ಪರೀಕ್ಷಾ ಒತ್ತಡ ನಿರ್ವಹಣೆ ಕುರಿತು ಕಾರ್ಯಾಗಾರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನವೋದಯ ಚಾರಿಟಬಲ್ ಟ್ರಸ್ಟ್, ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರ  ಹಾಗೂ ಸುರನಾ ವೆಲ್‌ಬಿಂಗ್ ಸೆಂಟರ್ ಬೆಂಗಳೂರು ಇವರ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಒತ್ತಡ ನಿರ್ವಹಣೆ  ಕುರಿತು ತೂಬಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. 

- Advertisement - 

ಬೆಂಗಳೂರು ಸುರನಾ ವೆಲ್‌ಬಿಂಗ್ ಸೆಂಟರ್ ಮನೋವಿಜ್ಞಾನ ವಿಭಾಗದ ಶ್ರೇಯಾ ಬಿ.ಕೆ ವಿದ್ಯಾರ್ಥಿಗಳಿಗೆ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳ ಬಗ್ಗೆ  ಇರುವ ತಪ್ಪು ಅಭಿಪ್ರಾಯಗಳ ಕುರಿತು ಆ ಸಮಯದಲ್ಲಿ ಅನುಸರಿಸಬೇಕಾದ ಸರಿಯಾದ ಕ್ರಮಗಳು ಮಾನಸಿಕ ಪರಿಣಾಮಗಳ ಒತ್ತಡ ನಿರ್ವಹಣೆ ತಿಳಿಸಿಕೊಡಲಾಯಿತು.

- Advertisement - 

ಮನೋವಿಜ್ಞಾನ ವಿಭಾಗದ ವೈಷ್ಣವಿ.ಎಂ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಪರೀಕ್ಷಾ ಸಮಯದಲ್ಲಿ ಉಂಟಾಗುವ ಮಾನಸಿಕ ಒತ್ತಡ,ಪರೀಕ್ಷೆಗಳ ಸಮಯದಲ್ಲಿ ಅನುಭವಿಸುವ ಆತಂಕವನ್ನು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಅರಿಯುವಂತೆಯೂ, ಸಮಯ ನಿರ್ವಹಣೆ, ದೈರ‍್ಯವಂತಿಕೆ, ಉಸಿರಾಟದ ಕ್ರಮ ಮುಂತಾದ ಉಪಾಯಗಳನ್ನು ಬಳಸಿಕೊಂಡು ತಮಗೆ ತಾವೇ ಸಹಾಯ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿ  ವಿದ್ಯಾರ್ಥಿಗಳಿಗೆ

ಉತ್ಸಾಹಭರಿತ, ಅವರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ.

- Advertisement - 

ಇನ್ನು ಕಾರ್ಯಕ್ರಮದಲ್ಲಿ ೧೮೦ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು  ಅರಿವು  ಕಾರ್ಯ ನಡೆಸಿದರು. ಕಾರ್ಯಕ್ರಮದಲ್ಲಿ ಮನೋವಿಜ್ಞಾನಿಗಳಾದ  ಪ್ರೇರಣಾ. ವಿ, ಕಾರ್ಯಕ್ರಮದ ಸಂಯೋಜಕರಾದ ಜನಾರ್ಧನ್, ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಹಾಗೂ ಶಿಕ್ಷಕರಿಂದ ದವರು ಹಾಜರಿದ್ದರು.

 

 

Share This Article
error: Content is protected !!
";