ಪ್ರಾರ್ಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 1.50 ಲಕ್ಷ ಲಾಭ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ವಿ.ಎಸ್.ಎಸ್.ಎನ್ ಗೆ
1 ಲಕ್ಷದ 50 ಸಾವಿರ ಲಾಭ ಬಂದಿದ್ದು, ಸಂಘ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ, ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಣಾದಿಕಾರಿಗಳು ರೈತರಿಗೆ ಉತ್ತಮ ಸೇವೆ  ಕೊಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ನರಸೇಗೌಡ ಹೇಳಿದರು.

 ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ವಿವಿದ್ದೋದ್ದೇಶ ಪ್ರಾರ್ಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆ ಸಂಘದ ಅಧ್ಯಕ್ಷ ನರಸೇಗೌಡ ಸಮ್ಮುಖದಲ್ಲಿ ನಡೆಯಿತು.

- Advertisement - 

 ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಘದ ಅಧ್ಯಕ್ಷ ಮಾತನಾಡಿ ಈ ಹಿಂದೆ ಬಂಡವಾಳ ಇಲ್ಲದೆ ಸಂಘವು ನಷ್ಟದಲ್ಲಿತ್ತು ಆದರೆ ನಾವು ಬಂದ ಮೇಲೆ ಹೆಚ್ಚಿನ ಲಾಭ ತಂದಿದ್ದೇವೆ ಹಾಗು ರೈತರಿಗೆ ಹೆಚ್ಚಿನದಾಗಿ ಸಾಲ ನೀಡುತ್ತಿದ್ದೇವೆ, ರೈತರಿಗೆ ಬೇಕಾಗಿರುವ ರಸಗೊಬ್ಬರಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್. ಅರವಿಂದ್ ಮಾತನಾಡಿ, ಈ ಹಿಂದೆ ನಿಯೋಜನೆಗೊಂಡಿದ್ದ ಕಾರ್ಯದರ್ಶಿ ರಾಮ್ ಮೂರ್ತಿ  ಸಂಘದಲ್ಲಿ ಪಡಿತರ ವಿತರಣೆ ಅಕ್ರಮಗಳು ನಡೆದಿದ್ದು ಅಲ್ಲದೆ ರೈತ ಸಮುದಾಯಕ್ಕೆ ಸರಿಯಾದ ರೀತಿಯ ಸ್ಪಂದನೆ ಮಾಡುತ್ತಿರಲಿಲ್ಲ ಇದರಿಂದ ಆತನ ಮೇಲೆ ಕ್ರಿಮಿನಲ್ ಮುಖದಮ್ಮೆ ಕೇಸ್ ಹಾಕಲಾಗಿತ್ತು,

- Advertisement - 

ಆದರೆ ಇದೀಗ ಕೋರ್ಟ್ ನಲ್ಲಿದ್ದು ಇನ್ನೊಂದು ತಿಂಗಳಲ್ಲಿ ಕೇಸ್ ಮುಕ್ತಾಯವಾಗುತ್ತದೆ ಅವಾಗ ಪಡಿತರ ಚೀಟಿಗಳಿಗೆ ಆಹಾರವನ್ನು ಇಲ್ಲೇ ವಿತರಣೆ ಮಾಡಲು ವ್ಯವಸ್ಥೆ ಮಾಡುತ್ತೇವೆ, ಇನ್ನು ಸಂಘದಲ್ಲಿ ರೈತರಿಗೆ ಕೊಡುತ್ತಿರುವ ಸಾಲ ಸಾಕಾಗುವುದಿಲ್ಲ ಇನ್ನು ಜಾಸ್ತಿ ಮಾಡಬೇಕಾಗಿದೆ ಎಂದು ರೈತರು ಹೇಳುತ್ತಿರುವ ಮಾತಿಗೆ ಉತ್ತರ ಕೊಟ್ಟು ನಾನು ಬಿಡಿಸಿಸಿ ಬ್ಯಾಂಕ್ ಗೆ ತೆರಳಿ ರೈತರಿಗೆ ಜಾಸ್ತಿ ಸಾಲವನ್ನು ಕೊಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮವದಲ್ಲಿ ನಿವೃತ್ತ ಉಪತಹಶೀಲ್ದಾರ್ ವೆಂಕಟರಮಣಪ್ಪ, ಸಂಘದ ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಮುನಿರಾಜು, ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯ ಮುನಿಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಗಂಗರಾಜು,ಸಂಘದ ನಿರ್ದೇಶಕಿ ಅನ್ನಪೂರ್ಣಮ್ಮ, ನಾಗರತ್ನ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ. ಜಗದೀಶ್ ಹಾಗೂ ಅಕೌಂಟೆಂಟ್ ರೇಖಾ, ರುಕ್ಮಾನಂದ ಹಾಜರಿದ್ದರು.

 

 

Share This Article
error: Content is protected !!
";