- Advertisement - 

ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ.ಜಿ. ಹನುಮಂತರಾಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಶ್ರೀ ವಿಠಲ್ ಕಾವಳೆ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀಮತಿ ಮಂಜುಳ, ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದಲು ಆಯ್ಕೆಯಾದ ೩೩ ಕೃಷಿ ಸಖಿಯರಿಗೆ ಕೃಷಿ ಜೀವನೋಪಾಯದ ಬಗ್ಗೆ ಆರು ದಿನಗಳ ತರಬೇತಿಯನ್ನು ನೀಡಲಾಯಿತು.

- Advertisement - 

 ಮುಖ್ಯಸ್ಥ ಡಾ. ಬಿ.ಜಿ ಹನುಮಂತರಾಯ ತಾಂತ್ರಿಕ ತರಗತಿಯಲ್ಲಿ ಕೃಷಿ ಸಖಿಯರಿಗೆ ನರ್ಸರಿ ನಿರ್ವಹಣೆ ಮತ್ತು ತೋಟಗಾರಿಕಾ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು. ಡಾ. ವೆಂಕಟೇಗೌಡ, ಜೆ., ವಿಜ್ಞಾನಿ (ಬೇಸಾಯ ಶಾಸ್ತ್ರ) ರವರು ಮುಂಗಾರಿಗಾಗಿ ಭೂಮಿ ಸಿದ್ಧತೆ, ಬೆಳೆ ಪದ್ಧತಿಗಳು ಮತ್ತು ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು. ಮಣ್ಣು ವಿಜ್ಞಾನಿಯಾದ ಡಾ. ವೀರನಾಗಪ್ಪ ರವರು ಮಣ್ಣು ಆರೋಗ್ಯ ಪತ್ರ ಮತ್ತು ಅಭಿವೃದ್ಧಿ ಇಲಾಖೆಗಳೊಂದಿಗೆ ಸಹಯೋಗದ ಬಗ್ಗೆ ತಿಳಿಸಿಕೊಟ್ಟರು.

ಜೇನು ಕೃಷಿ ವಿಜ್ಞಾನಿಯಾದ ಡಾ. ಜಿ. ಈಶ್ವರಪ್ಪರವರು ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆ ಬಗ್ಗೆ ವಿವರಿಸಿದರು. ಶ್ರೀಮತಿ ಮೇಘನ, ಎಸ್.ವಿ. ರವರು ಪೌಷ್ಠಿಕ ಕೈತೋಟದ ಮಹತ್ವ ಮತ್ತು ವಿನ್ಯಾಸ ರಚನೆ ಬಗ್ಗೆ ಉಪನ್ಯಾಸ ನೀಡಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ರೆಡ್ಡಿ ಉಗ್ರಾಣದ ಕೀಟದ ವಿಧಗಳು ಮತ್ತು ನಿರ್ವಹಣೆಯ ಬಗ್ಗೆ ಹಾಗೂ ತರಕಾರಿ ಬೆಳೆಗಳಲ್ಲಿ ಕಂಡು ಬರುವ ಪ್ರಮುಖ ಕೀಟಗಳ ಬಗ್ಗೆ ಮಾಹಿತಿ ನೀಡಿದರು. 

- Advertisement - 

ತರಬೇತಿ ಸಂಯೋಜಕರು ಹಾಗೂ ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ.ಗೋಪಾಲ್, ರವರು ತರಬೇತಿಯ ಉದ್ದೇಶ, ಕ್ರಿಯಾ ಯೋಜನಾ ತಯಾರಿ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸುಗಮೀಕರಣ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಹೊಸಕೋಟೆ ತಾಲ್ಲೂಕಿನ ಆಲಪ್ಪನಹಳ್ಳಿ ಗ್ರಾಮದ   ರೈತ ಮನೋಹರ್ ಇದ್ದರು.ಈ ಸಂದರ್ಭದಲ್ಲಿ 33 ಕೃಷಿ ಸಖಿಯರಿಗೆ ಕೃಷಿ ಜೀವನೋಪಾಯದ ಬಗ್ಗೆ ತರಬೇತಿ ನೀಡಲಾಯಿತು.

 

Share This Article
error: Content is protected !!
";