ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ತುಂಗಾ ಡ್ಯಾಂ ಭರ್ತಿ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಕೊಡುವ ಮುನ್ನವೇ ಮುಂಗಾರು ಪೂರ್ವ ಮಳೆಗೆ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, 5 ಕ್ರಸ್ಟ್ ಗೇಟುಗಳ ಮೂಲಕ ನದಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement - 

 ತುಂಗಾ ಅಣೆಕಟ್ಟೆಗೆ 7,500 ಕ್ಯೂಸೆಕ್ ನೀರಿನ ಒಳ ಹರಿವು ಇರುವ ಕಾರಣ ಐದು ಕ್ರಸ್ಟ್ ಗೇಟ್​ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ಒಂದು ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಆಗ ಡ್ಯಾಂನಿಂದ ಇನ್ನಷ್ಟು ನೀರು ನದಿಗೆ ಬಿಡುವ ಸಾಧ್ಯತೆ ಇದೆ.

- Advertisement - 

ತುಂಗಾ ಅಣೆಕಟ್ಟು:
ಅತಿ ಚಿಕ್ಕ‌ ಅಣೆಕಟ್ಟುಗಳಲ್ಲಿ ತುಂಗಾ ಡ್ಯಾಂ ಕೂಡ ಒಂದು. ಅಣೆಕಟ್ಟೆಯ ಒಟ್ಟು ಎತ್ತರ 588.24 ಮೀಟರ್. ಹಾಲಿ ಅಣೆಕಟ್ಟೆಯಲ್ಲಿ 587.54 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟು ತುಂಬಲು ಒಂದು ಅಡಿ ಮಾತ್ರ ಬಾಕಿ ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದೆ.

ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಜಾಸ್ತಿ ಆಗುತ್ತಿದ್ದಂತೆಯೇ ಜಲಾಶಯದಲ್ಲಿ ಇರುವ ಬೃಂದಾವನ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಈಗ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾದ ಕಾರಣಕ್ಕೆ ನದಿಗೆ ನೀರು ಬಿಡಲಾಗುತ್ತಿದೆ.‌ ನದಿಗೆ ಒಟ್ಟು 2000 ಕ್ಯೂಸೆಕ್ ನೀರು ಬಿಡಲಾಗಿದೆ. ಅಣೆಕಟ್ಟೆಯಲ್ಲಿ 3.24 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ತುಂಗಾ ಮೇಲ್ಡಂಡೆ ಯೋಜನೆಯ ಇಂಜಿನಿಯರ್ ತಿಪ್ಪನಾಯ್ಕ್ ಮಾಹಿತಿ ನೀಡಿದ್ದಾರೆ.

- Advertisement - 

Share This Article
error: Content is protected !!
";