ಚಂದ್ರವಳ್ಳಿ ನ್ಯೂಸ್, ಮೈಸೂರು:
ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿ ಇತರೆ ಯೋಜನೆಗಳ ಫಲಾನುಭವಿಗಳಾಗಲು ಸಾಕಷ್ಟು ಮಾನದಂಡಗಳಿವೆ.
ಹೀಗಿರುವಾಗ ಮಹಿಳೆಯರಿಗೆ ಯಾವ ಮಾನದಂಡವಿಲ್ಲದೆ 2 ಸಾವಿರ ಹಣ ಹುಚ್ಚ ಕೊಡುತ್ತಾನಾ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿದ ವಿಶ್ವನಾಥ್ ಅವರು, ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡಿತಿಗೂ ಫ್ರೀ ಅಂತಾರೆ. ಇದು ಯಾರ ಅಪ್ಪನ ಮನೆ ದುಡ್ಡಲ್ಲ ಸಿದ್ದರಾಮಯ್ಯನವರೇ,
ಜನರ ತೆರಿಗೆ ಹಣ. ಈ ಮಂತ್ರಿಗಳೆಲ್ಲ ಯಾಕೆ ಬಾಯಿಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ. ಮಂತ್ರಿಗಳೇನು ಸಿಎಂ ಗುಲಾಮರಾ ಎಂದು ವಿಶ್ವನಾಥ್ ಕಿಡಿ ಕಾರಿದರು.

