ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕಾಂಗ್ರೆಸ್ ಗ್ಯಾರಂಟಿ ಎಂದರೆ ಬೋಗಸ್” ಎಂದು ಬಿಜೆಪಿ ದೂರಿದೆ. ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ನೀಡುವ 5kg ಅಕ್ಕಿಯನ್ನು ಬಿಟ್ಟು 10kg ಅಕ್ಕಿ ನೀಡುವುದಾಗಿ ಬುರಡೆ ಬಿಟ್ಟರು. ಚುನಾವಣೆ ನಂತರ ಪ್ರಧಾನಿ ಮೋದಿ ಸರ್ಕಾರ ನೀಡುತ್ತಿದ್ದ ಅಕ್ಕಿಯೇ ನಮ್ಮದೆಂದು ಸ್ಟಿಕ್ಕರ್ ಅಂಟಿಸಿ ಕೇವಲ 5kg ಅಕ್ಕಿಗೆ 2 ತಿಂಗಳು ಮಾತ್ರ ಫಲಾನುವಿಗಳಿಗೆ ಅಕ್ಕಿ ಬದಲು ಹಣ ಹಾಕಿ ಇದೀಗ ಚೊಂಬು ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೇವೆಂದು ಪತ್ರ ಬರೆದರೂ ಅಕ್ಕಿ ಖರೀದಿಸಲು ಮೀನಾಮೇಷ ಮಾಡಿ ಇದೀಗ ಪಡಿತರ ಅಂಗಡಿಗಳ ಮುಂದೆ ಅಕ್ಕಿ ಇಲ್ಲ ಎಂದು ನೋ ಸ್ಟಾಕ್ ಬೋರ್ಡ್ ಹಾಕಿದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ.
ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಸ್ಪತ್ರೆ ಸೇರುವ ಮುನ್ನವೂ ಗೃಹ ಲಕ್ಷ್ಮಿಯರ ಖಾತೆಗೆ ಹಣ ಹೋಗಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ತಿಂಗಳು ಕಳೆದರೂ ಹಣ ಮಾತ್ರ ಜಮೆ ಆಗುತ್ತಿಲ್ಲ ಎಂದರೆ, ಗ್ಯಾರಂಟಿಗಳು ವಾರಂಟಿ ಇಲ್ಲದೆ ಅಂತ್ಯವಾಗಿವೆ ಎಂದು ಅರ್ಥ! ಎಂದು ಬಿಜೆಪಿ ಟೀಕಿಸಿದೆ.